ಚುನಾವಣಾ ಬಾಂಡ್ ವಿಚಾರವಾಗಿ ಎಸ್‌ಬಿಐ ವಿರುದ್ಧ ಮತ್ತೆ ಗರಂ ಆಗಿರುವ ಸುಪ್ರೀಂ ಕೋರ್ಟ್, ಯಾವುದನ್ನೂ ಕೂಡ ಮುಚ್ಚಿಡದೆ ಎಲ್ಲ ಮಾಹಿತಿಯನ್ನು ಬಹಿರಂಗಗೊಳಿಸಿ ಎಂದು ಖಡಕ್ ಸೂಚನೆ ನೀಡಿದೆ.
ಚುನಾವಣಾ ಬಾಂಡ್ ಅರ್ಜಿಯ ಬಗ್ಗೆ ಇಂದು ಮತ್ತೆ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ, ಯಾವುದೇ ಮಾಹಿತಿಯನ್ನು ಹತ್ತಿಕ್ಕಲಾಗಿಲ್ಲ ಮತ್ತು ಮುಚ್ಚಿಟ್ಟಿಲ್ಲ ಎಂದು ಪ್ರಮಾಣೀಕರಿಸಿದ ಅಫಿಡವಿಟ್ ಅನ್ನು ಗುರುವಾರ ಸಂಜೆ 5 ಗಂಟೆಯೊಳಗೆ ಸಲ್ಲಿಸುವಂತೆಯೂ ಇದೇ ವೇಳೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಸ್ಪಷ್ಟ ಆದೇಶ ನೀಡಿದ್ದಾರೆ.
“…There is no manner of doubt that the SBI is required to furnish all details available with it. This, we clarify, will include the alphanumeric number and serial number, if any, of the bonds purchased. In order to avoid any controversy in the future, the chairperson of the… pic.twitter.com/RPOMiZvxTE
— Live Law (@LiveLawIndia) March 18, 2024
ಚುನಾವಣಾ ಆಯೋಗಕ್ಕೆ ಎಸ್‌ಬಿಐ ಸಲ್ಲಿಸಿರುವ ವಿಶಿಷ್ಟ ಸಂಖ್ಯೆಯ(Unique Alphanumeric Numbers) ಚುನಾವಣಾ ಬಾಂಡ್‌ಗಳ ಸಂಪೂರ್ಣ ವಿವರಗಳನ್ನು ಸಲ್ಲಿಸದಿರುವ ಬಗ್ಗೆ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆಯ ಸಂದರ್ಭದಲ್ಲಿ, ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸುವಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಪಕ್ಷಪಾತಿ ಆಗಬೇಡಿ(Selective) ಎಂದು ಕೂಡ ಇಂದಿನ ವಿಚಾರಣೆಯ ವೇಳೆ ಸ್ಪಷ್ಟ ಸೂಚನೆಯನ್ನು ಸುಪ್ರೀಂ ಕೋರ್ಟ್ ನೀಡಿದೆ.
ಬಾಂಡ್ ಸಂಖ್ಯೆಗಳು ಸೇರಿದಂತೆ ಎಲ್ಲ ವಿವರಗಳನ್ನು ಬಹಿರಂಗಪಡಿಸುವಂತೆ ನಾವು ಎಸ್‌ಬಿಐಗೆ ತಿಳಿಸಿದ್ದೇವೆ ಎಂದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್, ಯಾವುದೇ ಮಾಹಿತಿಯನ್ನು ಮರೆಮಾಚಿಲ್ಲ ಎಂದು ಅಫಿಡವಿಟ್ ಸಲ್ಲಿಸುವಂತೆಯೂ ಇದೇ ವೇಳೆ ಸೂಚಿಸಿದ್ದಾರೆ.
ಇದನ್ನು ಓದಿದ್ದೀರಾ? WPL 2024 | ಆರ್‌ಸಿಬಿ ಕಪ್ ಗೆಲ್ಲುತ್ತಿದ್ದಂತೆಯೇ ಪ್ರತ್ಯಕ್ಷವಾದ ವಿಜಯ್ ಮಲ್ಯ
“ಏನನ್ನು ಬಹಿರಂಗಪಡಿಸಬೇಕೆಂದು ಹೇಳಿ ನಾವು ಒದಗಿಸುತ್ತೇವೆ ಎಂಬಂತಹ ಧೋರಣೆಯನ್ನು ಎಸ್‌ಬಿಐ ಹೊಂದಿರುವಂತಿದೆ. ಇದು ಸರಿಯಲ್ಲ, ನಾವು ಎಲ್ಲ ವಿವರಗಳನ್ನು ಕೊಡಿ ಎಂದು ಈಗಾಗಲೇ ಹೇಳಿದ್ದೇವೆ. ಸ್ಪಷ್ಟವಾಗಿ ತಿಳಿಸಿದ ನಂತರ ನಿಮ್ಮಲ್ಲಿರುವ ಪ್ರತಿಯೊಂದು ಮಾಹಿತಿಯನ್ನು ಬಹಿರಂಗಗೊಳಿಸಬೇಕು. ಯಾವುದನ್ನೂ ಕೂಡ ಅದುಮಿಡಬೇಡಿ” ಎಂದು ಸಿಜೆಐ ಡಿವೈ ಚಂದ್ರಚೂಡ್ ಎಸ್‌ಬಿಐಗೆ ತಿಳಿಸಿದ್ದಾರೆ.