ಕಳ್ಳನೊಬ್ಬ ಪೆಟ್ರೋಲ್ ಪಂಪ್‌ನಲ್ಲಿ ಕಳ್ಳತನ ಮಾಡಲು ನುಗ್ಗಿದ್ದು, ಹಣವನ್ನು ಕದಿಯುವ ಮುನ್ನ ದೇವರಿಗೆ ನಮಸ್ಕರಿಸಿ, ಆ ಬಳಿಕ 1.6 ಲಕ್ಷ ರೂ. ನಗದು ಕದ್ದಿರುವ ಘಟನೆ ಮಧ್ಯಪ್ರದೇಶದ ರಾಜ್ ಗಢದ ಪೆಟ್ರೋಲ್ ಪಂಪ್‌ವೊಂದರಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ರಾತ್ರಿವೇಳೆ ಪೆಟ್ರೋಲ್ ಬಂಕ್‌ನ ಕಚೇರಿಗೆ ನುಗ್ಗಿದ ಕಳ್ಳ, ಕಚೇರಿಯಲ್ಲಿದ್ದ ದೇವರ ಪೋಟೋಗೆ ನಮಸ್ಕರಿದ್ದಾನೆ. ಬಳಿಕ, ಕಚೇರಿಯಲ್ಲಿ ಹಣದ ಡ್ರಾವರ್ ತೆರೆದು ಹಣವನ್ನು ದೋಚಿ, ಪರಾರಿಯಾಗಿದ್ದಾನೆ.
“ಪೆಟ್ರೋಲ್ ಬಂಕ್‌ನಲ್ಲಿ 1.57 ಲಕ್ಷ ರೂ. ಕಳುವಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯನ್ನು ಶೀಘ್ರವಾಗಿ ಬಂಧಿಸಲಾಗುವುದು” ಎಂದು ಮಾಚಲ್ ಪುರ ಪೊಲೀಸ್ ಠಾಣೆ ಅಧಿಕಾರಿ ಜಿತೇಂದ್ರ ಸಿಂಗ್ ಹೇಳಿದ್ದಾರೆ.
A burglar in #MadhyaPradesh's #Rajgarh district broke into a petrol pump's office and stole nearly Rs 1.6 lakh.
— The Times Of India (@timesofindia) December 8, 2024
CCTV footage shows the thief praying to a deity inside the office before ransacking the place and stealing the cash.
Read more 🔗https://t.co/ccIwjij2IU pic.twitter.com/bWoCj6p48B