ತಮಿಳುನಾಡಿಗೆ ನೀಡಬೇಕಾದ 7.6 ಟಿಎಂಸಿ ಅಡಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂಬ ತಮಿಳುನಾಡು ಸರ್ಕಾರದ ಬೇಡಿಕೆಯನ್ನು ಸಿಡಬ್ಲ್ಯುಆರ್‌ಸಿ (ಕಾವೇರಿ ನೀರು ನಿಯಂತ್ರಣ ಸಮಿತಿ) ಸೋಮವಾರ ತಿರಸ್ಕರಿಸಿದೆ.
ಕಾವೇರಿ ಜಲವಿವಾದ ನ್ಯಾಯಮಂಡಳಿ (ಸಿಡಬ್ಲ್ಯೂಡಿಟಿ) ಅಧ್ಯಕ್ಷ ವಿನೀತ್ ಗುಪ್ತಾ ನೇತೃತ್ವದಲ್ಲಿ ಸಿಡಬ್ಲ್ಯೂಆರ್‌ಸಿ ಸಭೆ ನಡೆದಿದೆ. ತಮಿಳುನಾಡು-ಕರ್ನಾಟಕವು ಅಂತಾರಾಜ್ಯ ಗಡಿಯಲ್ಲಿರುವ ಬಿಳಿಗುಂಡುಲುನಲ್ಲಿ ತಮಿಳುನಾಡಿಗೆ ಹರಿಯುವ ನೀರಿನ ಹರಿವನ್ನು ಖಚಿತಪಡಿಸಿಕೊಳ್ಳಬೇಕು. ಪ್ರತಿದಿನ 1,000 ನೀರನ್ನು ಮೇ ವರೆಗೆ ಬಿಡುಗಡೆ ಮಾಡಬೇಕು ಎಂದು ಕರ್ನಾಟಕಕ್ಕೆ ಸೂಚಿಸಿದೆ.
ಇದಕ್ಕಾಗಿ ಕರ್ನಾಟಕ ಕೆಆರ್‌ಎಸ್, ಕಬಿನಿ, ಹರಿಣಿ ಮತ್ತು ಹೇಮಾವತಿಯಿಂದ ನೀರು ಬಿಡಬೇಕಾಗಿಲ್ಲ ಎಂದು ಸಿಡಬ್ಲ್ಯೂಡಿಟಿ ಹೇಳಿದೆ. ಕರ್ನಾಟಕದ ನಾಲ್ಕು ಪ್ರಮುಖ ಅಣೆಕಟ್ಟುಗಳಲ್ಲಿ ಪ್ರಸ್ತುತ ಸುಮಾರು 37 ಟಿಎಂಸಿ ಅಡಿ ನೀರು ಇದೆ.
ತಡವಾಗಿ ಬಿತ್ತನೆ ಮಾಡಿದ ಬೆಳೆಗಳಿಗೆ ರಾಜ್ಯಕ್ಕೆ ನೀರು ಬೇಕು ಎಂದು ತಮಿಳುನಾಡು ಅಧಿಕಾರಿಗಳು, ಒತ್ತಾಯಿಸಿದ್ದು, ಅದರ ಬೆಡಿಕೆಯನ್ನು ಸಮಿತಿ ತಿರಸ್ಕರಿಸಿದೆ.
“ತಮಿಳುನಾಡಿನಲ್ಲಿ ಬೆಳೆಗಳ ಕೊಯ್ಲು ಈಗಾಗಲೇ ಪ್ರಾರಂಭವಾಗಿದೆ. ಅಲ್ಲಿನ ನೀರಾವರಿಗಾಗಿ ಹೆಚ್ಚುವರಿ ನೀರು ಬಿಡುವ ಅಗತ್ಯವಿಲ್ಲ” ಎಂದು ಗುಪ್ತಾ ಅವರು ಹೇಳಿದ್ದಾರೆ.
“ತಮಿಳುನಾಡಿನ ಔಪಚಾರಿಕ ನೀರಾವರಿ ಅವಧಿಯು ಜನವರಿ 31ಕ್ಕೆ ಕೊನೆಗೊಂಡಿದೆ. ಬೆಳೆಗಳ ಕೊಯ್ಲು ಈಗಾಗಲೇ ಪ್ರಾರಂಭವಾಗಿದೆ. ಈಶಾನ್ಯ ಮಾನ್ಸೂನ್ ಮಳೆಯು ತಮಿಳುನಾಡಿನ ನೀರಿನ ಬೇಡಿಕೆಯನ್ನು ಕಡಿಮೆ ಮಾಡಿದೆ. ಆದರೆ, ಕರ್ನಾಟಕವು ಕಾವೇರಿ ಜಲಾನಯನ ಪ್ರದೇಶದಲ್ಲಿ ಬರಗಾಲದ ಪರಿಸ್ಥಿತಿ ಎದುರಿಸುತ್ತಿದೆ” ಎಂದು ಸಮಿತಿ ಹೇಳಿದೆ.
ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶವು ನೈಋತ್ಯ ಮಾನ್ಸೂನ್ ಮೇಲೆ ಅವಲಂಬಿತವಾಗಿದೆ. ಈ ಬಾರಿ ಮಾನ್ಸೂನ್ ಮಳೆ ಕೊರತೆಯಗಿದೆ. ತಮಿಳುನಾಡಿನ ಮೆಟ್ಟೂರು ಜಲಾಶಯದ ಜಲಾನಯನ ಪ್ರದೇಶಗಳು ಈಶಾನ್ಯ ಮಾನ್ಸೂನ್ ಮಳೆಯಿಂದ ನೀರಿನ ಪ್ರಯೋಜನ ಪಡೆದಿವೆ” ಎಂದು ಸಮಿತಿ ಗಮನಿಸಿದೆ.
“ಜನವರಿ31ರ ನಂತರ ತಮಿಳುನಾಡಿಗೆ ಹೆಚ್ಚುವರಿ ನೀರಿನ ಅಗತ್ಯವಿಲ್ಲ. ಫೆಬ್ರವರಿಯಲ್ಲಿ ತಮಿಳುನಾಡಿನಲ್ಲಿ ಬೆಳೆಗಳ ಕೊಯ್ಲು ಪ್ರಾರಂಭವಾಗಲಿದೆ. ಆದರೆ, ಕರ್ನಾಟಕವು ನದಿಯ ಪರಿಸರದಲ್ಲಿ ಹರಿವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ” ಎಂದು ಅಧ್ಯಕ್ಷ ಗುಪ್ತಾ ಹೇಳಿದ್ದಾರೆ.
ಸಿಡಬ್ಲ್ಯುಆರ್‌ಸಿ ಮುಂದಿನ ಸಭೆಯನ್ನು ಮಾರ್ಚ್ 21ರಂದು ನಿಗದಿಪಡಿಸಲಾಗಿದೆ.