ಅಲಹಾಬಾದ್ ಹೈಕೋರ್ಟ್ ಮೊರೆ ಹೋಗುವಂತೆ ಉತ್ತರಪ್ರದೇಶದ ಸಂಭಲ್ ಶಾಹಿ ಜಾಮಾ ಮಸೀದಿ ನಿರ್ವಹಣೆ ಮಂಡಳಿಗೆ ಶುಕ್ರವಾರ ಸೂಚನೆ ನೀಡಿದೆ ಸುಪ್ರೀಮ್ ಕೋರ್ಟು.
ಹೈಕೋರ್ಟು ಈ ಸಂಬಂಧ ವಿಚಾರಣೆ ನಡೆಸಿ ಸೂಕ್ತ ಆದೇಶ ನೀಡುವ ತನಕ ತನ್ನ ವಿಚಾರಣೆಯನ್ನು ತಡೆಹಿಡಿಯುವಂತೆ ಸುಪ್ರೀಮ್ ಕೋರ್ಟು ಸಿವಿಲ್ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. ಈ ನಡುವೆ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡುವಂತೆ ಜಿಲ್ಲಾ ಆಡಳಿತಕ್ಕೆ ತಾಕೀತು ಮಾಡಿದೆ.
ಈ ನಡುವೆ ಮಸೀದಿಯ ಸರ್ವೆ ವರದಿ ಸಲ್ಲಿಕೆಯಾದರೆ ಅದನ್ನು ತೆರೆಯದೆ ಮೊಹರು ಮಾಡಿದ ಲಕೋಟೆಯಲ್ಲಿ ಮುಚ್ಚಿ ಇರಿಸುವಂತೆಯೂ ಆದೇಶ ನೀಡಿದೆ.
ಇತ್ತೀಚೆಗೆ ಕೆಳ ಹಂತದ ನ್ಯಾಯಾಲಯದ ಆದೇಶದ ಮೇರೆಗೆ ಪುರಾತತ್ವ ಇಲಾಖೆಯು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹಠಾತ್ತನೆ ಶಾಹಿ ಮಸೀದಿಯ ಸರ್ವೆಗೆ ಮುಂದಾಗಿತ್ತು. ಪರಿಣಾಮವಾಗಿ ಜರುಗಿದ ಕಲ್ಲುತೂರಾಟ ಹಿಂಸಾಚಾರದಲ್ಲಿ ಪೊಲೀಸರ ಗುಂಡಿಗೆ ನಾಲ್ವರು ಬಲಿಯಾಗಿದ್ದರು.
ಹಿಂದೂ ದೇವಾಲಯವನ್ನು ಕೆಡವಿ ಆ ಜಾಗದಲ್ಲಿ ಶಾಹಿ ಮಸೀದಿಯನ್ನು ಕಟ್ಟಲಾಗಿದ್ದು ಸರ್ವೆಗೆ ಆದೇಶ ನೀಡಬೇಕೆಂಬ ಅರ್ಜಿಯನ್ನು ಅಲಹಾಬಾದ್ ಸಿವಿಲ್ ನ್ಯಾಯಾಧೀಶರು ಪುರಸ್ಕರಿಸಿದ್ದರು. ಸರ್ವೆ ಆದೇಶವನ್ನು ಪ್ರಶ್ನಿಸಿ ಶಾಹಿ ಮಸೀದಿ ನಿರ್ವಹಣೆ ಮಂಡಳಿ ಸುಪ್ರೀಮ್ ಕೋರ್ಟ್ ಕದ ಬಡಿದಿತ್ತು.
ಮಂಡಳಿಯ ಅಹವಾಲು ಶುಕ್ರವಾರ ಮುಖ್ಯನ್ಯಾಯಮೂರ್ತಿ ಸಂಜೀವ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯಕುಮಾರ್ ಅವರ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತೀಯ ಜನತಾ ಪಕ್ಷಕ್ಕೆ ನೀತಿಯೂ ಇಲ್ಲ, ರೀತಿಯೂ ಇಲ್ಲ
‘ಶ್ರೀ ಹರಿಹರ ಮಂದಿರ’ವನ್ನು ಕೆಡವಿ ಅದೇ ಜಾಗದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದ್ದು ಸರ್ವೆ ಮಾಡಿಸುವಂತೆ ಎಂಟು ಮಂದಿ ಅರ್ಜಿದಾರರು ಇದೇ ತಿಂಗಳ 19ರಂದು ಅಲಹಾಬಾದ್ ಸಿವಿಲ್ ನ್ಯಾಯಾಲಯವನ್ನು ಕೋರಿದ್ದರು. ನ್ಯಾಯಾಲಯ ತಕ್ಷಣ ಸರ್ವೆ ಆದೇಶವನ್ನು ನೀಡಿತ್ತು. ಶಾಹಿ ಮಸೀದಿ ನಿರ್ವಹಣೆ ಮಂಡಳಿಗೆ ನೋಟಿಸನ್ನೂ ನೀಡಿ ಪ್ರತಿಕ್ರಿಯೆಯನ್ನೂ ಅಹ್ವಾನಿಸಿರಲಿಲ್ಲ.
ಏಕಪಕ್ಷೀಯವಾಗಿ ನೀಡಲಾದ ಈ ಆದೇಶವನ್ನು ಅದೇ ದಿನ ಮಧ್ಯಾಹ್ನ ಜಾರಿಗೊಳಿಸಲು ಜಿಲ್ಲಾಡಳಿತ ಮುಂದಾಗಿತ್ತು. ಸಂಜೆ ಆರರಿಂದ ಸರ್ವೆ ಆರಂಭಿಸಿ ರಾತ್ರಿ 8.30ರ ತನಕ ನಡೆಸಿತು. ಇದೇ ತಿಂಗಳ 24ರ ನಸುಕಿನಲ್ಲಿ ಎರಡನೆಯ ಸರ್ವೆಗೆಂದು ಬಂದು ಪ್ರಾರ್ಥನೆಗೆಂದು ಬಂದಿದ್ದವರನ್ನು ಹೊರಕ್ಕೆ ಕಳಿಸಲಾಯಿತು ಎಂದು ಶಾಹಿ ಮಸೀದಿ ಮಂಡಳಿ ಸುಪ್ರೀಮ್ ಕೋರ್ಟಿಗೆ ಸಲ್ಲಿಸಿದ್ದ ಅಹವಾಲಿನಲ್ಲಿ ತಿಳಿಸಿತ್ತು.
ಏನೇ ಬಡುಕೋಂಡರೂ ಬಿಜೆಪಿ ಈ ವಿಶಯಗಳನ್ನು ಬೆಳಸತಾನೇಯಿರತ್ತೇ, ಯಾವುದೇ ನ್ಯಾಯಾಲಯವೂ ಸ್ವತಂತಾರವಾಗಿರಲ್ಲಾ, ಸಾಬರನ್ನ ಉಣ್ಣದಿದ್ದರೇ ಬಿಜೇಪಿಗೆಲ್ಲಲ್ಲಾ, ದೇಶ ಎಕ್ಕುಟ್ಟೋಗತ್ತೇ