ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಇಬ್ಬರು ಈಗಿನ ಮಾಜಿ ಮುಖ್ಯಮಂತ್ರಿಗಳಾದ (ಬಂಧನವಾದಾಗ ಮುಖ್ಯಮಂತ್ರಿ ಯಾಗಿದ್ದರು) ಅರವಿಂದ ಕೇಜ್ರಿವಾಲ್ ಮತ್ತು ಹೇಮಂತ್ ಸೊರೇನ್‌ರನ್ನು ಬಂಧಿಸಿದ್ದ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿ ಕಪಿಲ್ ರಾಜ್ ಅವರು ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.
45 ವರ್ಷದ ಕಪಿಲ್ ರಾಜ್ ಅವರು ಸುಮಾರು 16 ವರ್ಷಗಳ ಕಾಲ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅದರಲ್ಲಿ, ಕಳೆದ 8 ವರ್ಷಗಳಿಂದ ಇಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಇನ್ನೂ 15 ವರ್ಷಗಳ ಕಾಲ ಸೇವೆ ಸಲ್ಲಿಸಲು ಸಮಯವೂ ಇತ್ತು. ಆದರೂ, ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಈ ಲೇಖನ ಓದಿದ್ದೀರಾ?: HMT ಭೂಮಿ ಮಾರಾಟಕ್ಕೆ ಮೋದಿ-ಎಚ್‌ಡಿಕೆ ಸಂಚು: ಸುರ್ಜೇವಾಲಾ ಗಂಭೀರ ಆರೋಪ
ಭಾರತೀಯ ಕಂದಾಯ ಸೇವೆಗೆ (ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆಗಳು) ಅವರು ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಅವರ ರಾಜೀನಾಮೆಯನ್ನು ಭಾರತೀಯ ರಾಷ್ಟ್ರಪತಿಗಳು ಸ್ವೀಕರಿಸಿದ್ದಾರೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಂದ್ ಕೇಜ್ರಿವಾಲ್ ಮತ್ತು ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೊರೇನ್ ಅವರನ್ನು ಬಂಧಿಸಿದ್ದ ಇಡಿ ತಂಡದಲ್ಲಿ ಕಪಿಲ್ ರಾಜ್ ಕೂಡ ಇದ್ದರು. ಈ ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ವಿಚಾರಣೆ ಒಳಪಡಿಸಿದ್ದ ಸಮಯದಲ್ಲಿ, ಅವರನ್ನು ಪ್ರಶ್ನಿಸಲು ಪ್ರಮುಖ ಪ್ರಶ್ನಾವಳಿಗಳನ್ನು ಕಪಿಲ್ ರಾಜ್ ಸಿದ್ದಪಡಿಸಿದ್ದರು ಎಂದು ವರದಿಯಾಗಿದೆ.