ನೈತಿಕತೆ ಹಾಗೂ ವಾಕ್ ಸ್ವಾತಂತ್ರದ ನಡುವೆ ಸಮತೋಲನವಿರಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಡಿಜಿಟಲ್ ಕಂಟೆಂಟ್ ಪ್ರಸಾರ ಮಾಡುವ ಮೊದಲು ಕೇಂದ್ರ ಸರ್ಕಾರವು ಮಾರ್ಗಸೂಚಿ ಅನ್ವಯ ನಿಯಮಗಳನ್ನು ಪಾಲಿಸಿರುವುದನ್ನು ಗಮನಿಸಬೇಕು ಎಂದು ಯೂಟ್ಯೂಬರ್ ರಣವೀರ್ ಅಲ್ಲಾಬಾದಿಯಾಗೆ ಕಾರ್ಯಕ್ರಮಗಳನ್ನು ಆರಂಭಿಸಲು ಅನುಮತಿ ನೀಡಿದೆ.
ವಿವಾದಾತ್ಮಕ ಹೇಳಿಕೆ ನೀಡಿದ ನಂತರ 31 ವರ್ಷದ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾನ ಕಾರ್ಯಕ್ರಮಗಳಿಗೆ ಸುಪ್ರೀಂ ಕೋರ್ಟ್ ಕೆಲವು ದಿನಗಳ ಹಿಂದೆ ನಿರ್ಬಂಧವೇರಿತ್ತು. ಈತನ ಕಾರ್ಯಕ್ರಮಗಳನ್ನು ಎಲ್ಲ ವಯೋಮಾನದವರು ವೀಕ್ಷಿಸುವ ಮಾನದಂಡಗಳನ್ನು ಅಳವಡಿಸಿಕೊಳ್ಳುವುದನ್ನು ಖಚಿತಪಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೋರ್ಟ್ ನಿರ್ದೇಶಿಸಿತು.
ಕಳೆದ ತಿಂಗಳು ಹಾಸ್ಯ ಕಲಾವಿದ ಸಮಯ್ ರೈನಾ ಎಂಬುವವರು ಆಯೋಜಿಸಿದ್ದ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ವೀಕ್ಷಕರೊಬ್ಬರು ಕೇಳಿದ ಪ್ರಶ್ನೆಗೆ “ಪ್ರತಿ ದಿನ ನಿಮ್ಮ ಪೋಷಕರು ಲೈಂಗಿಕ ಕ್ರಿಯೆ ನಡೆಸುವುದನ್ನಿ ವೀಕ್ಷಿಸುತ್ತೀರಾ ಅಥವಾ ನೀವು ಒಮ್ಮೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡು ಶಾಶ್ವತವಾಗಿ ನಿಲ್ಲಿಸುತ್ತೀರಾ” ಎಂದು ಅಶ್ಲೀಲವಾಗಿ ಉತ್ತರ ನೀಡಿದ್ದ.
ಈ ಹೇಳಿಕೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಆತ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧ ದೇಶದ ಹಲವೆಡೆ ದೂರುಗಳು ದಾಖಲಾಗಿದ್ದವು. ಕೋರ್ಟ್ ಕೂಡ ವಿವಾದಿತ ದೃಶ್ಯವನ್ನು ಅಳಿಸುವಂತೆ ಸೂಚಿಸಿತ್ತು.
ಇದನ್ನು ಓದಿದ್ದೀರಾ? ಅಶ್ಲೀಲ ಪ್ರಶ್ನೆ: ಯೂಟ್ಯೂಬರ್ ರಣವೀರ್ ಸೇರಿ 40 ಮಂದಿ ವಿರುದ್ಧ ಎಫ್‌ಐಆರ್ ದಾಖಲು
ಎಲ್ಲಡೆ ಟೀಕೆಗಳು ವ್ಯಕ್ತವಾದ ನಂತರ ” ನನ್ನ ಹೇಳಿಕೆ ಸರಿಯಾಗಿರಲಿಲ್ಲ, ಅದು ತಮಾಷೆಯೂ ಅಲ್ಲ. ಹಾಸ್ಯದಲ್ಲಿ ನಾನು ಪರಿಣಿತನಲ್ಲ. ನಾನು ಕ್ಷಮೆ ಕೇಳುತ್ತೇನೆ” ಎಂದು ಹೇಳಿದ್ದ.
ರಣವೀರ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೈಗಳಿಂದಲೇ ನ್ಯಾಷನಲ್ ಕ್ರಿಯೇಟರ್ ಅವಾರ್ಡ್ ನೀಡಿದ್ದರು. ಅದಲ್ಲದೆ, ಅವರ ಪಾಡ್ ಕಾಸ್ಟ್ ಬೀರ್ ಬೈಸೆಪ್ಸ್‌ನಲ್ಲಿ ದೇಶದ ಪ್ರಖ್ಯಾತ ವ್ಯಕ್ತಿಗಳು ಭಾಗವಹಿಸುತ್ತಿದ್ದರು. ಕೇಂದ್ರ ಮಂತ್ರಿಮಂಡಲದ ಸಚಿವರು ಕೂಡ ಈತನ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದರು.
ಇಂಡಿಯಾಸ್ ಗಾಟ್ ಲ್ಯಾಟೆಂಟ್ ಎಂಬ ಶೋ ಇಂಡಿಯಾಸ್ ಗಾಟ್ ಟ್ಯಾಲೆಂಟ್ ನ ವಿಡಂಬನಾತ್ಮಕ ಪ್ರದರ್ಶನವಾಗಿದ್ದು, ಇದು ಕಿಲ್ ಟೋನಿ ಎಂಬ ಅಮೇರಿಕನ್ ಯೂಟ್ಯೂಬ್ ಶೋನಿಂದ ಸ್ಫೂರ್ತಿ ಪಡೆದಿದೆ. ಐಜಿಎಲ್ ಎಂಬುದು ಸ್ಕ್ರಿಪ್ಟ್ ಮಾಡದ ಹಾಸ್ಯ ಕಾರ್ಯಕ್ರಮವಾಗಿದ್ದು, ಸಮಯ್ ರೈನಾ ಅವರೊಂದಿಗೆ ಪ್ರತಿ ಪ್ರದರ್ಶನದಲ್ಲಿ ವಿಭಿನ್ನ ಕಂಟೆಂಟ್ ಕ್ರಿಯೇಟರ್‌ಗಳು ಭಾಗವಹಿಸುತ್ತಿದ್ದರು.
