ವಿದೇಶಿ ವಿದ್ಯಾರ್ಥಿಗಳಿಗೆ ವಿಸಾ ನಿಯಮ ಕಠಿಣಗೊಳಿಸಿದ ಇಂಗ್ಲೆಂಡ್: ಕುಟುಂಬ ಸದಸ್ಯರಿಗೆ ಪ್ರವೇಶವಿಲ್ಲ

Date:

Advertisements

ವಿದೇಶಿ ವಿದ್ಯಾರ್ಥಿಗಳು ತಮ್ಮ ಕುಟುಂಬ ಸದಸ್ಯರನ್ನು ಕರೆತರುವ ಮಿತಿಯ ಸಾಮರ್ಥ್ಯವನ್ನು ಕಡಿಮೆಗೊಳಿಸಲು ಇಂಗ್ಲೆಂಡ್ ಉದ್ದೇಶಿಸಿದೆ. ಕೇವಲ ಸ್ನಾತಕೋತ್ತರ ಸಂಶೋಧನಾ ಕೋರ್ಸ್‌ಗಳು ಹಾಗೂ ಸರ್ಕಾರಿ ನಿಧಿಯಿಂದ ಸ್ಕಾಲರ್‌ಶಿಪ್‌ ಪಡೆವ ವಿದ್ಯಾರ್ಥಿಗಳ ಕುಟುಂಬಸ್ಥರಿಗೆ ಮಾತ್ರ ವಿನಾಯಿತಿ ನೀಡಿದೆ.

ಇಂಗ್ಲೆಂಡ್‌ ವಿಶ್ವವಿದ್ಯಾಲಯಗಳಲ್ಲಿ ಭಾರತೀಯರು ಒಳಗೊಂಡು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವಿಸಾ ನಿಯಮವನ್ನು ಕಠಿಣಗೊಳಿಸುವ ಪ್ರಕ್ರಿಯೆಯ ಭಾಗವಾಗಿದೆ. ನೂತನ ಷರತ್ತು ಮತ್ತು ನಿಯಮಗಳು ಈ ತಿಂಗಳಿನಿಂದಲೇ ಜಾರಿಗೆ ಬರಲಿವೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಇಂಗ್ಲೆಂಡ್ ಪ್ರಧಾನಿ ರಿಶಿ ಸುನಕ್, “ಇಂದಿನಿಂದ ವಿದೇಶಿ ವಿಶ್ವವಿದ್ಯಾಲಯಗಳ ಬಹುತೇಕ ವಿದ್ಯಾರ್ಥಿಗಳು ತಮ್ಮ ಕುಟುಂಬದ ಸದಸ್ಯರನ್ನು ಇಂಗ್ಲೆಂಡ್‌ಗೆ ಕರೆತರಲು ಸಾಧ್ಯವಾಗುವುದಿಲ್ಲ. 2024ರಲ್ಲಿ ನಾವು ಈಗಾಗಲೇ ಇಂಗ್ಲೆಂಡ್ ಪ್ರಜೆಗಳಿಗೆ ಈ ವಿಷಯ ತಿಳಿಸುತ್ತಿದ್ದೇವೆ.

Advertisements

ಇಂಗ್ಲೆಂಡಿನ ಗೃಹ ಇಲಾಖೆಯು ಕೂಡ ಬದಲಾವಣೆ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಕಳೆದ ವರ್ಷ ಮೇ ತಿಂಗಳಲ್ಲಿ ಮಾಜಿ ಗೃಹ ಕಾರ್ಯದರ್ಶಿ ಸ್ಯುಲ್ಲಾ ಬ್ರವೇರ್‌ಮನ್ ಅವರು ಇಂಗ್ಲೆಂಡ್‌ಗೆ ವಿದ್ಯಾರ್ಥಿ ವಿಸಾ ಬಳಸಿಕೊಂಡು ಹಿಂಬಾಗಿಲಿನ ಮೂಲಕ ಆಗಮಿಸುವವರನ್ನು ಕಡಿಮೆ ಮಾಡಲು ಮೊದಲು ಘೋಷಿಸಿದ್ದರು. ನೂತನ ನಿಯಮವು ಇಂಗ್ಲೆಂಡ್‌ಗೆ ಆಗಮಿಸುವ ಜನರನ್ನು 1.40 ಲಕ್ಷ ಜನಸಂಖ್ಯೆಗೆ ಇಳಿಸುವುದಾಗಿದೆ ಎಂದು ತಿಳಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೊಸವರ್ಷದ ಹೊಸ್ತಿಲಲ್ಲಿ ನಮ್ಮನ್ನಗಲಿದ ನಿಜಾಯತಿಯ ಪತ್ರಕರ್ತ ಜಾನ್ ಪಿಲ್ಜರ್

ಈ ನಿರ್ದಿಷ್ಟ ನಿರ್ಬಂಧವು ವಿದೇಶಿ ವಿದ್ಯಾರ್ಥಿಗಳು ತಮ್ಮ ಸಂಬಂಧಿಕರನ್ನು ಕರೆತರುವ ನಿಷೇಧಿತ ಅಭ್ಯಾಸವನ್ನು ಕೊನೆಗೊಳಿಸುತ್ತದೆ. 2019ರಲ್ಲಿ ಶೇ.960 ರಷ್ಟು ಮಂದಿ ಆಗಮಿಸಿ ಉಲ್ಬಣವು ಏರಿಕೆಯಾಗಿತ್ತು ಎಂದು ಅಧಿಕೃತ ಅಂಕಿಅಂಶಗಳು ಹೇಳುತ್ತವೆ.

“ವಲಸಿಗರನ್ನು ನಿಯಂತ್ರಿಸುವ ಬ್ರಿಟಿಷ್ ಜನರಿಗೆ ನೀಡಿದ ಬದ್ಧತೆಯನ್ನು ಸರ್ಕಾರ ಜಾರಿಗೊಳಿಸುತ್ತಿದೆ. ಸಂಖ್ಯೆಗಳನ್ನು ಶೀಘ್ರವಾಗಿ ಕಡಿಮೆಗೊಳಿಸುವುದು, ನಮ್ಮ ಗಡಿ ನಿಯಂತ್ರಣ ಹಾಗೂ ವ್ಯವಸ್ಥಿತವಾದ ನಮ್ಮ ವಲಸಿಗ ಪದ್ಧತಿಯಿಂದ ಜನರನ್ನು ತಡೆಯುವುದಕ್ಕೆ ನಾವು ಕಠಿಣ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಈ ಕಾಯ್ದೆ ಈ ವರ್ಷ ಪೂರ್ತಿಯಾಗಿ ಜಾರಿಗೆ ಬರಲಿದೆ ಎಂದು ಗೃಹ ಇಲಾಖೆ ಪ್ರಕಟಣೆ ತಿಳಿಸಿದೆ.

ಅಕ್ರಮ ವಲಸಿಗರನ್ನು ತಡೆಯುವ ಮೂಲಕ ವಿದ್ಯಾರ್ಥಿ ವಿಸಾ ನಿಯಂತ್ರಣದೊಂದಿಗೆ ಸಮತೋಲನೆ ಕಾಪಾಡಿಕೊಂಡು ವಿಶ್ವದ ಮುಂಚೂಣಿ ಉನ್ನತ ಶಿಕ್ಷಣ ವಲಯಗಳನ್ನು ಉಳಿಸಿಕೊಳ್ಳಲಾಗುತ್ತದೆ. ಇದಕ್ಕಾಗಿ ವಿಶ್ವವಿದ್ಯಾಲಯಗಳಲ್ಲಿ ಪರ್ಯಾಯ ವಿಧಾನಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಗೃಹ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದಲ್ಲಿನ ಕಾನೂನು ಬಾಹಿರ ಹಾಗೂ ಕಾನೂನು ಬದ್ಧ ವಲಸಿಗರನ್ನು ಕಡಿಮೆಗೊಳಿಸುವ ನಿರ್ಧಾರಕ್ಕೆ ರಿಶಿ ಸುನಕ್ ನೇತೃತ್ವದ ಇಂಗ್ಲೆಂಡ್‌ ಸರ್ಕಾರ ಬದ್ಧವಾಗಿದೆ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X