ಟ್ರೇಡ್‌ಮಾರ್ಕ್ ಉಲ್ಲಂಘನೆ ಪ್ರಕರಣದಲ್ಲಿ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಉಲ್ಲಂಘಿಸಿದ ಕಾರಣ 50 ಲಕ್ಷ ರೂಪಾಯಿ ಠೇವಣಿ ಇಡುವಂತೆ ಪತಂಜಲಿ ಆಯುರ್ವೇದ್‌ಗೆ ಬಾಂಬೆ ಹೈಕೋರ್ಟ್ ನಿರ್ದೇಶಿಸಿದೆ. ಟ್ರೇಡ್‌ಮಾರ್ಕ್ ಉಲ್ಲಂಘನೆ ಪ್ರಕರಣದಲ್ಲಿ ಕರ್ಪೂರ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಪತಂಜಲಿಗೆ ಕೋರ್ಟ್ ಆದೇಶಿಸಿತ್ತು. ಆದರೆ ಪತಂಜಲಿ ಆ ನಿಯಮ ಉಲ್ಲಂಘಿಸಿದೆ.
ಮಂಗಳಂ ಆರ್ಗಾನಿಕ್ಸ್ ಲಿಮಿಟೆಡ್ ಟ್ರೇಡ್‌ಮಾರ್ಕ್ ಉಲ್ಲಂಘನೆಯ ಆರೋಪ ಮಾಡಿದೆ. ಇದಾದ ಬಳಿಕ 2023ರ ಆಗಸ್ಟ್‌ನಲ್ಲಿ ಮಧ್ಯಂತರ ಆದೇಶದಲ್ಲಿ ಹೈಕೋರ್ಟ್ ಪತಂಜಲಿ ಆಯುರ್ವೇದ್ ಲಿಮಿಟೆಡ್‌ಗೆ ಕರ್ಪೂರ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಆದೇಶಿಸಿದೆ.
ಪತಂಜಲಿಯು ಜೂನ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕರ್ಪೂರ ಉತ್ಪನ್ನಗಳ ಮಾರಾಟಕ್ಕೆ ತಡೆಯಾಜ್ಞೆ ನೀಡುವ ಹಿಂದಿನ ಆದೇಶದ ಉಲ್ಲಂಘನೆಯನ್ನು ಒಪ್ಪಿಕೊಂಡಿದೆ ಎಂಬುವುದನ್ನು ಜುಲೈ 8ರಂದು ನ್ಯಾಯಮೂರ್ತಿ ಆರ್ ಐ ಚಾಗ್ಲಾ ಅವರ ಏಕ ಪೀಠವು ಗಮನಿಸಿದೆ.
ಇದನ್ನು ಓದಿದ್ದೀರಾ? ಪತಂಜಲಿ ‘ಸೋನ್ ಪಾಪ್ಡಿ’ ಆಹಾರ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ; ಮೂವರಿಗೆ ಜೈಲು
ಪತಂಜಲಿ 2023ರ ಆಗಸ್ಟ್ 30ರ ತಡೆಯಾಜ್ಞೆ ಆದೇಶದ ಇಂತಹ ನಿರಂತರ ಉಲ್ಲಂಘನೆಯನ್ನು ಮಾಡುವುದನ್ನು ಈ ನ್ಯಾಯಾಲಯವು ಸಹಿಸುವುದಿಲ್ಲ ಎಂದು ನ್ಯಾಯಮೂರ್ತಿ ಚಾಗ್ಲಾ ಆದೇಶದಲ್ಲಿ ತಿಳಿಸಿದ್ದಾರೆ. ಈ ಆದೇಶದ ಪ್ರತಿಯು ಬುಧವಾರ (ಜುಲೈ 10) ಲಭ್ಯವಾಗಿದೆ.
ತಡೆಯಾಜ್ಞೆ ಆದೇಶದ ಉಲ್ಲಂಘನೆ ಮಾಡಿದ ಕಾರಣಕ್ಕೆ ಮೊದಲು 50 ಲಕ್ಷ ರೂಪಾಯಿ ಮೊತ್ತವನ್ನು ಪಾವತಿ ಮಾಡುವಂತೆ ಪತಂಜಲಿಗೆ ನಿರ್ದೇಶನ ನೀಡುವುದು ಸೂಕ್ತ ಎಂದು ಬಾಂಬೆ ಹೈಕೋರ್ಟ್ ಪೀಠವು ಆದೇಶಿಸಿದೆ. ನಿಷೇಧಾಜ್ಞೆ ಜಾರಿಯಾದ ನಂತರ 49,57,861 ರೂಪಾಯಿ ಮೊತ್ತದ ಕರ್ಪೂರದ ಉತ್ಪನ್ನದ ಪೂರೈಕೆಯನ್ನು ಪತಂಜಲಿ ಮಾಡಿದೆ ಎಂದು ಅಫಿಡವಿಟ್‌ನಲ್ಲಿ ಪತಂಜಲಿ ನಿರ್ದೇಶಕ ರಜನೀಶ್ ಮಿಶ್ರಾ ತಿಳಿಸಿದ್ದಾರೆ.
ಇನ್ನು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 19ಕ್ಕೆ ಹೈಕೋರ್ಟ್ ಮುಂದೂಡಿದೆ.
The #BombayHighCourt has directed #Patanjali #Ayurved to deposit ₹50 lakh for alleged breach of the HC’s interim order restraining it from selling its camphor #products, in relation to a trademark infringement case filed by another company. pic.twitter.com/CJdMlEV7Xu
— Aman (@Aman34_) July 10, 2024