‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರಿಗೆ ಅಶ್ಲೀಲವಾಗಿ ಪ್ರಶ್ನೆಯನ್ನು ಕೇಳಿದ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅಲ್ಲಾಬಾಡಿಯಾ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸುಪ್ರೀಂ, “ರಣವೀರ್ ಮನಸ್ಸಿನಲ್ಲಿರುವ ಕೊಳಕನ್ನು ಯೂಟ್ಯೂಬ್‌ನಲ್ಲಿ ಕಕ್ಕಿದ್ದಾನೆ” ಎಂದು ಹೇಳಿದೆ.
ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಎನ್ ಕೋಟಿಶ್ವರ ಸಿಂಗ್ ಅವರನ್ನು ಒಳಗೊಂಡ ಪೀಠವು ಅಲ್ಲಾಬಾಡಿಯಾ ಬಂಧನಕ್ಕೆ ಸಂಬಂಧಿಸಿದ ಅರ್ಜಿಯನ್ನು ಇಂದು ಆಲಿಸಿದ್ದು, ರಣವೀರ್ ವಿರುದ್ಧ ಹೆಚ್ಚುವರಿ ಎಫ್‌ಐಆರ್‌ಗಳನ್ನು ದಾಖಲಿಸಿದಂತೆ ಸೂಚಿಸಿದೆ. ಇದರಿಂದಾಗಿ ಅಲ್ಲಾಬಾಡಿಯಾ ಸದ್ಯ ಬಂಧನದ ಭೀತಿಯಿಂದ ಹೊರಬಂದಿದ್ದಾರೆ.
ಇದನ್ನು ಓದಿದ್ದೀರಾ? ಪೋಷಕರ ಪ್ರತಿದಿನದ ಲೈಂಗಿಕ ಕ್ರಿಯೆ ನೋಡ್ತೀರಾ? ಮೋದಿ ಸಮ್ಮಾನಿತ ಯೂಟ್ಯೂಬರ್ ರಣವೀರ್ ನ ವಿಕೃತ ಪ್ರಶ್ನೆ!
ಕಳೆದ ವರ್ಷ ಕೇಂದ್ರ ಸರ್ಕಾರದಿಂದ ಯುವ ಕಂಟೆಂಟ್ ಕ್ರಿಯೇಟರ್ ಪ್ರಶಸ್ತಿಯನ್ನು ಗೆದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಸ್ತಿ ಪಡೆದ ಬಲಪಂಥೀಯ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹಾಸ್ಯನಟ ಸಮಯ್ ರೈನಾ ನಡೆಸಿಕೊಡುವ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ತೀರ್ಪುಗಾರಾಗಿದ್ದ ರಣವೀರ್ ಅಲ್ಲಾಬಾಡಿಯಾ ಸ್ಪರ್ಧಿಯೊಬ್ಬನಿಗೆ ಅಶ್ಲೀಲವಾಗಿ ಪ್ರಶ್ನೆ ಕೇಳಿದ್ದರು. “ನಿಮ್ಮ ತಂದೆ-ತಾಯಿ ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡುವ ಮೂಲಕ ದಿನ ದೂಡುತ್ತೀರಾ? ಅಥವಾ ನೀವು ಕೂಡ ಅವರೊಂದಿಗೆ ಸೇರಿಕೊಳ್ಳಲು ಇಚ್ಛಿಸುತ್ತೀರಾ?” ಎಂದು ಪ್ರಶ್ನಿಸಿದ್ದರು. ಇದರಿಂದ ಸ್ಪರ್ಧಿ ಮುಜುಗರಕ್ಕೊಳಗಾಗಿದ್ದು, ಉಳಿದ ತೀರ್ಪುಗಾರರ ಮಾತ್ರ ಚಪ್ಪಾಳೆ ತಟ್ಟಿದ್ದರು.
ಈ ಕುರಿತಾದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, “ದೇಶದಲ್ಲಿ ಇದು ಅಶ್ಲೀಲತೆಯಲ್ಲ ಎಂದಾದರೆ, ಮತ್ತೇನಿದು? ನೀವು ಬಳಸುತ್ತಿರುವ ಭಾಷೆ ಯಾವುದು ನೋಡಿ. ನಿಮಗೆ ಏನು ಬೇಕಾದರೂ ಮಾತನಾಡಲು ಪರವಾನಗಿ ಲಭಿಸಿದೆಯೇ” ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಅಶ್ಲೀಲ ಪ್ರಶ್ನೆ: ಯೂಟ್ಯೂಬರ್ ರಣವೀರ್ ಸೇರಿ 40 ಮಂದಿ ವಿರುದ್ಧ ಎಫ್‌ಐಆರ್ ದಾಖಲು
“ಈ ರೀತಿಯ ಖಂಡನೀಯ ನಡತೆ ಒಬ್ಬ ವ್ಯಕ್ತಿಯ ವೈಯಕ್ತಿಕ ಸನ್ನಡತೆ ಪ್ರಶ್ನೆ ಮಾತ್ರವಲ್ಲ, ಆತ ತನ್ನ ಪೋಷಕರನ್ನು ಕೂಡಾ ಅವಮಾನಿಸುತ್ತಿದ್ದಾನೆ. ಈ ವ್ಯಕ್ತಿಯ ಮನಸ್ಸಲ್ಲಿ ಕೊಳಕಿದ್ದು, ಅದನ್ನು ಈ ಕಾರ್ಯಕ್ರಮದ ಮೂಲಕ ಹರಡುತ್ತಿದ್ದಾನೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ನೀವು ಬಳಸಿದ ಪದವು ಪೋಷಕರು, ಸಹೋದರಿಯನ್ನು ನಾಚಿಕೆ ಪಡುವಂತದ್ದು. ಸಂಪೂರ್ಣ ಸಮಾಜವೇ ನಾಚಿಕೆ ಪಡುವಂತದ್ದು. ವಿಕೃತ ಮನಸ್ಸು. ನಿಮಗೆ ಮತ್ತು ನಿಮ್ಮೊಂದಿಗೆ ಇರುವವರ ವಿಕೃತಿಯನ್ನು ಬಹಿರಂಗಪಡಿಸಲಾಗಿದೆ” ಎಂದು ಪೀಠ ಹೇಳಿದೆ.
When @thetanmay exposed the 'spirituality' of @BeerBicepsGuy & called him a "Views Obsessed Mother Fcuking Capitalist"…. EVEN Tanmay would not have guessed how close to reality he was hitting.
— The DeshBhakt 🇮🇳 (@TheDeshBhakt) February 10, 2025
(BTW #RanveerAllahabadia knows his audience – he will end up with even more followers… pic.twitter.com/whwrjkpkpD
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಮಹಿಳಾ ಆಯೋಗ ಸೇರಿದಂತೆ ಹಲವು ಸಂಘಟನೆಗಳು ಅಲ್ಲಾಬಾಡಿಯಾ ಪ್ರಶ್ನೆಯನ್ನು ಖಂಡಿಸಿದ್ದರು. ಯೂಟ್ಯೂಬರ್ ರಣವೀರ್ ಸೇರಿದಂತೆ 40 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನು ರಣವೀರ್ ಅಲ್ಲಾಬಾಡಿಯಾ, ಸಮಯ್ ರೈನಾ, ಅಪೂರ್ವ ಮುಖಿಜಾ, ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್ ಮತ್ತು ಕಾರ್ಯಕ್ರಮದ ನಿರ್ಮಾಪಕರಿಗೆ ಮಹಿಳಾ ಆಯೋಗವು ಸಮನ್ಸ್ ಜಾರಿ ಮಾಡಿದೆ.
ಹಾಗೆಯೇ “ಈ ರೀತಿ ಅಶ್ಲೀಲವಾಗಿ ಮಾತನಾಡುವುದಕ್ಕೆ, ತನ್ನ ಅಶ್ಲೀಲ ವಿಚಾರಧಾರೆಗಳನ್ನು ಯೂಟ್ಯೂಬ್‌ನಲ್ಲಿ ಪ್ರಚಾರ ಮಾಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಲ್ಲಾಬಾಡಿಯಾ ಅವರಿಗೆ ಯುವ ಕಂಟೆಂಟ್ ಕ್ರಿಯೇಟರ್ ಪ್ರಶಸ್ತಿಯನ್ನು ನೀಡಿದ್ದಾರೆಯೇ” ಎಂದು ನೆಟ್ಟಿಗರು ಪ್ರಶ್ನಿಸಿದ್ದರು. ಜೊತೆಗೆ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಎಂಬ ಕಾರ್ಯಕ್ರಮದಲ್ಲಿ ಈ ರೀತಿಯೇ ಅಶ್ಲೀಲವಾಗಿ ಮಾತನಾಡುವ, ಅಶ್ಲೀಲತೆಯನ್ನೇ ಹಾಸ್ಯವೆಂದು ಚಿತ್ರಿಸಲಾಗುತ್ತಿದೆ. ಆದ್ದರಿಂದ 18 ಸಂಚಿಕೆಗಳನ್ನು ಕೂಡಾ ಯೂಟ್ಯೂಬ್‌ನಿಂದ ತೆಗೆದುಹಾಕಬೇಕು ಎಂದು ಸೈಬರ್ ಕ್ರೈಮ್ ಘಟಕವು ಸೂಚಿಸಿದೆ.
