ಯುವಕ, ಯುವತಿಯರಿಬ್ಬರಿಗೂ ಪ್ರೇಮಾಂಕುರವಾಗಿತ್ತು. ಯುವತಿಯು ಯುವಕನನ್ನು ಮದುವೆಯಾಗಲು ಒಪ್ಪಿಗೆ ನೀಡಿದ್ದಳು. ಆಕೆಯ ಕುಟುಂಬದವರು ಸಮ್ಮತಿಸಿದ್ದರು. ವಿವಾಹವಾಗುವ ಸಂಭ್ರಮದಲ್ಲಿದ್ದ ಯುವಕ ‘ಸ್ವರ್ಗಕ್ಕೆ ಮೂರೇ ಗೇಣು’ ಅಂದುಕೊಂಡು ಮದುವೆಯ ತಯಾರಿ ಮಾಡಿಕೊಂಡ. ಲಗ್ನವಾಗುವ ಮುನ್ನಾದಿನ ಯುವತಿ ಮನೆಯವರು ಕಾಯ್ದಿರಿಸಿದ್ದ ಮದುವೆ ಮಂಟಪದ ಸ್ಥಳಕ್ಕೆ ಅದ್ಧೂರಿ ಮೆರವಣಿಗೆಯೊಂದಿಗೆ ಆಗಮಿಸಿದ್ದಾನೆ. ಸ್ಥಳಕ್ಕೆ ಬಂದು ನೋಡಿದರೆ ಆಘಾತ ಕಾದಿತ್ತು ವಧುವಾಗಲಿ ಆಕೆಯ ಕುಟುಂಬದವರಾಗಲಿ ಕಾಣಲಿಲ್ಲ. ಅಸಲಿಗೆ ಮದುವೆ ಮಂಟಪವು ಅಲ್ಲಿರಲಿಲ್ಲ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶ ದ ಲಖನೌದ ರಹೀಮಾಬಾದ್ ಪ್ರದೇಶದಲ್ಲಿ.
ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಸೋನು ಎಂಬಾತ ಚಂಡೀಗಢದ ಕಾಜಲ್ ಎಂಬ ಮಹಿಳೆಯನ್ನು ಕೆಲವು ತಿಂಗಳ ಹಿಂದೆ ಭೇಟಿಯಾಗಿದ್ದ. ಇಬ್ಬರ ಭೇಟಿ ಪರಸ್ಪರ ಪ್ರೇಮಕ್ಕೆ ತಿರುಗಿ ಮದುವೆಯಾಗುವುದಾಗಿ ನಿರ್ಧರಿಸಿದ್ದಾರೆ. ಶೀಶ್‌ಪಾಲ್ ಎಂಬ ಯುವತಿ ಕಾಜಲ್ ತಂದೆ ಎಂಬುವವರೊಂದಿಗೆ ಸೋನು ಫೋನ್ ಮೂಲಕ ಮಾತನಾಡಿದ್ದಾನೆ. ಅವರು ಕೂಡ ಮದುವೆಗೆ ಸಮ್ಮತ್ತಿಸಿದ್ದರು. ಮದುವೆಯ ದಿನಾಂಕವನ್ನು ಜುಲೈ 11 ರಂದು ನಿಶ್ಚಿಯಿಸಿ ಮಂಟಪದ ವಿಳಾಸವನ್ನು ವರನ ಕಡೆಯವರಿಗೆ ನೀಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ; ‘ಚಾನ್ಸೇ ಇಲ್ಲ’ ಎಂದ ಕೇಂದ್ರ ಸಚಿವ ಮಾಂಝಿ
ಮದುವೆಯ ಹಿಂದಿನ ದಿನ ಜುಲೈ 10ರಂದು ಆರತಕ್ಷತೆ ನಡೆಯುವ ದಿನ ಮಧುಮಗ ಸೋನು, ವದು ಕಾಜಲ್‌ನೊಂದಿಗೆ ಮಾತನಾಡಿದ್ದಾನೆ. ಸೋನುವಿನೊಂದಿಗೆ ಮಾತನಾಡುವ ಸಂದರ್ಭದಲ್ಲಿ ಆಕೆ ಮದುವೆಯ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು ಸಂಬಂಧಿಕರೆಲ್ಲರು ಮಂಟಪ ಹಾಗೂ ಮನೆಯ ಬಳಿ ಬಂದಿದ್ದಾರೆ ಎಂದು ಭರವಸೆ ನೀಡಿದ್ದಳು. ನಾನು ಈಗ ಹೆಚ್ಚು ಮಾತನಾಡುವುದಕ್ಕೆ ಸಾಧ್ಯವಿಲ್ಲ ನೀವು ಮೆರವಣಿಗೆಯೊಂದಿಗೆ ಮಂಟಪದ ಸ್ಥಳಕ್ಕೆ ಆಗಮಿಸಿ ಎಂದು ಫೋನ್ ಸ್ಥಗಿತಗೊಳಿಸಿದ್ದಳು.
ಇವರಿಬ್ಬರ ಈ ಮಾತಿನ ನಂತರ ಫೋನ್ ಸ್ವಿಚ್ ಆಫ್ ಆಗಿತ್ತು. ಕಾಜಲ್ ನೀಡಿದ್ದ ಲಖನೌದ ರಹೀಮಾಬಾದ್ ಪ್ರದೇಶದಲ್ಲಿ ಮಂಟಪದ ಸ್ಥಳ ಎನ್ನಲಾದ ಪ್ರದೇಶಕ್ಕೆ ಸೋನು ಹಾಗೂ ಆತನ ಕುಟುಂಬದವರು ಮೆರೆವಣಿಗೆಯೊಂದಿಗೆ ಆಗಮಿಸಿದಾಗ ಅಲ್ಲಿ ಮಂಟಪವು ಇರಲಿಲ್ಲ. ವಧು ಹಾಗೂ ಆಕೆಯ ಕುಟುಂಬದವರು ಮೊದಲೇ ಕಾಣಲಿಲ್ಲ. ಸ್ಥಳೀಯರನ್ನು ವಿಚಾರಿಸಿದಾಗ ಅಂತಹ ಸ್ಥಳ ಇಲ್ಲವೆಂದು ತಿಳಿಸಿದ್ದಾರೆ. ರಾತ್ರಿಯಿಡಿ ವಧು ಹಾಗೂ ಆಕೆಯ ಕುಟುಂಬದವರಿಗೆ ಫೋನ್ ಮಾಡಿದಾಗ ಎಲ್ಲರ ಮೊಬೈಲ್‌ಗಳು ಸ್ವಿಚ್ ಆಫ್ ಆಗಿದ್ದವು.
ಬೇಸರ ಹಾಗೂ ಆಕ್ರೋಶದೊಂದಿಗೆ ವರನ ಕುಟುಂಬ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮೋಸ ಮಾಡಿದ ವಧುವಿನ ಕುಟುಂಬದ ವಿರುದ್ಧ ದೂರು ನೀಡಲಾಗಿದೆ. ಲಖನೌ ಜಂಟಿ ಆಯುಕ್ತ ಆಕಾಶ್ ಕುಲಾರಿ, ಪ್ರಕರಣ ದಾಖಲಿಸಲಾಗಿದೆ. ವಧು ಹಾಗೂ ಆಕೆಯ ಕುಟುಂಬದ ಸ್ಥಳವನ್ನು ಪತ್ತೆ ಹಚ್ಚುವುದಾಗಿ ಮಾಹಿತಿ ನೀಡಿದ್ದಾರೆ.