ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್, ಆಡಳಿತಾರೂಢ ಡಿಎಂಕೆ ಸರ್ಕಾರದಲ್ಲಿ ಡಿಸಿಎಂ ಆಗಿ ಬಡ್ತಿ ಪಡೆಯುವ ಸಾಧ್ಯತೆಗಳಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಉದಯನಿಧಿ ಸ್ಟಾಲಿನ್ ತಂದೆ ಎಂ ಕೆ ಸ್ಟಾಲಿನ್ ಕೂಡ 2009ರ ಲೋಕಸಭಾ ಚುನಾವಣೆಯ ನಂತರ ಅವರ ತಂದೆ ಎಂ ಕೆ ಕರುಣಾನಿಧಿ ಸಂಪುಟದಲ್ಲಿ ಡಿಸಿಎಂ ಆಗಿ ಬಡ್ತಿ ಪಡೆದಿದ್ದರು.
ಚೆಪಕ್ ಕ್ಷೇತ್ರದ ಶಾಸಕರಾದ ಉದಯನಿಧಿ 2022ರ ಡಿಸೆಂಬರ್‌ನಲ್ಲಿ ಡಿಎಂಕೆ ಸಂಪುಟದಲ್ಲಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರಕಾರಕ್ಕೆ ಇಕ್ಕಟ್ಟು ತಂದ ಖಾಸಗಿ ಮೀಸಲು ಸಮಸ್ಯೆ
ಮೂಲಗಳ ಪ್ರಕಾರ, ಉದಯನಿಧಿ ಸ್ಟಾಲಿನ್ ಇದೇ ವರ್ಷದ ಆರಂಭದಲ್ಲಿಯೇ ಡಿಸಿಎಂ ಆಗಿ ನೇಮಕಗೊಳ್ಳುವ ಸಾಧ್ಯತೆಯಿತ್ತು. ಆದರೆ ಒಂದೇ ಅವಧಿಯಲ್ಲಿ ಎರಡು ಬಾರಿ ಮಂತ್ರಿಯಾದರೆ ಪಕ್ಷದಲ್ಲಿ ಆಂತರಿಕ ಕಲಹ ಏರ್ಪಡುವ ಕಾರಣದಿಂದ ಯೋಜನೆಯನ್ನು ಕೈ ಬಿಡಲಾಯಿತು ಎಂದು ತಿಳಿದುಬಂದಿದೆ.
ಈ ವರ್ಷದ ಜನವರಿಯಲ್ಲಿ ಸನಾತನ ಧರ್ಮದ ಬಗ್ಗೆ ನೀಡಿದ್ದ ಹೇಳಿಕೆಯಿಂದ ವಿವಾದ ಉಂಟಾಗಿತ್ತು. ಈ ಬೆಳವಣಿಗೆಯ ನಂತರ ಕಲ್ಲಕುರುಚಿಯ ಅಕ್ರಮ ಮದ್ಯ ದುರಂತ ಕೂಡ ಉದಯನಿಧಿ ಸ್ಟಾಲಿನ್ ಡಿಸಿಎಂ ಆಗಲು ಅಡ್ಡಿಯಾಯಿತು ಎಂದು ವರದಿಯಾಗಿದೆ.
ಸನಾತನ ಧರ್ಮದ ವಿರುದ್ಧವಾದ ಹೇಳಿಕೆ ರಾಷ್ಟ್ರಮಟ್ಟದಲ್ಲಿ ವಿವಾದ ಉಂಟು ಮಾಡಿದರೆ, ಕಲ್ಲಕುರುಚಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸೇವನೆಯಿಂದ 65 ಮಂದಿ ಮೃತಪಟ್ಟಿದ್ದರು.