ಈ ಕಾಲದಲ್ಲಿ ಮದುವೆ ಯಾವ ಕಾರಣಕ್ಕೆ ನಿಲ್ಲುತ್ತದೆ ಎಂಬುದನ್ನು ಹೇಳುವುದು ಕಷ್ಟಸಾಧ್ಯವಾಗಿದೆ. ಏಕೆಂದರೆ, ತೆಲಂಗಾಣದಲ್ಲಿ ವಧುವಿನ ಕಡೆಯವರು ಮಟನ್‌ನಲ್ಲಿ ‘ನಲ್ಲಿಮೂಳೆ’ ಹಾಕಿಲ್ಲ, ಇದರಿಂದ ನಮಗೆ ಅವಮಾನವಾಗಿದೆ ಎಂದು ವರನ ಕಡೆಯವರು ಮದುವೆಯನ್ನು ರದ್ದು ಮಾಡಿ ಹೊರನಡೆದ ಘಟನೆ ನಡೆದಿದೆ.
ವಧು ಮತ್ತು ವರರ ನಿಶ್ಚಿತಾರ್ಥ ನವೆಂಬರ್‌ನಲ್ಲಿ ನಡೆದಿತ್ತು. ವಧು ನಿಜಾಮಾಬಾದ್‌ನವರಾಗಿದ್ದರೆ, ವರ ಜಗತಿಯಾಲ್‌ನವರು. ವಧು – ವರರಿಬ್ಬರು ಮದುವೆಗೆ ಒಪ್ಪಿ ನಿಶ್ಚಿತಾರ್ಥ ನಡೆದಿದ್ದು, ಮದುವೆಯ ದಿನ ನಿಶ್ಚಯವಾಗಿತ್ತು. ಈ ಸಮಾರಂಭದ ಖುಷಿಗೆ ಮಾಂಸದೂಟ ಹಾಕುವುದಾಗಿ ವಧುವಿನ ಕಡೆಯವರು ಹೇಳಿದ್ದರು. ಅದರಂತೆಯೇ ಎರಡು ಕುಟುಂಬದ ಸದಸ್ಯರು ಮತ್ತು ಅತಿಥಿಗಳು ಊಟದ ಸಂದರ್ಭದಲ್ಲಿ ಭಾಗಿಯಾಗಿದ್ದರು.
ಈ ವೇಳೆ, ಮಟನ್ ಸಾಂಬಾರಿನಲ್ಲಿ ನಲ್ಲಿಮೂಳೆ ಸಿಗಲಿಲ್ಲ ಎಂದು ಗಲಾಟೆ ಆರಂಭಿಸಿದ್ದು, ಇದು ಎರಡು ಕುಟುಂಬಗಳ ನಡುವೆ ಜಗಳಕ್ಕೆ ಕಾರಣವಾಯಿತು.
ಆದರೆ, ವಧುವಿನ ಕುಟುಂಬದವರು ಮದುವೆಯ ಸಮಯದಲ್ಲಿ ವರನ ಅತಿಥಿಗಳಿಗೆ ಮತ್ತು ಕುಟುಂಬದವರಿಗೆ ಮಟನ್ ನಲ್ಲಿಮೂಳೆ ನೀಡಿಲ್ಲ. ಮಟನ್ ನಲ್ಲಿ ಮೂಳೆ ನೀಡುವುದಾಗಿ ಭರವಸೆ ನೀಡಿದ್ದರೂ, ಆದರೂ ನೀಡಿಲ್ಲ ಎಂದು ವರನ ಕುಟುಂಬದವರು ದೂರಿದ್ದಾರೆ.
ಇದು ಮದುವೆ ಮನೆಯಲ್ಲಿ ಜಗಳಕ್ಕೆ ಕಾರಣವಾಯಿತು. ಈ ಬಗ್ಗೆ ಇಬ್ಬರು ಕುಟುಂಬದವರನ್ನು ಸಮಾಧಾನ ಪಡಿಸಲು ಮಧ್ಯಪ್ರವೇಶಿಸಲು ಪೊಲೀಸರನ್ನು ಕರೆಯಬೇಕಾಯಿತು.
ಈ ಸುದ್ದಿ ಓದಿದ್ದೀರಾ? ಹೊಸ ವರ್ಷಾಚರಣೆ | ಮಧ್ಯರಾತ್ರಿ 1 ಗಂಟೆವರೆಗೆ ಸಂಭ್ರಮಾಚರಣೆಗೆ ಅವಕಾಶ: ಆಯುಕ್ತ ಬಿ.ದಯಾನಂದ್
ಆದರೆ, ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಸಹ ವರನ ಕುಟುಂಬವನ್ನು ಸಮಾಧಾನಪಡಿಸಲು ವಿಫಲರಾದರು. ವರನ ಕುಟುಂಬದವರು ವಧುವಿನ ಕಡೆಯವರು ಮಟನ್ ನಲ್ಲಿಮೂಳೆ ಹಾಕದೇ ನಮಗೆ ಅವಮಾನ ಮಾಡಿದ್ದಾರೆ ಎಂದು ಮದುವೆಯನ್ನು ರದ್ದುಗೊಳಿಸಿದೆ.