“ಸ್ವಾಭಿಮಾನ ಮಾರಿಕೊಂಡ ದ್ರೋಹಿಗಳು”: ಪಕ್ಷಾಂತರಿಗಳಿಗೆ ಕವಿತೆಯಲ್ಲೇ ತಿವಿದ ʼದೀದಿʼ

Date:

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ TMC ಸೋಲು ಕಂಡ ಬೆನ್ನಲ್ಲೇ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಈ ರಾಜಕೀಯ ಬಿರುಗಾಳಿಯ ಮಧ್ಯೆಯೇ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಪಕ್ಷಾಂತರಿಗಳ ವಿರುದ್ಧ ತಮ್ಮ ಲೇಖನಿಯನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದಾರೆ. ಪಕ್ಷ ಬದಲಾಯಿಸುವವರನ್ನು ಊಸರವಳ್ಳಿಗೆ ಹೋಲಿಸಿ ‘ಗಿರ್ಗಿಟ್’ (ಊಸರವಳ್ಳಿ) ಎಂಬ ವ್ಯಂಗ್ಯ ಕವನ ಬರೆಯುವ ಮೂಲಕ ಬಂಡಾಯಗಾರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

- Advertisement -

‘ಗಿರ್ಗಿಟ್’ ಕವಿತೆಯಲ್ಲೇನಿದೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಪಕ್ಷಕ್ಕೆ ದ್ರೋಹ ಬಗೆದ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವ ದೀದಿ ಬರೆದಿರುವ ಬಂಗಾಳಿ ಕವಿತೆಯ ಕನ್ನಡ ರೂಪ ಹೀಗಿದೆ… “ನಿಮಗೆ ಅದೆಷ್ಟು ರಾಜಕೀಯ ಮಹತ್ವಾಕಾಂಕ್ಷೆ?, ಇಷ್ಟು ಬಣ್ಣ ಬದಲಾಯಿಸಲು ಇನ್ನೆಷ್ಟು ಬೇಕು?, ಅದೆಷ್ಟು ಭ್ರಷ್ಟಾಚಾರ ನಿಮ್ಮ ಪದತಲದಲ್ಲಿ? ತಾಸುಗಳೊಳಗಾಗಿ ಬಣ್ಣ ಬದಲಿಸುವಿರಲ್ಲ!?”

ಸಂಕಷ್ಟದ ಸಮಯದಲ್ಲಿ ಸ್ವಾರ್ಥಕ್ಕಾಗಿ ಪಕ್ಷದ ಸೈದ್ಧಾಂತಿಕ ಮೌಲ್ಯಗಳನ್ನು, ಕಾರ್ಯಕರ್ತರನ್ನು ಕೈಬಿಟ್ಟ ನಾಯಕರು “ಊಸರವಳ್ಳಿಗಿಂತಲೂ ಹೆಚ್ಚು ಅಪಾಯಕಾರಿ” ಎಂದು ಮಮತಾ ಆಕ್ರೋಶ ಹೊರಹಾಕಿದ್ದಾರೆ.

“ಅವರು ಕೇವಲ ತಮ್ಮನ್ನು ತಾವು ಮಾರಿಕೊಳ್ಳುತ್ತಿಲ್ಲ; ಬದಲಿಗೆ ಜನಸಾಮಾನ್ಯರ ಮತ್ತು ಪಕ್ಷದ ಕಾರ್ಯಕರ್ತರ ಸ್ವಾಭಿಮಾನವನ್ನು ಮಾರಾಟ ಮಾಡುತ್ತಿದ್ದಾರೆ. ಇಂತಹ ಅವಕಾಶವಾದಿಗಳ ಸ್ಥಾನ ಯಾವಾಗಲೂ ಕೆಳಮಟ್ಟದಲ್ಲೇ ಇರುತ್ತದೆ. ಒಂದು ದಿನ ಅವರ ಈ ದುರಾಸೆಯೇ ಅವರನ್ನು ಕಾಡಲಿದೆ. ಅಂದು ಈ ದ್ರೋಹಿಗಳಿಗೆ ಮಾನವೀಯತೆ ಇಲ್ಲದ ಬದುಕು ಎಷ್ಟು ನಗಣ್ಯ ಎಂಬುದು ಅರ್ಥವಾಗಲಿದೆ” ಎಂದು ಕವಿತೆಯ ಕೊನೆಯಲ್ಲಿ ಬರೆದಿದ್ದಾರೆ.

ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಟಿಎಂಸಿ ಹಿರಿಯ ನಾಯಕರು ಸರಣಿ ರಾಜೀನಾಮೆ ನೀಡುತ್ತಿದ್ದು, ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಪಕ್ಷದ ಒಳಗೆ ಇಂತಹ ತಲ್ಲಣ ಸೃಷ್ಟಿಯಾಗಿರುವ ಬೆನ್ನಲ್ಲೇ ಈ ಕವಿತೆ ಹೊರಬಿದ್ದಿದೆ.

ಇದಕ್ಕೂ ಮುನ್ನ, ಅಂದರೆ ಸೋಲು ಕಂಡ ಕೇವಲ ಒಂದು ವಾರದ ಅವಧಿಯಲ್ಲಿ ಮಮತಾ ಬ್ಯಾನರ್ಜಿ ‘ಬ್ರೇವ್’ (ಧೀರ) ಎಂಬ ಮತ್ತೊಂದು ಕವಿತೆ ಬರೆದಿದ್ದರು. ಸೋಲಿನಿಂದ ಕಂಗೆಟ್ಟಿದ್ದ ಕಾರ್ಯಕರ್ತರಲ್ಲಿ ಧೈರ್ಯ ತುಂಬಲು ಆ ಕವಿತೆ ಬರೆಯಲಾಗಿತ್ತು. ಅದರಲ್ಲಿ, “ಧೈರ್ಯವಾಗಿ ಮತ್ತು ಶಕ್ತಿಯುತವಾಗಿರಿ, ಕ್ರೂರರನ್ನು ಯಾವಾಗಲೂ ನಗುತ್ತಲೇ ಎದುರಿಸಿ. ನೀವು ಹುಟ್ಟುವಾಗ ಒಂಟಿಯಾಗಿ ಬಂದಿದ್ದೀರಿ, ಸಾಯುವಾಗಲೂ ಒಂಟಿಯಾಗಿಯೇ ಹೋಗಬೇಕು. ಹಾಗಾಗಿ ನಿಮ್ಮ ಮೇಲೆ ನಂಬಿಕೆ ಇರಲಿ” ಎಂದು ಪಕ್ಷದ ನಾಯಕರನ್ನು ಹುರಿದುಂಬಿಸಿದ್ದರು.

ಇದನ್ನೂ ಓದಿ: ಪೆರೋಲ್ ಸಿಕ್ಕರೂ 24 ದಿನ ಹೆಚ್ಚುವರಿ ಜೈಲುವಾಸ: ಕೈದಿಗೆ ₹11 ಲಕ್ಷ ಪರಿಹಾರ ನೀಡುವಂತೆ ಸುಪ್ರೀಂ ಆದೇಶ

ರಾಜಕೀಯ ಸಂಘರ್ಷಗಳನ್ನು ಎದುರಿಸಲು ಮಮತಾ ಬ್ಯಾನರ್ಜಿ ಅವರು ಕಾವ್ಯ ಮತ್ತು ಕಲೆಯನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಅವರು ಇದುವರೆಗೆ 162 ಪುಸ್ತಕಗಳು, 27 ಕವಿತೆಗಳು ಮತ್ತು ಹಲವಾರು ಹಾಡುಗಳನ್ನು ರಚಿಸಿದ್ದಾರೆ. ಕೇವಲ ಬರವಣಿಗೆ ಮಾತ್ರವಲ್ಲದೆ ವರ್ಣಚಿತ್ರಗಳ ಪ್ರದರ್ಶನವನ್ನೂ ನೀಡಿದ್ದಾರೆ.

ಹಿಂದಿನ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಸಿಂಗೂರು ಮತ್ತು ನಂದಿಗ್ರಾಮ ಚಳವಳಿಯ ಸಮಯದಲ್ಲೂ ಮಮತಾ ಬ್ಯಾನರ್ಜಿ ಅವರು ಕವಿತೆಗಳ ಮೂಲಕವೇ ಜನರನ್ನು ತಲುಪಿದ್ದರು. ಇತ್ತೀಚಿನ ಪಶ್ಚಿಮ ಬಂಗಾಳದ ವಿಶೇಷ ತೀವ್ರ ಪರಿಷ್ಕರಣೆ (SIR) ಸಮಯದಲ್ಲೂ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕವಿತೆಗಳನ್ನು ಹಂಚಿಕೊಳ್ಳುವ ಮೂಲಕ ರಾಜಕೀಯ ಸಂದೇಶ ರವಾನಿಸಿದ್ದರು. ಈಗ ಪಕ್ಷದೊಳಗಿನ ಬಂಡಾಯ ಶಮನಗೊಳಿಸಲು ಮತ್ತೆ ಕಾವ್ಯದ ಮೊರೆ ಹೋಗಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | SIR ರದ್ದತಿ ಆಗ್ರಹಿಸಿ ಸಿಪಿಐ(ಎಂ)ನಿಂದ ಮೇಣದಬತ್ತಿ ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ...

ಸಿದ್ದರಾಮಯ್ಯ ‘ಸ್ಟಿಂಗ್’ ವಿವಾದದ ಅಸಲಿ ವೃತ್ತಾಂತವೇನು? ‘ಸತ್ಯಕ್ಕೇ ಜಯ’ ಎಂದು ಮಾಜಿ ಸಿಎಂ ಹೇಳಿದ್ದೇಕೆ?

ಕರ್ನಾಟಕ ರಾಜಕಾರಣದಲ್ಲಿ ಇದೀಗ ‘ಸ್ಟಿಂಗ್ ಆಪರೇಷನ್’ ಹೆಸರಿನಲ್ಲಿ ಹೊಸ ವಿವಾದ ಭುಗಿಲೆದ್ದಿದೆ....

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...