NEET-UG 2025 ಫಲಿತಾಂಶಗಳಲ್ಲಿ ದೋಷವಿದೆ ಎಂದು ಆರೋಪಿಸಿ ಫಲಿತಾಂಶವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣವನ್ನು ಉಲ್ಲೇಖಿಸಿ, ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
ನೀಟ್ನಲ್ಲಿ ಕೇಳಲಾಗಿದ್ದ ಒಂದು ಪ್ರಶ್ನೆಯಲ್ಲಿ ದೋಷವಿದೆ. ಹೀಗಾಗಿ, ಫಲಿತಾಂಶಗಳಲ್ಲೂ ಏರುಪೇರು ಆಗಿದೆ. ಫಲಿತಾಂಶಕ್ಕೆ ತಡೆ ನೀಡಬೇಕು. ಕೌನೆಲ್ಸಿಂಗ್ ಪ್ರಕ್ರಿಯೆ ನಡೆಸದಂತೆ ಸೂಚಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ.ಎಸ್ ನರಸಿಂಹ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠವು, “ಎರಡು ದಿನಗಳ ಹಿಂದೆ ಇದೇ ರೀತಿಯ ಅರ್ಜಿಯನ್ನು ವಜಾಗೊಳಿಸಲಾಗಿದೆ. ಒಂದು ಪ್ರಶ್ನೆ ಪತ್ರಿಕೆ ಅಥವಾ ಪ್ರಶ್ನೆಯಲ್ಲಿ ಲೋಪ ಇರಬಹುದು ಎಂಬ ವಾದವನ್ನು ನಾವು ಒಪ್ಪುತ್ತೇವೆ. ಆದರೆ, ಲಕ್ಷಾಂತರ ಅಭ್ಯರ್ಥಿಗಳ ಬರೆಯುವ ಪರೀಕ್ಷೆಯಲ್ಲಿ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಇದು ಒಬ್ಬ ವ್ಯಕ್ತಿಯ ಪ್ರಕರಣವಲ್ಲ. ಸಾವಿರಾರು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ” ಎಂದು ಹೇಳಿದೆ.