ವಿಶ್ವದಲ್ಲಿ ಹಲವು ದೇಶಗಳು ಮಿಲಿಟರಿಗೆ ಅಧಿಕ ಪ್ರಾಧಾನ್ಯವನ್ನು ನೀಡುತ್ತದೆ. 2023ರಲ್ಲಿ ಮಿಲಿಟರಿಗೆ ಅಧಿಕ ಹಣ ವ್ಯಯಿಸಿದ ಟಾಪ್ 5 ದೇಶಗಳಲ್ಲಿ ಮೊದಲ ಸ್ಥಾನದಲ್ಲಿರುವ ದೇಶವು ಎರಡನೇ ಸ್ಥಾನದಲ್ಲಿರುವ ದೇಶ ಮಾಡಿದ ವೆಚ್ಚಕ್ಕಿಂತ 3.1 ಪಟ್ಟು ಹೆಚ್ಚು ಹಣವನ್ನು ರಕ್ಷಣೆಗಾಗಿ ಮೀಸಲಿಟ್ಟಿದೆ.
ಜಾಗತಿಕ ಮಿಲಿಟರಿ ವೆಚ್ಚವು 2023ರಲ್ಲಿ ಸತತ ಒಂಬತ್ತನೇ ವರ್ಷವೂ ಏರುಗತಿಯಲ್ಲಿ ಸಾಗಿದ್ದು, ಒಟ್ಟು ವೆಚ್ಚವು 2,443 ಬಿಲಿಯನ್ ಡಾಲರ್ ತಲುಪಿದೆ. ಸ್ಟಾಕ್ಹೋಲ್ಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ (SIPRI) ದಾಖಲಾದ ಡೇಟಾ ಪ್ರಕಾರ 2009ಕ್ಕೆ ಹೋಲಿಸಿದರೆ 2023ರಲ್ಲಿ ಮಿಲಿಟರಿ ವೆಚ್ಚವು ಸುಮಾರು ಶೇಕಡ 6.8ರಷ್ಟು ಏರಿಕೆಯಾಗಿದೆ.
ಇದನ್ನು ಓದಿದ್ದೀರಾ? ಹಾಸನ | ಪ್ಯಾರಾ ಮಿಲಿಟರಿ ಪಥಸಂಚಲನದ ವೇಳೆ ಹೂವು ಎರಚಿದ ಜನ
ಮಿಲಿಟರಿಗೆ ಅಧಿಕ ಹಣ ವ್ಯಯಿಸಿದ ಟಾಪ್ 5 ದೇಶಗಳೇ ವಿಶ್ವದ ಮಿಲಿಟರಿ ವೆಚ್ಚದ ಶೇಕಡ 61ರಷ್ಟನ್ನು ಹೊಂದಿದೆ. ಹಾಗಾದರೆ 2023ರಲ್ಲಿ ಅತಿ ಹೆಚ್ಚು ಮಿಲಿಟರಿ ಅಥವಾ ರಕ್ಷಣಾ ವೆಚ್ಚ ಹೊಂದಿರುವ ಟಾಪ್ 5 ದೇಶಗಳಾವುವು, ಭಾರತದ ರಕ್ಷಣಾ ಬಜೆಟ್ ಎಷ್ಟು, ಭಾರತ ಯಾವ ಸ್ಥಾನದಲ್ಲಿದೆ ಎಂದು ತಿಳಿಯೋಣ.
ಮೊದಲ ಸ್ಥಾನದಲ್ಲಿ ಅಮೆರಿಕ
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಅಥವಾ ಯುಎಸ್ 2023ರಲ್ಲಿ ಅತ್ಯಧಿಕ ಮಿಲಿಟರಿ ವೆಚ್ಚವನ್ನು ಹೊಂದಿರುವ ದೇಶವಾಗಿದ್ದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 2023ರಲ್ಲಿ ಯುಎಸ್ ಮಿಲಿಟರಿ ವೆಚ್ಚವು 916 ಬಿಲಿಯನ್ ಡಾಲರ್ ಆಗಿದ್ದು, ಇದು ಇದು 2022ರಿಂದ ಶೇಕಡ 2.3 ಮತ್ತು 2014ರಿಂದ ಶೇಕಡ 9.9ರಷ್ಟು ಹೆಚ್ಚಳವಾಗಿದೆ. ಇದು ಎರಡನೇ ಸ್ಥಾನದಲ್ಲಿರುವ ಚೀನಾಕ್ಕಿಂತ 3.1 ಪಟ್ಟು ಹೆಚ್ಚು ಹಣವನ್ನು ರಕ್ಷಣೆಗಾಗಿ ಮೀಸಲಿಟ್ಟಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಯುವಕನ ಮೇಲೆ ಗುಂಡಿನ ದಾಳಿ ; ನಿವೃತ್ತ ಮಿಲಿಟರಿ ಅಧಿಕಾರಿ ಬಂಧನ
ಎರಡನೇ ಸ್ಥಾನದಲ್ಲಿ ಚೀನಾ
ಮಿಲಿಟರಿಗಾಗಿ ವಿಶ್ವದಲ್ಲೇ ಅತೀ ಹೆಚ್ಚು ಖರ್ಚು ಮಾಡುವ ದೇಶಗಳ ಪಟ್ಟಿಯಲ್ಲಿ ಚೀನಾ ಎರಡನೇ ಸ್ಥಾನದಲ್ಲಿದೆ. 2023ರಲ್ಲಿ ತನ್ನ ಮಿಲಿಟರಿಗೆ ಸರಿಸುಮಾರು 296 ಬಿಲಿಯನ್ ಡಾಲರ್ ನಿಗದಿಪಡಿಸಿದೆ. ಇದು 2022ರ ವೆಚ್ಚಕ್ಕಿಂತ ಶೇಕಡ 6ರಷ್ಟು ಅಧಿಕವಾಗಿದೆ. ಚೀನಾದ ಮಿಲಿಟರಿ ವೆಚ್ಚವು ಸತತವಾಗಿ 29 ವರ್ಷಗಳಿಂದ ಏರಿಕೆಯಾಗುತ್ತಿದೆ ಎಂದು ಎಸ್ಐಪಿಆರ್ಐ ಮಿಲಿಟರಿ ವೆಚ್ಚದ ಡೇಟಾ ಉಲ್ಲೇಖಿಸಿದೆ.
ಮೂರನೇ ಸ್ಥಾನದಲ್ಲಿ ರಷ್ಯಾ
ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾದ ಮಿಲಿಟರಿ ವೆಚ್ಚವು2023ರಲ್ಲಿ ಅಂದಾಜು 109 ಯುಎಸ್ ಡಾಲರ್ ಆಗಿದೆ. ಮಿಲಿಟರಿ ವೆಚ್ಚದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ರಷ್ಯಾದ ವೆಚ್ಚವು 2023ರಲ್ಲಿ 2022ಕ್ಕಿಂತ ಶೇಕಡ 24ರಷ್ಟು ಮತ್ತು 2014ರಿಂದ ಶೇಕಡ 57ರಷ್ಟು ಹೆಚ್ಚಳವಾಗಿದೆ. ರಷ್ಯಾದ ಒಟ್ಟು ಜಿಡಿಪಿಯ ಶೇಕಡ 5.9ರಷ್ಟು ಮತ್ತು ಒಟ್ಟು ಸರ್ಕಾರಿ ವೆಚ್ಚದ ಶೇಕಡ 16ರಷ್ಟಿದೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ನಡೆಸುತ್ತಿರುವ ಕಾರಣ 2023ರಲ್ಲಿ ರಷ್ಯಾದ ಮಿಲಿಟರಿ ವೆಚ್ಚದ ನಿಖರವಾದ ಅಂಕಿಅಂಶಗಳು ಹೆಚ್ಚು ಅನಿಶ್ಚಿತವಾಗಿವೆ ಎಂದು ಎಸ್ಐಪಿಆರ್ಐ ಹೇಳಿದೆ.
ಇದನ್ನು ಓದಿದ್ದೀರಾ? ವಿಜಯಪುರ | ಪ್ಯಾಲೆಸ್ತೀನ್, ಲೆಬನಾನ್ ಮೇಲೆ ಇಸ್ರೇಲ್ ಆಕ್ರಮಣ ಖಂಡಿಸಿ ಪ್ರತಿಭಟನೆ
ನಾಲ್ಕನೇ ಸ್ಥಾನದಲ್ಲಿ ಭಾರತ
2023ರಲ್ಲಿ ಮಿಲಿಟರಿಗಾಗಿ ಅಧಿಕ ಬಜೆಟ್ ಮೀಸಲಿಟ್ಟು ಟಾಪ್ 5 ದೇಶಗಳಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಭಾರತದ ರಕ್ಷಣಾ ವೆಚ್ಚವು 83.6 ಬಿಲಿಯನ್ ಡಾಲರ್ ಆಗಿದೆ. ಇದು 2022ರಿಂದ ಶೇಕಡ 4.2 ಮತ್ತು 2014ರಿಂದ ಶೇಕಡ 44ರಷ್ಟು ಏರಿಕೆಯಾಗಿದೆ ಎಂದು ಎಸ್ಐಪಿಆರ್ಐ ಡೇಟಾ ಹೇಳುತ್ತದೆ. ಸಿಬ್ಬಂದಿ ಮತ್ತು ಕಾರ್ಯಾಚರಣೆಗಳ ವೆಚ್ಚವೇ ಭಾರತದಲ್ಲಿ ಅಧಿಕವಾಗಿದೆ. ಇದು 2023ರಲ್ಲಿ ಒಟ್ಟು ಮಿಲಿಟರಿ ಬಜೆಟ್ನ ಶೇಕಡ 80ರಷ್ಟಿದೆ ಎಂದು ವರದಿಯಾಗಿದೆ.
ಐದನೇ ಸ್ಥಾನದಲ್ಲಿ ಸೌದಿ ಅರೇಬಿಯಾ
2023ರಲ್ಲಿ ಮಿಲಿಟರಿಗೆ ಅಧಿಕ ಹಣ ವ್ಯಯಿಸಿದ ದೇಶಗಳಲ್ಲಿ ಐದನೇ ಸ್ಥಾನದಲ್ಲಿ ಸೌದಿ ಅರೇಬಿಯಾವಿದೆ. ವಿಶ್ವದ ಪ್ರಮುಖ ಕಚ್ಚಾ ತೈಲ ರಫ್ತುದಾರ ದೇಶವಾದ ಸೌದಿ ಅರೇಬಿಯಾ 2023ರಲ್ಲಿ ಇದರ ವೆಚ್ಚವು ಶೇಕಡ 4.3ರಷ್ಟು ಹೆಚ್ಚಾಗಿದ್ದು, 75.8 ಬಿಲಿಯನ್ ಡಾಲರ್ಗೆ ತಲುಪಿದೆ.
