ಕಳೆದ ಎರಡು ದಿನಗಳಲ್ಲಿ ಗೂಳಿ ಹಾಗೂ ಕರಡಿಯಾಟದಲ್ಲಿ ಕರಡಿಯಾಟವೇ ಜೋರಾಗಿದೆ. ನಿಫ್ಟಿ ಮತ್ತು ಸೆನ್ಸೆಕ್ಸ್ ಸರಾಸರಿ 4% ಕುಸಿತದಿಂದ ಮುಕ್ತಾಯಗೊಂಡಿರುವ ಷೇರು ಮಾರುಕಟ್ಟೆಯು ಇನ್ನೂ ಮೂರ್ನಾಲ್ಕು ದಿನಗಳ ತನಕ ಇದೇ ವಾತಾವರಣ ಇರಲಿದೆ ಎಂದು ಷೇರು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇಂದು ಸೆನ್ಸೆಕ್ಸ್ ಶೇ.2.74ರಷ್ಟು ಕುಸಿದು 78,759ಕ್ಕೆ ಮತ್ತು ನಿಫ್ಟಿ ಶೇ.2.68ರಷ್ಟು ಕುಸಿದು 24,055ಕ್ಕೆ ತಲುಪಿದೆ. ಒಟ್ಟು ಮಾರುಕಟ್ಟೆಯಲ್ಲಿ 3,084 ಕಂಪನಿಗಳ ಷೇರುಗಳು ಕುಸಿತ ಕಂಡಿವೆ. ಅಮೆರಿಕ ಮಾರುಕಟ್ಟೆಯ ಕುಸಿತದ ಕಾರಣಕ್ಕೆ ಏಷ್ಯನ್ ಮಾರುಕಟ್ಟೆಗಳೂ ಗಣನೀಯ ಹಿನ್ನಡೆ ಕಂಡಿವೆ. ಜಪಾನ್ ಮಾರುಕಟ್ಟೆಯ ನಿಕ್ಕಿ ಸೂಚ್ಯಂಕವು 1987 ರ ಬಳಿಕ ಅತಿ ದೊಡ್ಡ ಕುಸಿತಕ್ಕೆ ಸಾಕ್ಷಯಾಗಿದೆ.
ಭಾರತೀಯ ಮಾರುಕಟ್ಟೆಯ ನಿಫ್ಟಿ-50ರಲ್ಲಿ HUL-0.87%, Nestle-0.63%, HDFC Life-0.49% ಹಾಗೂ Tataconsumer product-0.48% ಮಾತ್ರ ಆಮೆಯ ಜಿಗಿತ ಕಂಡರೆ, ಉಳಿದಂತೆ TATA Motors-7.31%, ONGC-6.01%, Adani Ports-5.93%, TATA Steel- 5.31% ಹಾಗು Hindalco, Power Grid corp, SBI, Maruti Suzuki ಸೇರಿದಂತೆ ಇನ್ನುಳಿದ ಎಲ್ಲವೂ 4% ಕುಸಿತದೊಂದಿಗೆ 24,055.60 ಅಂಕಕ್ಕೆ ಮುಕ್ತಾಯ ಕಂಡಿದೆ.
ಸೆನ್ಸೆಕ್ಸ್ ನ ಮೊದಲ 30 ಕಂಪನಿಗಳಲ್ಲಿ 2ಕಂಪನಿಗಳು ಮಾತ್ರ ಸಕಾರಾತ್ಮಕ ಮುನ್ನಡೆ ಕಂಡರೆ, ಉಳಿದ 28 ಕಂಪನಿಗಳು ನಕಾರಾತ್ಮಕ ಹಿನ್ನಡೆಯಿಂದ ಕುಸಿದು, ಸುಮಾರು 2,222.55 ಅಂಕಗಳ ನಷ್ಟದಲ್ಲಿ 2.74% ನಷ್ಟದಲ್ಲಿ ಮುಕ್ತಾಯ ಕಂಡಿದೆ. ಇಸ್ರೇಲ್ ಮತ್ತು ಹಮಾಸ್ ಯುದ್ಧಗಳ ಕಾರಣದಿಂದ ಹಾಗೂ ಅಮೆರಿಕದಲ್ಲಿ ತಲೆದೂರಿರುವ ನಿರುದ್ಯೋಗದ ಪ್ರಭಾವ ಮತ್ತು ಜಪಾನ್ ದೇಶ ತೆಗೆದುಕೊಂಡಿರುವ ಕೆಲವು ಆರ್ಥಿಕ ತೀರ್ಮಾನಗಳ ಕಾರಣಕ್ಕೆ ಷೇರು ಮಾರುಕಟ್ಟೆಯ ಕುಸಿತ ಹೀಗೆ ಮುಂದುವರೆಯುತ್ತದೆ ಎನ್ನುವುದು ಷೇರು ತಜ್ಞರ ಅಭಿಪ್ರಾಯವಾಗಿದೆ.
