ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಹಿಜಾಬ್, ಬುರ್ಕಾ, ಕ್ಯಾಪ್ ಅಥವಾ ಬ್ಯಾಡ್ಜ್‌ಗಳನ್ನು ಧರಿಸುವುದನ್ನು ನಿಷೇಧಿಸಿ ಮುಂಬೈನ ಖಾಸಗಿ ಕಾಲೇಜು ನೀಡಿದ್ದ ಸೂಚನೆಗೆ ಸುಪ್ರೀಂ ಕೋರ್ಟ್ ಶುಕ್ರವಾರ (ಆಗಸ್ಟ್ 9) ತಡೆ ನೀಡಿದೆ.
ಮುಂಬೈನ ಎನ್‌ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಮಧ್ಯಂತರ ಆದೇಶ ನೀಡಿದೆ. ಕಾಲೇಜು ನೀಡಿದ ಸೂಚನೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿತ್ತು. ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರ ಪೀಠವು ಕಾಲೇಜು ವಿಧಿಸಿರುವ ಈ ಷರತ್ತಿನ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದೆ.
“ಯಾರೂ ಕೂಡಾ ಧರ್ಮ ತಿಳಿಯುವಂತೆ ಇರಬಾರದೆ? ಏನಿದು” ಎಂದು ಪೀಠವು ಪ್ರಶ್ನಿಸಿದ್ದು, ಕಾಲೇಜನ್ನು ಪ್ರತಿನಿಧಿಸಿದ ಹಿರಿಯ ವಕೀಲ ಮಾಧವಿ ದಿವಾನ್, “ಇದೊಂದು ಖಾಸಗಿ ಸಂಸ್ಥೆ” ಎಂದರು.
ಇದನ್ನು ಓದಿದ್ದೀರಾ? ಹಿಜಾಬ್ ಹೋರಾಟಗಾರ್ತಿ ಅಲಿಯಾ ಅಸ್ಸಾದಿಗೆ ಶುಭಕೋರಿದ ಕೆ ರಘುಪತಿ ಭಟ್
ಈ ವೇಳೆ “ಕಾಲೇಜು ಯಾವಾಗಿನಿಂದ ಕಾರ್ಯನಿರ್ವಹಿಸುತ್ತಿದೆ” ಎಂದು ಸಂಜಯ್ ಕುಮಾರ್ ಪ್ರಶ್ನಿಸಿದ್ದಾರೆ. 2008ರಿಂದ ಕಾಲೇಜು ಅಸ್ತಿತ್ವದಲ್ಲಿದೆ ಎಂದು ಕಾಲೇಜು ಪರ ವಕೀಲರು ಹೇಳುತ್ತಿದ್ದಂತೆ ನ್ಯಾಯಮೂರ್ತಿ ಕುಮಾರ್, “ಇಷ್ಟು ವರ್ಷಗಳಿಂದ ಸೂಚನೆ ನೀಡಿರಲಿಲ್ಲ. ಈಗ ಇದ್ದಕ್ಕಿದ್ದಂತೆ ನಿಮಗೆ ಧರ್ಮದ ಬಗ್ಗೆ ತಿಳಿಯಿತೆ? ಇಷ್ಟು ವರ್ಷಗಳ ನಂತರ ನೀವು ಅಂತಹ ಸೂಚನೆಗಳನ್ನು ನೀಡುತ್ತಿರುವುದು ದುರದೃಷ್ಟಕರ” ಎಂದು ಹೇಳಿದರು.
“ತಿಲಕವನ್ನು ಧರಿಸಿದವರನ್ನು ಅನುಮತಿಸಲಾಗುವುದಿಲ್ಲ ಎಂದು ನೀವು ಹೇಳುತ್ತೀರಾ” ಎಂದು ಇದೇ ವೇಳೆ ನ್ಯಾಯಮೂರ್ತಿ ಖನ್ನಾ ಪ್ರಶ್ನಿಸಿದರು.
BREAKING | Supreme Court Stays Hijab Ban Imposed By Mumbai Private College |@DebbyJain
— Live Law (@LiveLawIndia) August 9, 2024
"Will you say that somebody wearing tilak will not be allowed?", SC asked during the hearing.#SupremeCourt #Hijab https://t.co/BxEbHGs5SH