ಜಗತ್ತಿನ 16 ಬಿಲಿಯನ್ ಪಾಸ್ ವರ್ಡ್‌ಗಳು ಅಂದರೆ, 1,600 ಕೋಟಿ ಪಾಸ್ ವರ್ಡ್‌ಗಳು ಸೋರಿಕೆಯಾಗಿರುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ಇನ್ಫೋಸ್ಟೆಲ್ಲರ್ ಎಂಬ ಮಾಲ್ವೇರ್ನಿಂದಾಗಿ ಈ ಭಾರೀ ಪ್ರಮಾಣದ ಸೋರಿಕೆ ಆಗಿದೆ ಎಂದು ಸೈಬರ್ ಭದ್ರತಾ ಸಂಶೋಧಕರ ಕಂಪನಿ ತಿಳಿಸಿದೆ. ಇದು ಜಗತ್ತಿನ ಈವರೆಗಿನ ಅತಿದೊಡ್ಡ ಡೇಟಾ ಸೋರಿಕೆಯಾಗಿದೆ.
ಫೇಸ್‌ಬುಕ್, ಇನ್ಸ್ಟಾಗ್ರಾಮ್, ಜಿ-ಮೇಲ್, ಗೂಗಲ್, ಟೆಲಿಗ್ರಾಂ, ಸರ್ಕಾರಿ ಪೋರ್ಟಲ್ ಹೀಗೆ ಯಾವುದೂ ಈ ಸೋರಿಕೆಗೆ ಹೊರತಾಗಿ ಇರಲು ಸಾಧ್ಯವಿಲ್ಲ. ಡೇಟಾ ಸೋರಿಕೆ ಮತ್ತು ಪಾಸ್ ವರ್ಡ್ ಸೋರಿಕೆ ನಡುವೆ ವ್ಯತ್ಯಾಸವಿದೆ ಎಂದು ಸೈಬರ್ ಭದ್ರತಾ ಸಂಶೋಧಕರ ಕಂಪನಿ ಹೇಳಿದೆ.
ಈ ಇಡೀ ಜಗತ್ತಿನ ಒಟ್ಟು ಜನಸಂಖ್ಯೆ 8.2 ಬಿಲಿಯನ್ ಅಂದರೆ 820 ಕೋಟಿ. ಜಗತ್ತಿನ ಒಟ್ಟು ಇಂಟರ್ನೆಟ್ ಬಳಕೆದಾರರ ಸಂಖ್ಯೆ 5.64 ಬಿಲಿಯನ್ ಅಂದರೆ 564 ಕೋಟಿ. ಒಟ್ಟು ಜನಸಂಖ್ಯೆಯ ಶೇ. 68.7 ರಷ್ಟು ಜನ ಇಂಟರ್ನೆಟ್ ಬಳಸುತ್ತಾರೆ. ಇದರರ್ಥ ಇಂಟರ್ನೆಟ್ ಬಳಸುವ ಪ್ರತಿಯೊಬ್ಬ ವ್ಯಕ್ತಿಯ ಸುಮಾರು ಮೂರು ಪಾಸ್ ವರ್ಡ್‌ಗಳು ಸೋರಿಕೆಯಾಗಿರುವುದು ಆತಂಕಕಾರಿ ಸಂಗತಿ.
ಸೈಬರ್ ಸುದ್ದಿ ಸಂಶೋಧನಾ ತಂಡದ ತನಿಖೆ ಜನವರಿ 2025 ರಲ್ಲಿ ಪೂರ್ಣಗೊಂಡಿದೆ. ಈ ತನಿಖೆ ಹಲವು ತಿಂಗಳುಗಳ ಕಾಲ ನಡೆದಿದ್ದು, ಜೂನ್‌ನಲ್ಲಿ ಮಾಹಿತಿ ಬಹಿರಂಗಗೊಂಡಿದೆ.
ಸೋರಿಕೆ ಕಂಡುಹಿಡಿಯುವುದು ಹೇಗೆ?
Have I Been Pwned.com ಎಂಬ ಒಂದು ವೆಬೈಟ್ ಇದೆ. ಅಲ್ಲಿ ನಿಮ್ಮ ಇಮೇಲ್ ವಿಳಾಸ ಬರೆದರೆ, ಅದು ಡಾರ್ಕ್ ವೆಬ್ಲೆ ಹೋಗಿ ನಿಮ್ಮ ಇಮೇಲ್ ಐಡಿಗೆ ಸಂಬಂಧಿಸಿದ ಎಷ್ಟು ಪಾಸ್ ವರ್ಡ್‌ಗಳು ಸೋರಿಕೆಯಾಗಿವೆ ಎಂದು ತಿಳಿಸುತ್ತದೆ.