ಲೈಂಗಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದ 25 ವರ್ಷದ ವಿಕೃತಕಾಮಿಯೊಬ್ಬನನ್ನು ಮೂವರು ಅಪ್ರಾಪ್ತೆಯರು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಆಗ್ನೇಯ ದೆಹಲಿಯ ಹಜರತ್ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದಿದೆ.
ಪೊಲೀಸ್ ವರದಿಗಳ ಪ್ರಕಾರ, ಹತ್ಯೆಯಾದ ಯುವಕನಿಂದ ಮೂವರು ಅಪ್ರಾಪ್ತೆಯರು ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದರು. ಇದಕ್ಕಾಗಿ ಕೊಲೆಯ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.
“ಡಿ.23ರಂದು ರಾತ್ರಿ ನಡೆದ ಘಟನೆಯ ಮಾಹಿತಿ ಪಡೆದ ನಂತರ 16 ರಿಂದ 17 ವರ್ಷದೊಳಗಿನ ಮೂವರು ಬಾಲಕಿಯರನ್ನು ಬಂಧಿಸಲಾಗಿದೆ. ಮೂವರು ಆರೋಪಿಗಳು ಯುವಕನನ್ನು ಕಲ್ಲು, ದೊಣ್ಣೆಗಳಿಂದ ಜಜ್ಜಿ ಹತ್ಯೆ ಮಾಡಿದ ನಂತರ ಆತನ ಮೃತದೇಹವನ್ನು ಹುಲ್ಲು ಮತ್ತು ಬಟ್ಟೆಗಳನ್ನು ಬಳಸಿ ಸುಟ್ಟಿದ್ದಾರೆ, ಕುಶ್ರೊ ಉದ್ಯಾನದಲ್ಲಿ ಮೃತದೇಹ ಪತ್ತೆಯಾಗಿದೆ” ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ವಾಧಿಕಾರದ ಸಾಂಸ್ಥೀಕರಣದತ್ತ ಭಾರತ, ಇನ್ನೊಂದು ಗುಲಾಮಗಿರಿಯತ್ತ ದೇಶ
“ಮೃತದೇಹವನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಕೊಲೆ ಮತ್ತು ಸಾಕ್ಷ್ಯವನ್ನು ಮರೆಮಾಚಿದ್ದ ಅಂಶಗಳನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. ಆರೋಪಿಗಳು ಡಿಸೆಂಬರ್ 21 ರಂದು ರಾತ್ರಿ ವ್ಯಕ್ತಿಯನ್ನು ಕೊಲೆ ಮಾಡಿ ದೇಹವನ್ನು ಒಣ ಹುಲ್ಲು ಮತ್ತು ಬಟ್ಟೆ ಮೂಲಕ ಸುಟ್ಟು ಹಾಕಲು ಪ್ರಯತ್ನಿಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
“ನಾವು ಕೊಲೆಗೆ ಬಳಸಿದ ಆಯುಧಗಳಾದ ಕಲ್ಲುಗಳು ಮತ್ತು ದೊಣ್ಣೆಯನ್ನು ವಶಪಡಿಸಿಕೊಂಡಿದ್ದೇವೆ. ಮೃತನು ತುಂಬಾ ಕೆಟ್ಟ ಸ್ವಭಾವದವನು ಎಂದು ಹಜರತ್ ನಿಜಾಮುದ್ದೀನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸಂತ್ರಸ್ತೆ ಲೈಂಗಿಕ ಶೋಷಣೆಗೆ ಒಳಗಾದ ಆರೋಪಿಗಳಲ್ಲಿ ಒಬ್ಬಕೆಯು ಕೊಲೆ ಯೋಜನೆ ರೂಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.