ತನ್ನೊಂದಿಗೆ ಲೈಂಗಿಕ ಕೃತ್ಯದಲ್ಲಿ ತೊಡಗಲು ನಿರಾಕರಿಸಿದ ಕಾರಣಕ್ಕೆ ಕಾಮುಕ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನೇ ಕೊಂದಿರುವ ಘಟನೆ ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ನಡೆದಿದೆ.
ಕೌಶಾಂಬಿ ಜಿಲ್ಲೆಯ ಸರಾಯಿ ಆಕಿಲ್ ಪ್ರದೇಶದ ಬರಾಯಿ ಗ್ರಾಮದ ಸಾವರಿ ದೇವಿ (60) ಮೃತ ಮಹಿಳೆ. ಆಕೆಯನ್ನು ಅದೇ ಗ್ರಾಮದ ದಿನೇಶ್ ಕುಮಾರ್ ಸೇನ್ (45) ಎಂಬಾತ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಸಾವರಿ ದೇವಿ ಮತ್ತು ದಿನೇಶ್ ಕುಮಾರ್ ಸೇನ್ ನಡುವೆ ಪ್ರೇಮ ಬೆಳೆದಿತ್ತು. ಇಬ್ಬರೂ ಪರಿಸ್ಪರರನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಮೇ 25ರಂದು ಸಾವರಿ ದೇವಿ ಅವರ ಮೃತದೇಹವು ನಗ್ನ ಸ್ಥಿತಿಯಲ್ಲಿ ಅವರ ಮನೆಯಲ್ಲಿ ಪತ್ತೆಯಾಗಿತ್ತು. ಆಕೆಯ ಕುತ್ತಿಗೆಯನ್ನು ಬಟ್ಟೆಯಿಂದ ಬಿಗಿದು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಕೆ ಆರಂಭಿಸಿದ್ದರು. ಇದೀಗ, ಆರೋಪಿ ದಿನೇಶ್ ಸೇನ್‌ಅನ್ನು ಬಂಧಿಸಲಾಗಿದೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಕೌಶಂಬಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಸಿಂಗ್, “ಕೃತ್ಯವನ್ನು ತಾನೇ ಎಸಗಿರುವುದಾಗಿ ಆರೋಪಿ ದಿನೇಶ್ ಕುಮಾರ್ ಸೇನ್ ಒಪ್ಪಿಕೊಂಡಿದ್ದಾನೆ. ಮೃತ ಮಹಿಳೆಯ ಪತಿ ವಿವಾಹವಾದ ಕೆಲವೇ ವರ್ಷಗಳಲ್ಲಿ ಆಕೆಯನ್ನು ತೊರೆದು ದೂರವಾಗಿದ್ದರು. ಆಕೆಗೆ ಮಕ್ಕಳು ಇರಲಿಲ್ಲ. ಏಕಾಂಗಿಯಾಗಿ ವಾಸಿಸುತ್ತಿದ್ದ ಮಹಿಳೆಗೆ ಆರೋಪಿ ದಿನೇಶ್ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದನು. ದಿನಕಳೆದಂತೆ ಇಬ್ಬರ ನಡುವೆ ಪ್ರೇಮ ಮತ್ತು ದೈಹಿಕ ಸಂಬಂಧ ಬೆಳೆದಿತ್ತು” ಎಂದು ತಿಳಿಸಿದ್ದಾರೆ.
“ವಿಚಾರಣೆ ವೇಳೆ ಹಲವು ಮಾಹಿತಿಗಳನ್ನು ಹಂಚಿಕೊಂಡಿರುವ ದಿನೇಶ್, ‘ರಾತ್ರಿ ವೇಳೆ ನಾನು ಮತ್ತು ಸಾವರಿ ದೇವಿ ಫೋನ್‌ನಲ್ಲಿ ಮಾತನಾಡುತ್ತಿದ್ದೇವು. ಮೇ 23ರಂದು ಆಕೆಯೊಂದಿಗೆ ಫೋನ್‌ನಲ್ಲಿ ಮಾತನಾಡಿದ ನಂತರ, ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ ಆಕೆಯ ಮನೆಗೆ ಹೋಗಿ ಲೈಂಗಿಕ ಬಯಕೆಯನ್ನು ವ್ಯಕ್ತಪಡಿಸಿದ್ದೆ. ಆದರೆ, ನನ್ನ ಕೋರಿಯನ್ನು ಆಕೆ ನಿರಾಕರಿಸಿದರು. ಆಕೆಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಲು ಮುಂದಾದೆ. ಈ ವೇಳೆ ಗಲಾಟೆ ನಡೆದು, ಆಕೆಯ ಗುತ್ತಿಗೆಗೆ ಬಟ್ಟೆ ಬಿಗಿದು, ಹತ್ಯೆ ಮಾಡಿದೆ’ನೆಂದು ಆರೋಪಿ ಒಪ್ಪಿಕೊಂಡಿದ್ಧಾನೆ” ಎಂದು ಎಸ್‌ಪಿ ತಿಳಿಸಿದ್ದಾರೆ.
ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಜೈಲಿಗೆ ಕಳಿಸಲಾಗಿದೆ.