ನಿಯಂತ್ರಣ ತಪ್ಪಿ 108 ಆ್ಯಂಬುಲೆನ್ಸ್ ಅಪಘಾತವಾಗಿ ಇಬ್ಬರು ಭಕ್ತರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ತಿರುಪತಿಯಲ್ಲಿ ಸೋಮವಾರ ನಡೆದಿದೆ.
ತಿರುಪತಿ ತಿರುಮಲ ದೇವಾಲಯಕ್ಕೆ ಸಾಗುತ್ತಿದ್ದ ಭಕ್ತರ ಗುಂಪಿನ ಮೇಲೆ ಆ್ಯಂಬುಲೆನ್ಸ್ ಹರಿದಿದೆ. ಚಂದ್ರಗಿರಿ ಮಂಡಲದ ನರಸಿಂಗಪುರದಲ್ಲಿ ಈ ಅಪಘಾತ ನಡೆದಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಸಿ ಟಿ ರವಿಗೆ ಸ್ವಾಗತಿಸಿದ್ದ 7 ಆ್ಯಂಬುಲೆನ್ಸ್ ವಿರುದ್ಧ ಎಫ್‌ಐಆರ್
ಸ್ಥಳದಲ್ಲೇ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು ಮೂವರು ಗಾಯಗೊಂಡಿದ್ದಾರೆ. ಮೃತರನ್ನು ಅನ್ನಮಯ್ಯ ಜಿಲ್ಲೆಯ ರಾಮಸಮುದ್ರ ಮಂಡಲದ ಪೆಡ್ಡ ರೆದ್ದಮ್ಮ (40) ಮತ್ತು ಲಕ್ಷ್ಮಮ್ಮ (45) ಎಂದು ಗುರುತಿಸಲಾಗಿದೆ.
ಆ್ಯಂಬುಲೆನ್ಸ್‌ನಲ್ಲಿ ರೋಗಿಯೊಬ್ಬರು ಇದ್ದರು ಎಂದು ಹೇಳಲಾಗಿದೆ. ಸದ್ಯ ಗಾಯಾಳುಗಳನ್ನು ತಿರುಪತಿಯ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದೆ.
ಇನ್ನು ಈ ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿರಲಿಲ್ಲ. ಪೊಲೀಸರು ದಟ್ಟವಾಗಿ ಆವರಿಸಿದ ಮಂಜಿನಿಂದಾಗಿ ಈ ಅಪಘಾತ ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಚಂದ್ರಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ.
