ಇವಿಎಂನಲ್ಲಿ ಮತ ಚಲಾಯಿಸಿದ ನಂತರ ಮತದಾರರಿಗೆ ವಿವಿಪ್ಯಾಟ್ ಮೂಲಕ ಪರಿಶೀಲನಾ ಚೀಟಿ ನೀಡುವ ಪ್ರಕ್ರಿಯೆಗೆ ಕೋರಲಾಗಿದ್ದ ಎಲ್ಲ ಮನವಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತಾ ನೇತೃತ್ವದ ದ್ವಿಸದಸ್ಯ ಪೀಠ ಚುನಾವಣೆಗಳಲ್ಲಿ ಮತಪತ್ರಕ್ಕೆ ಹಿಂತಿರುಗುವ ಬೇಡಿಕೆಯನ್ನು ಸಹ ತಿರಸ್ಕರಿಸಿತು.
“ನಾವು ಮತ್ತೆ ಮತಪತ್ರ ತರುವ ಸಂಬಂಧಿತ ಅರ್ಜಿಗಳನ್ನು ತಿರಸ್ಕರಿಸಿದ್ದೇವೆ” ಎಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಸಂಜೀವ್ ಖನ್ನಾ ತಮ್ಮ ಆದೇಶದಲ್ಲಿ ತಿಳಿಸಿದರು.
ಮತದಾರರರಿಗೆ ವಿವಿ ಪ್ಯಾಟ್ ಪರಿಶೀಲನಾ ಗುರುತಿನ ಚೀಟಿ ಹಾಗೂ ಮತಪತ್ರ ಚುನಾವಣಾ ವ್ಯವಸ್ಥೆ ಜಾರಿಗೊಳಿಸುವಂತೆ ಸ್ವಯಂಸೇವಾ ಸಂಸ್ಥೆ ಎಡಿಆರ್ ಹಾಗೂ ಅಭಯ್ ಭಕ್‌ಚಾಂದ್ ಮತ್ತು ಅರುಣ್ ಕುಮಾರ್ ಅಗರ್‌ವಾಲ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಭಾರತದ ಚುನಾವಣಾ ಆಯೋಗ ಎರಡು ನಿರ್ದೇಶನಗಳನ್ನು ನೀಡಿದ್ದು, ಮತದಾನದ ನಂತರ ಚಿಹ್ನೆ ಬರುವ ಪ್ರಕ್ರಿಯೆ(ಎಸ್‌ಎಲ್‌ಯು) ಪೂರ್ಣಗೊಂಡ ನಂತರ ಎಸ್‌ಎಲ್‌ಯುವನ್ನು ಮುಚ್ಚಿಡಲಾಗುತ್ತದೆ. ಎಸ್‌ಎಲ್‌ಯು ಕನಿಷ್ಠ 45 ದಿನಗಳ ಅವಧಿಯವರೆಗೂ ಸಂಗ್ರಹಿಸಡಿಲಾಗುತ್ತದೆ ಎಂದು ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತಿಳಿಸಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೋಮುದ್ವೇಷ ಜಾಹೀರಾತು ನೀಡಿ ವಿಕೃತಿ ಮೆರೆದ ಬಿಜೆಪಿ
ಫಲಿತಾಂಶದ ನಂತರ ಅಭ್ಯರ್ಥಿಗಳು ಮನವಿ ಮಾಡಿದರೆ ಇಂಜಿನಿಯರ್‌ಗಳ ತಂಡ ಇವಿಎಂನ ಮೈಕ್ರೋ ಕಂಟ್ರೋಲರ್‌ಗಳಲ್ಲಿರುವ ಮತದಾನದ ಮಾಹಿತಿಯನ್ನು ಪರಿಶೀಲಿಸಬೇಕು. ಅಂತಹ ಮನವಿಗಳು ಫಲಿತಾಂಶ ಪ್ರಕಟಗೊಂಡ 7 ದಿನಗಳೊಳಗೆ ನಿರ್ಧಾರವಾಗಬೇಕು. ಮನವಿ ಮಾಡಿದ ಅಭ್ಯರ್ಥಿಗಳೇ ಪರಿಶೀಲನಾ ವೆಚ್ಚವನ್ನು ಭರಿಸಬೇಕು. ಒಂದು ವೇಳೆ ಇವಿಎಂನಲ್ಲಿ ಮಾಹಿತಿ ಅಳಿಸಿಹೋಗಿದ್ದರೆ ವೆಚ್ಚಗಳನ್ನು ವಾಪಸ್ ಮಾಡಬೇಕು ಎಂದು ನ್ಯಾಯಮೂರ್ತಿಗಳಾದ ಸಂಜಯ್ ಖನ್ನಾ ತಮ್ಮ ಆದೇಶದಲ್ಲಿ ತಿಳಿಸಿದರು.
ಒಂದು ವ್ಯವಸ್ಥೆಯನ್ನು ಕುರುಡಾಗಿ ಅಪನಂಬಿಕೆ ಮಾಡುವುದು ಅನಗತ್ಯ ಅನುಮಾನಗಳಿಗೆ ಕಾರಣವಾಗಬಹುದು. ಪ್ರಜಾಪ್ರಭುತ್ವವನ್ನು ಎಲ್ಲ ಆಧಾರಸ್ತಂಭಗಳ ನಡುವೆ ಸಾಮರಸ್ಯ ಹಾಗೂ ಶಾಂತಿಯೊಂದಿಗೆ ಕಾಪಾಡಿಕೊಳ್ಳಬೇಕು. ನಂಬಿಕೆ ಹಾಗೂ ಸಹಯೋಗದ ಸಂಸ್ಖೃತಿಯನ್ನು ಪೋಷಿಸುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಧನಿಯನ್ನು ನಾವು ಬಲಪಡಿಸಬೇಕು ಎಂದು ನ್ಯಾಯಮೂರ್ತಿ ದೀಪಂಕರ್ ದತ್ತಾ ತನ್ನ ತೀರ್ಪಿನಲ್ಲಿ ತಿಳಿಸಿದರು.
ಈ ವ್ಯವಸ್ಥೆಯು ಮತದಾರನನ್ನು ವಿಫಲಗೊಳಿಸುವುದಿಲ್ಲ ಎಂದು ಭರವಸೆಯಿಡುತ್ತೇನೆ ಹಾಗೂ ನಂಬುತ್ತೇನೆ. ಸಾರ್ವಜನಿಕರು ಮತ ಚಲಾಯಿಸುವ ಹಾಗೂ ಮತ ಎಣಿಕೆಯ ಸಂದರ್ಭದಲ್ಲಿ ಇದು ಸಂಪೂರ್ಣವಾಗಿ ಪ್ರತಿಫಲಿಸಲಿದೆ ಎಂದು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರು ತಮ್ಮ ಆದೇಶದಲ್ಲಿ ತಿಳಿಸಿದರು.
