ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಕನೌಜ್‌ನಲ್ಲಿ ಇಂದು ಇಂಡಿಯಾ ಮೈತ್ರಿಕೂಟದ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ಬರೆದಿಟ್ಟುಕೊಳ್ಳಿ, ಉತ್ತರ ಪ್ರದೇಶ ಸಹಿತ ದೇಶದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಬಿರುಗಾಳಿ ಬರಲಿದೆ” ಎಂದು ಭವಿಷ್ಯ ನುಡಿದಿದ್ದಾರೆ.
ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಆಪ್ ಮುಖಂಡ ಸಂಜಯ್ ಸಿಂಗ್ ಸೇರಿದಂತೆ ಹಲವರು ಭಾಗವಹಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನಾನು ನಿಮಗೆ ಬರೆದುಕೊಡುತ್ತೇನೆ. ಉತ್ತರ ಪ್ರದೇಶದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಬಿರುಗಾಳಿ ಬರಲಿದೆ. ದೇಶದಲ್ಲೇ ಬಿಜೆಪಿಗೆ ಹೀನಾಯ ಸೋಲು ಉತ್ತರ ಪ್ರದೇಶದಲ್ಲಿ ಆಗಲಿದೆ. ಉತ್ತರ ಪ್ರದೇಶದ ಸಹಿತ ದೇಶದಲ್ಲಿ ಬದಲಾವಣೆಯ ಮಾಡುವ ನಿರ್ಧಾರವನ್ನು ಜನರು ಮಾಡಿದ್ದಾರೆ. ಹಾಗಾಗಿ, ‘ಇಂಡಿಯಾ’ ಮೈತ್ರಿಕೂಟದ ಬಿರುಗಾಳಿ ಬರಲಿದೆ” ಎಂದು ಹೇಳಿದರು.
उत्तर प्रदेश और देश, स्पष्ट है दोनों का जनादेश – INDIA की आंधी आने वाली है। pic.twitter.com/Yz52jSQw3g
— Rahul Gandhi (@RahulGandhi) May 10, 2024
“ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಂಬಾನಿ-ಅದಾನಿಯವರ ಹೆಸರು ಹೇಳಲು ಹಿಂಜರಿಯುತ್ತಿದ್ದರು. ಈಗ ಅವರಿಗೆ ಭಯ ಶುರುವಾಗಿದೆ. ಹಾಗಾಗಿ, ಅವರು ತಮ್ಮ ಮಿತ್ರರಿಬ್ಬರ ಹೆಸರನ್ನು ಎತ್ತಿದ್ದಾರೆ. ನನ್ನನ್ನು ಇಂಡಿಯಾ ಮೈತ್ರಿಕೂಟದವರು ಸುತ್ತುವರಿದಿದ್ದಾರೆ. ಹಾಗಾಗಿ, ನನ್ನನ್ನು ಕಾಪಾಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ನಾನು ಸೋಲುತ್ತಿದ್ದೇನೆ. ಅದಾನಿ, ಅಂಬಾನಿ ನನ್ನನ್ನು ರಕ್ಷಿಸಿ ಎಂದು ಕೂಗುತ್ತಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
हम साथ मिलकर लोकतंत्र और संविधान की रक्षा करेंगे।
दुनिया की कोई ताकत हिंदुस्तान के संविधान को खत्म नहीं कर सकती।
जीतेगा INDIA 🇮🇳
📍 कन्नौज, उत्तर प्रदेश pic.twitter.com/7g5Sr21Qu3
— Congress (@INCIndia) May 10, 2024
“ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾಗಿ ಆಯ್ಕೆಯಾಗುವುದಿಲ್ಲ. ಈ ಬಗ್ಗೆ ಗ್ಯಾರಂಟಿ ಕೊಡಬಲ್ಲೆ. ಕೊರೋನಾ ಬಗ್ಗೆ ಈ ಹಿಂದೆ ನಾನು ಹೇಳಿದ್ದು ಈಗ ಸತ್ಯವಾಗಿದೆ. ಅದೇ ರೀತಿ ಇದು ಕೂಡ ಸತ್ಯವಾಗಲಿದೆ. ಮೋದಿಯವರು ಈ ದೇಶದ ಪ್ರಧಾನಿಯಾಗುವುದಿಲ್ಲ” ಎಂದು ಮತ್ತೊಮ್ಮೆ ರಾಹುಲ್ ಗಾಂಧಿ ಆವೇಶಭರಿತರಾಗಿ ಹೇಳಿದರು.

if bjp keep winning by manupulating AVM machine all these year , then how will congress (INDIA alliance ) expect a victory ? why they are so confident ?
Even if the I N D I A alliance gets a majority and forms a government, will it sustain for 5 years? Can India afford an unstable government?”