ಸಂವಿಧಾನದ ಪೀಠಿಕೆಯಲ್ಲಿರುವ ‘ಸಮಾಜವಾದಿ’ ಮತ್ತು ಜಾತ್ಯತೀತ ಪದಗಳನ್ನು ತೆಗೆದು ಹಾಕಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಆಗ್ರಹಿಸಿದ್ದಾರೆ.
ನವ ದೆಹಲಿಯ ಡಾ. ಅಂಬೇಡ್ಕರ್ ಅಂತಾ ರಾಷ್ಟ್ರೀಯ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇಂದಿರಾ ಗಾಂಧಿ ಅವರು 1975ರ ಜೂನ್ 25ರಂದು ತುರ್ತುಪರಿಸ್ಥಿತಿ ಹೇರಿದ್ದರು. ಆ ಸಂದರ್ಭದಲ್ಲಿ ‘ಸಮಾಜವಾದಿ’ ಹಾಗೂ ‘ಜಾತ್ಯಾತೀತ ಪದಗಳನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಲಾಗಿತ್ತು” ಎಂದು ಹೇಳಿದರು.
“ನಾನು ಈ ವಿಷಯವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನ ಕಟ್ಟಡದಲ್ಲಿ (ಅಂಬೇಡ್ಕರ್ ಅಂತಾ ರಾಷ್ಟ್ರೀಯ ಕೇಂದ್ರ) ಹೇಳುತ್ತಿದ್ದೇನೆ, ಅವರ ಸಂವಿಧಾನವು ಪೀಠಿಕೆಯಲ್ಲಿ ಈ ಪದಗಳನ್ನು ಇರಲಿಲ್ಲ. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಸಾವಿರಾರು ಜನರನ್ನು ಜೈಲಿಗಟ್ಟಲಾಗಿತ್ತು. ನ್ಯಾಯಾಂಗ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿತ್ತು. ಆ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಬಲವಂತವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು’ ಎಂದು ಆರೋಪಿಸಿದರು.
“ತುರ್ತು ಪರಿಸ್ಥಿತಿ ಹೇರಿದಕ್ಕಾಗಿ ಕಾಂಗ್ರೆಸ್ ಪಕ್ಷ ದೇಶದ ಕ್ಷಮೆ ಕೇಳಬೇಕು. ತುರ್ತು ಪರಿಸ್ಥಿತಿ ಹೇರಿದವರೇ ಇಂದು ಸಂವಿಧಾನದ ಪ್ರತಿಗಳನ್ನು ಕೈಯಲ್ಲಿ ಹಿಡಿದು ಕೊಂಡು ಅಡ್ಡಾಡುತ್ತಿದ್ದಾರೆ. ಆದರೆ ಇದೂವರೆಗೂ ಅವರು ದೇಶದ ಕ್ಷಮೆ ಕೇಳಿಲ್ಲ” ಎಂದರು.

ಇವ ಯಾವ ದೊಡ್ಡ ಮನುಷ್ಯ ಅಂತ ಈತನ ಮಾತು ಕೇಳಬೇಕು.
ಈ ಸಂಘಿಗಳ ಮಾತಿಗೆ ಯಾವುದೇ ಬೆಲೆ ಕೊಡಬಾರದು.
ಜೈ ಸಂವಿಧಾನ, ಜೈ ಭೀಮ್.
ಆ ಪದದ ಅರ್ಥ ಗೊತ್ತಿಲ್ಲ ಈ ಮನುಷ್ಯನಿಗೆ
ಜಾತಿ ವ್ಯವಸ್ಥೆ ಇರಬೇಕು ಎಂಬ ಮಾತು ಈತನದು