ಅಂಗವಿಕಲರ ಕುರಿತು ಹಾಸ್ಯ: ಕ್ಷಮೆಯಾಚಿಸಲು ಕಾಮಿಡಿಯನ್‌ಗಳಿಗೆ ಸುಪ್ರೀಂ ಸೂಚನೆ

Date:

Advertisements

ನೀವು ಮಾತುಗಳನ್ನು ವಾಣಿಜ್ಯೀಕರಣಗೊಳಿಸುವಾಗ ಯಾವುದೇ ಒಂದು ಸಮುದಾಯದ ಭಾವನೆಗಳನ್ನು ನೋಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂಗವಿಕಲರ ಕುರಿತು ಹಾಸ್ಯ ಮಾಡಿದ್ದಕ್ಕೆ ಸಮಯ್ ರೈನಾ ಸೇರಿದಂತೆ ಅನೇಕ ಕಾಮಿಡಿಯನ್‌ಗಳನ್ನು ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ ಮಾಲ್ಯಾ ಬಗ್ಚಿ ಅವರ ಪೀಠವು “ಕ್ಯೂರ್ ಎಸ್ಎಂಎ ಫೌಂಡೇಶನ್ ಆಫ್ ಇಂಡಿಯಾ” ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ನಡೆಸಿದೆ. ಈ ಸಂಸ್ಥೆಯು ಬೆನ್ನುಮೂಳೆಯ ಸ್ನಾಯು ಕ್ಷೀಣತೆ(ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಕಾಯಿಲೆ) ಯಿಂದ ಬಳಲುತ್ತಿರುವ ರೋಗಿಗಳಿಗೆ ಮತ್ತು ಕುಟುಂಬಗಳಿಗೆ ಸಹಾಯ ಮಾಡುತ್ತದೆ.

ಅಂಗವಿಕಲರ ಹಾಸ್ಯ ಕುರಿತ ಮನವಿಯನ್ನು ʼಇಂಡಿಯಾಸ್ ಗಾಟ್ ಲೇಟೆಂಟ್ʼ ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳ ಜೊತೆ ಸೇರಿಸಲಾಗಿದೆ. ಈ ಪ್ರಕರಣದಲ್ಲಿ ಯೂಟ್ಯೂಬರ್ ರಣವೀರ್ ಅಲಹಾಬಾದಿಯ ವಿರುದ್ಧ ದೂರು ದಾಖಲಾಗಿತ್ತು.

Advertisements

ಫೌಂಡೇಶನ್ ಪರವಾಗಿ ಹಿರಿಯ ವಕೀಲ ಅಪರಾಜಿತಾ ಸಿಂಗ್ ಹಾಜರಾಗಿ, “ಎಲ್ಲ ಕಾಮಿಡಿಯನ್‌ಗಳು ಈಗಾಗಲೇ ಕ್ಷಮೆ ಕೇಳಿದ್ದಾರೆ, ಇದು ಒಳ್ಳೆಯ ಬೆಳವಣಿಗೆ” ಎಂದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಲೆಮಾರಿ ಸಮುದಾಯಗಳಿಗೆ ಅನ್ಯಾಯ – ಜಾತಿಗಣತಿಯ ಮೇಲೂ ಕರಿನೆರಳು: ರಾಹುಲ್‌ ಗಾಂಧಿ ಗಮನಿಸುವರೇ?

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ಕಾಮಿಡಿಯನ್‌ಗಳು ಮತ್ತು ಇನ್ಫ್ಲುವೆನ್ಸರ್‌ಗಳಿಗಾಗಿ ಮಾರ್ಗಸೂಚಿಗಳನ್ನು ರೂಪಿಸಲು ಇನ್ನೂ ಸ್ವಲ್ಪ ಸಮಯ ಬೇಕು. ಆದರೆ ಸಂಪೂರ್ಣ ನಿಷೇಧವೇರಲು ಸಾಧ್ಯವಿಲ್ಲ ಎಂದು ಹೇಳಿದರು.

ನ್ಯಾಯಪೀಠವು ಮಾರ್ಗಸೂಚಿಗಳು ಕೇವಲ ಒಂದು ಘಟನೆಗೆ ಪ್ರತಿಕ್ರಿಯೆಯಾಗಿರಬಾರದು ಎಂದು ತಿಳಿಸಿದೆ. “ಭವಿಷ್ಯದ ಸವಾಲುಗಳನ್ನೂ ಗಮನದಲ್ಲಿಟ್ಟುಕೊಂಡು, ಸಮಗ್ರ ರೀತಿಯಲ್ಲಿ ಮಾರ್ಗಸೂಚಿಗಳನ್ನು ರೂಪಿಸಬೇಕು. ಈ ಬಗ್ಗೆ ತಜ್ಞರ ಅಭಿಪ್ರಾಯವೂ ಅಗತ್ಯ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.

“ಹಾಸ್ಯವು ಜೀವನದ ಒಂದು ಭಾಗ ಮತ್ತು ನಾವು ಹಾಸ್ಯ ಮಾಡಬಹುದು. ಆದರೆ ನೀವು ಇತರರನ್ನು ಗೇಲಿ ಮಾಡಲು ಪ್ರಾರಂಭಿಸಿದಾಗ, ಸೂಕ್ಷ್ಮತೆಯ ಉಲ್ಲಂಘನೆಯಾಗುತ್ತದೆ. ಭಾರತವು ವೈವಿಧ್ಯಮಯ ದೇಶವಾಗಿದೆ ಮತ್ತು ಇಂದಿನ ಕಾಮಿಡಿಯನ್‌ಗಳು ಮತ್ತು ಇನ್ಫ್ಲುವೆನ್ಸರ್ ಗಳು ಎಂದು ಕರೆಯಲ್ಪಡುವವರು ಭಾಷಣವನ್ನು ವಾಣಿಜ್ಯೀಕರಣಗೊಳಿಸುವಾಗ, ಒಂದು ಸಮುದಾಯವನ್ನು ಬಳಸಿಕೊಂಡು ಅವರ ಭಾವನೆಗಳನ್ನು ನೋಯಿಸಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾರ್ಖಂಡ್ | ಭೂಸ್ವಾಧೀನ ವಿವಾದ; ಮಾಜಿ ಸಿಎಂ ಚಂಪೈ ಸೊರೇನ್‌ ಗೃಹಬಂಧನ

ಜಾರ್ಖಂಡ್ ಸರ್ಕಾರದ ಬಹುಕೋಟಿ ವೆಚ್ಚದ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌...

ಬಿಹಾರದಲ್ಲಿ ಮತದಾರರ ಹಕ್ಕು ಯಾತ್ರೆ | ಬೈಕ್ ಏರಿದ ರಾಹುಲ್ ಗಾಂಧಿ; ಮತ ಕಳವು ವಿರುದ್ಧ ಆಕ್ರೋಶ

ಬಿಹಾರದ ಪೂರ್ನಿಯಾದಲ್ಲಿ ಭಾನುವಾರ ನಡೆದ 'ಮತದಾರರಿಗೆ ಅಧಿಕಾರ ಯಾತ್ರೆ'ಯಲ್ಲಿ ಕಾಂಗ್ರೆಸ್ ನಾಯಕ...

ಉತ್ತರ ಪ್ರದೇಶ | ದಲಿತ ಎಂಜಿನಿಯರ್‌ಗೆ ಶೂನಿಂದ ಹೊಡೆದ ಬಿಜೆಪಿ ಮುಖಂಡನ ಬಂಧನ

ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ದಲಿತ ಎಂಜಿನಿಯರ್‌ ಮೇಲೆ ಕಚೇರಿಯೊಳಗೆ ಶೂನಿಂದ ಹಲ್ಲೆ...

5 ವರ್ಷಗಳಲ್ಲಿ ₹11,300 ಕೋಟಿ ಮೌಲ್ಯದ ಮಾದಕ ಜಾಲ ಪತ್ತೆ; ಅದಾನಿ ಬಂದರಲ್ಲಿ ಸಿಕ್ಕಿದ್ದೆಷ್ಟು?

ಏಳು ಪ್ರಕರಣಗಳಿಗೆ ಸಾಕ್ಷಿಯಾಗಿರುವ ಮುಂಬೈನ ನೆಹರೂ ಬಂದರು ಮೊದಲ ಸ್ಥಾನದಲ್ಲಿದೆ. ಮುಂದ್ರಾದ...

Download Eedina App Android / iOS

X