ಪರಿಶಿಷ್ಟ ಜಾತಿಗಳಲ್ಲಿ (ಎಸ್‌ಸಿ) ಹೆಚ್ಚು ಹಿಂದುಳಿದ ವರ್ಗಗಳಿಗೆ ಒಳಮೀಸಲಾತಿ ಒದಗಿಸಲು ರಾಜ್ಯಗಳಿಗೆ ಅಧಿಕಾರವಿದೆ. ಜೊತೆಗೆ, ಒಳಮೀಸಲಾತಿಯಲ್ಲಿ ‘ಕ್ರೀಮಿ ಲೇಯರ್’ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪನ್ನು ಮರುಪರಿಶೀಲಿಸಲು ಕೋರಿ ಅಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಸಲ್ಲಿಸಲಾಗಿರುವ ಅರ್ಜಿಗಳು ಮೂಲ ಆದೇಶದಲ್ಲಿ ಲೋಪವಾಗಿದೆ ಎಂಬುದನ್ನು ತೋರಿಸುವಲ್ಲಿ ವಿಫಲವಾಗಿವೆ ಎಂದು ಹೇಳಿದೆ.
ಒಳಮೀಸಲಾತಿಗೆ ಸಂಬಂಧಿಸಿದಂತೆ ಆಗಸ್ಟ್ 1ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ನ 7 ನ್ಯಾಯಾಧೀಶರ ಸಂವಿಧಾನ ಪೀಠವು, “ರಾಜ್ಯ ಸರ್ಕಾರಗಳು ಎಸ್‌ಸಿ ಸಮುದಾಯದಲ್ಲಿ ಹೆಚ್ಚು ಹಿಂದುಳಿದವರನ್ನು ಗುರುತಿಸಬಹುದು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯೊಳಗೆ ಪ್ರತ್ಯೇಕ ಕೋಟಾಗಳೊಂದಿಗೆ ಒಳಮೀಸಲಾತಿ ನೀಡಬಹುದು” ಎಂದು ಹೇಳಿತ್ತು. ಸುಪ್ರೀಂ ತೀರ್ಪು ಬಂದ ಬಳಿಕ, ಒಳಮೀಸಲಾತಿಯಲ್ಲಿ ಕ್ರೀಮಿಲೇಯರ್ ಅಳವಡಿಕೊಳ್ಳುವ ಬಗ್ಗೆ ಹೆಚ್ಚು ಹಿಂದುಳಿದ ದಲಿತ ಸಮುದಾಯಗಳೂ ಸೇರಿದಂತೆ ಸಾಮಾಜಿಕವಾಗಿ ಅಸಮಾಧಾನ ವ್ಯಕ್ತವಾಗಿತ್ತು. ಅಲ್ಲದೆ, ಒಳಮೀಸಲಾತಿಗೂ ಕೆಲವು ವರ್ಗಗಳು ವಿರೋಧ ವ್ಯಕ್ತಪಡಿಸಿದ್ದವು. ಒಳಮೀಸಲಾತಿಯ ಆದೇಶವನ್ನು ಮರುಪರಿಶೀಲಿಸುವಂತೆ ಕೆಲವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅರ್ಜಿಗಳು ಮೂಲ ತೀರ್ಪಿನಲ್ಲಿನ ಲೋಪಗಳೇನು ಎಂಬುದರನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿವೆ. ಅಲ್ಲದ, ಹಿಂದಿನ ತೀರ್ಪಿನಲ್ಲಿ ಯಾವುದೇ ದೋಷಗಳು ಕಂಡುಬಂದಿಲ್ಲ ಎಂದು ಹೇಳಿದೆ.
“ಮರುಪರಿಶೀಲನಾ ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಆದರೆ, ಅರ್ಜಿಗಳಲ್ಲಿ ಹಿಂದಿನ ತೀರ್ಪಿನಲ್ಲಿನ ದೋಷಗಳಿವೆ ಎಂಬುದು ಕಂಡುಬಂದಿಲ್ಲ. ಸುಪ್ರೀಂ ಕೋರ್ಟ್ ನಿಯಮಗಳು-2013ರ ಆದೇಶ XLVII ನಿಯಮ 1ರ ಅಡಿಯಲ್ಲಿ ಪರಿಶೀಲನೆಗಾಗಿ ಯಾವುದೇ ಅರ್ಜಿಯನ್ನು ಅನುಮತಿಸಲಾಗಿಲ್ಲ. ಎಲ್ಲ ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ” ಎಂದು ಕೋರ್ಟ್ ಹೇಳಿದೆ.
ಮರುಪರಿಶೀಲನಾ ಅರ್ಜಿಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿದೆ. ಅರ್ಜಿಗಳನ್ನು ತಿರಸ್ಕರಿಸಿದೆ.
ಸುಪ್ರೀಂಕೋರ್ಟ್ ಒಳ ಮೀಸಲಾತಿ ನಿಯಮನು ಸಾರ ಜಾರಿ ಮಾಡುವ ಸಂಬಂಧ ಪಟ್ಟ ರಾಜ್ಯಗಳಿಗೆ ಅಧಿಕಾರ ನೀಡಲಾಗಿದೆ ಎಂದು ಆದೇಶಿಸಿದ ಸುಪ್ರೀಂಕೋರ್ಟ್ ತಿರ್ಪನ್ನ ಪ್ರಶ್ನೆಸಿ ಸಂವಿಧಾನ ವಿರೋಧಿಗಳು ಮರು ಪರಿಸೀಲನೆ ಮಾಡಿ ಎಂದು ತಕರಾರು ಅರ್ಜಿ ಆಕಿದ ಸಮಾಜದ ದ್ರೋಹಿಗಳಿಗೆ ಕಪಾಳ ಮೋಕ್ಷ ಮಾಡಿ ಬುದ್ದಿ ಕಲಿಸಿದೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯ ದೀಶರಿಗೆ👈 ಹೃತ್ಪೂರ್ವಕ ಅಭಿನಂದನೆಗಳು 🙏🙏✌✌