ಬಲವಂತವಾಗಿ ವಿಮಾನದ ಕಾಕ್‌ಪಿಟ್‌ಗೆ ಪ್ರವೇಶಿಸಲು ಪ್ರಯತ್ನಿಸಿದ ಇಬ್ಬರು ಪ್ರಯಾಣಿಕರನ್ನು ಸ್ಪೈಸ್‌ಜೆಟ್ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿಯೇ ಕೆಳಗಿಳಿಸಿ ಹಾರಿದೆ.
ಮುಂಬೈಗೆ ಹಾರಬೇಕಿದ್ದ ವಿಮಾನವು ಮತ್ತೆ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿ, ಇಬ್ಬರು ಪ್ರಯಾಣಿಕರನ್ನು ಕೆಳಗಿಳಿಸಿತು. ಇಬ್ಬರನ್ನೂ ಸಿಐಎಸ್‌ಎಫ್‌ಗೆ ಹಸ್ತಾಂತರಿಸಲಾಗಿದೆ.
ಇದನ್ನು ಓದಿದ್ದೀರಾ? ಟಿಕೆಟ್ ಎಡವಟ್ಟು: ಪಿಎಚ್‌ಡಿ ಪರೀಕ್ಷೆಗೆ ಪ್ರಯಾಣಿಕ ಗೈರು, 30 ಸಾವಿರ ರೂ. ಪರಿಹಾರ ನೀಡುವಂತೆ ಸ್ಪೈಸ್‌ಜೆಟ್‌ಗೆ ಆದೇಶ
ಇಬ್ಬರು ಅಶಿಸ್ತಿನ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಗಿದೆ. ಇಬ್ಬರೂ ಕಾಕ್‌ಪಿಟ್‌ನ ಹತ್ತಿರ ಬರಲು ಪ್ರಯತ್ನಿಸಿದರು. ವಿಮಾನ ಹಾರುವಾಗ ಅಡಚಣೆ ಉಂಟು ಮಾಡಿದರು ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಕ್ಯಾಬಿನ್ ಸಿಬ್ಬಂದಿ, ಸಹ ಪ್ರಯಾಣಿಕರು ಮತ್ತು ಕ್ಯಾಪ್ಟನ್ ಪದೇ ಪದೇ ವಿನಂತಿಸಿದರೂ, ಇಬ್ಬರು ಪ್ರಯಾಣಿಕರು ತಮ್ಮ ಸೀಟುಗಳಿಗೆ ಮರಳಲು ನಿರಾಕರಿಸಿದರು ಎನ್ನಲಾಗಿದೆ.
ಇನ್ನು ಈ ವಿಮಾನವು ಮಧ್ಯಾಹ್ನ 12:30ಕ್ಕೆ ಹೊರಡಬೇಕಿತ್ತು, ಆದರೆ ವಿಮಾನ SG 9282 ಸಂಜೆ 7:21 ಕ್ಕೆ ಹೊರಟಿದೆ ಎಂದು ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ Flightradar24.com ನಲ್ಲಿ ಉಲ್ಲೇಖಿಸಲಾಗಿದೆ.
