ಕುಜ ದೋಷ: ಅತ್ಯಾಚಾರ ಸಂತ್ರಸ್ತೆಯ ಜಾತಕ ಪರಿಶೀಲನೆಗೆ ಸೂಚಿಸಿದ ಅಲಹಾಬಾದ್ ಹೈಕೋರ್ಟ್‌ಗೆ ಸುಪ್ರೀಂ ತಡೆ

Date:

Advertisements

ಅತ್ಯಾಚಾರ ಸಂತ್ರಸ್ತೆಯ ಕುಜ ದೋಷ ಅಧ್ಯಯನ ಮಾಡಲು ಲಖನೌ ವಿಶ್ವವಿದ್ಯಾನಿಲಯದ ಜ್ಯೋತಿಷ್ಯ ವಿಭಾಗಕ್ಕೆ ಸೂಚಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

ಮದುವೆಯ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯು ನಂತರದಲ್ಲಿ ಕುಜ ದೋಷ ನೆಪವೊಡ್ಡಿ ಮದುವೆ ತಿರಸ್ಕರಿಸಿದ್ದ. ಆರೋಪಿಯ ಜಾಮೀನು ಅರ್ಜಿ ನಿರ್ಧರಿಸುವ ಸಂದರ್ಭದಲ್ಲಿ ಅಲಹಾಬಾದ್‌ ಹೈಕೋರ್ಟ್ ಸಂತ್ರಸ್ತೆಯ ಕುಜದೋಷ ಅಧ್ಯಯನ ಮಾಡಲು ಲಖನೌ ವಿಶ್ವವಿದ್ಯಾನಿಲಯದ ಜ್ಯೋತಿಷ್ಯ ವಿಭಾಗಕ್ಕೆ ಸೂಚಿಸಿತ್ತು.

ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಪಂಕಜ್ ಮಿಥಾಲ್ ಅವರ ಪೀಠವು, ಜಾತಕ ಜ್ಯೋತಿಷ್ಯ ಮುಂತಾದವು ಕೋರ್ಟಿನ ಪರಿಗಣನೆಗೆ ಬರುವುದಿಲ್ಲ ಎಂದು ಹೇಳಿ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

Advertisements

ಹೈಕೋರ್ಟ್‌ನ ಲಖನೌ ಪೀಠವು ಮೇ 23 ರಂದು ನೀಡಿದ್ದ ಆದೇಶವನ್ನು ಗಮನಿಸಿದ ನಂತರ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿತ್ತು.

ಈ ಸುದ್ದಿ ಓದಿದ್ದೀರಾ? ತ್ರಿವಳಿ ರೈಲು ದುರಂತ ಸ್ಥಳಕ್ಕೆ ಪ್ರಧಾನಿ ಭೇಟಿ, ಮೃತರ ಕುಟುಂಬಗಳಿಗೆ 10 ಲಕ್ಷ ಪರಿಹಾರ; ಹಲವು ರೈಲುಗಳು ರದ್ದು

ಸುಪ್ರೀಂ ಕೋರ್ಟ್‌ನಲ್ಲಿ ಸಂತ್ರಸ್ತೆಯ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಹೈಕೋರ್ಟ್‌ನ ನಿರ್ದೇಶನವು ಗೊಂದಲವನ್ನುಂಟು ಮಾಡುತ್ತದೆ. ಈ ಕಾರಣದಿಂದ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿದ್ದರು.

“ಸುಪ್ರೀಂಕೋರ್ಟ್ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ತೆಗೆದುಕೊಳ್ಳುತ್ತದೆ. ಜಾಮೀನು ಅರ್ಜಿಯನ್ನು ನಿರ್ಧರಿಸುವಾಗ ಮೇ 23 ರಂದು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರು ನೀಡಿದ ಆದೇಶಕ್ಕೆ ನಾವು ತಡೆ ನೀಡುತ್ತೇವೆ ಮತ್ತು ಅರ್ಹತೆಯ ಮೇಲೆ ಜಾಮೀನು ಅರ್ಜಿಯನ್ನು ನಿರ್ಧರಿಸಲು ಹೈಕೋರ್ಟ್‌ಗೆ ಕೇಳುತ್ತೇವೆ. ಅಲ್ಲದೆ ಮೂರು ವಾರಗಳಲ್ಲಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ವಿಶ್ವವಿದ್ಯಾಲಯಕ್ಕೆ ಸೂಚಿಸಲಾಗಿದೆ” ಎಂದು ಪೀಠ ಹೇಳಿದೆ.

ಉತ್ತರಪ್ರದೇಶದಲ್ಲಿ ಮದುವೆಯಾಗುವುದಾಗಿ ಹೇಳಿ ನಂಬಿಸಿ ಅತ್ಯಾಚಾರವೆಸಗಿದ್ದ ಆರೋಪಿ, ನಂತರದಲ್ಲಿ ಆಕೆಗೆ ಕುಜದೋಷವಿದೆ ಎಂದು ಹೇಳಿ ಮದುವೆಯನ್ನು ನಿರಾಕರಿಸಿದ್ದ. ಆರೋಪಿಯನ್ನು ಅತ್ಯಾಚಾರದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಇದೇ ವೇಳೆ ಆರೋಪಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾನೆ. ಮೇ 23 ರಂದು ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಧೀಶರಾದ ಬ್ರಿಜ್ ರಾಜ್ ಸಿಂಗ್ ಅವರು ಅತ್ಯಾಚಾರ ಸಂತ್ರಸ್ತೆಗೆ ಕುಜ ದೋಷ ಇದೆಯೇ ಎಂಬುದನ್ನು ನಿರ್ಧರಿಸಲು ಆಕೆಯ ಜಾತಕವನ್ನು ಲಖನೌ ವಿಶ್ವವಿದ್ಯಾನಿಲಯದ ಜ್ಯೋತಿಷ್ಯ ವಿಭಾಗಕ್ಕೆ ಕಳುಹಿಸಲು ಆದೇಶಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಗವಿಕಲರ ಕುರಿತು ಹಾಸ್ಯ: ಕ್ಷಮೆಯಾಚಿಸಲು ಕಾಮಿಡಿಯನ್‌ಗಳಿಗೆ ಸುಪ್ರೀಂ ಸೂಚನೆ

ನೀವು ಮಾತುಗಳನ್ನು ವಾಣಿಜ್ಯೀಕರಣಗೊಳಿಸುವಾಗ ಯಾವುದೇ ಒಂದು ಸಮುದಾಯದ ಭಾವನೆಗಳನ್ನು ನೋಯಿಸಲು ಸಾಧ್ಯವಿಲ್ಲ...

ಲೈಂಗಿಕ ಕಿರುಕುಳ ಆರೋಪ; ಕೇರಳದ ಕಾಂಗ್ರೆಸ್‌ ಶಾಸಕ ಪಕ್ಷದಿಂದ ಅಮಾನತು

ಲೈಂಗಿಕ ಕಿರುಕುಳದ ಆರೋಪಗಳ ತೀವ್ರ ಚರ್ಚೆಯ ನಡುವೆ ಕಾಂಗ್ರೆಸ್ ಶಾಸಕ ರಾಹುಲ್...

ಸಮರ್ಪಕ ಮಾಹಿತಿ ನೀಡದೆಯೇ ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಮಾರಾಟ: ಗ್ರಾಹಕ ಹಕ್ಕು ಉಲ್ಲಂಘನೆ

ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್ ಬೆರೆಸಿ ಮಾರಾಟ ಮಾಡಬೇಕೆಂಬ ಕೇಂದ್ರ ಸರ್ಕಾರದ ಎಥೆನಾಲ್‌...

ಲಿಂಗ ತಾರತಮ್ಯ | ಮಹಿಳೆಯರಿಗಿಂತ ಅಧಿಕ ವೇತನ ಪಡೆಯುತ್ತಾರೆ ಪುರುಷ ನರ್ಸ್‌ಗಳು: ಅಧ್ಯಯನ ವರದಿ

ನರ್ಸಿಂಗ್ ಅನ್ನು ಹೆಚ್ಚಾಗಿ ಮಹಿಳೆಯರ ವೃತ್ತಿ ಎಂಬಂತೆ ನೋಡಲಾಗುತ್ತದೆ. ಆದ್ದರಿಂದಾಗಿ ಪುರುಷರು...

Download Eedina App Android / iOS

X