ಚಲಿಸುತ್ತಿದ್ದ ಕಾರಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದು, ಈ ವೇಳೆ ಆಕೆಯ ಸ್ನೇಹಿತೆಯನ್ನು ಕಾರಿನಿಂದ ಕೆಳಕ್ಕೆ ತಳ್ಳಿದ್ದರಿಂದ, ಆಕೆ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ.
ನಂತರ, ಕಾರಿನಿಂದ ತಪ್ಪಿಸಿಕೊಂಡಿರುವ ಸಂತ್ರಸ್ತ ಬಾಲಕಿಯು, ಈ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾಳೆ. ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಉದ್ಯೋಗ ಕೊಡಿಸುವ ಭರವಸೆ ನೀಡಿ ಹಾಗೂ ಲಖನೌಗೆ ಕಾರಿನಲ್ಲಿ ಬಿಡುತ್ತೇವೆ ಎಂದು ಹೇಳಿ ಮಂಗಳವಾರ ಸಂಜೆ ನನ್ನನ್ನು ಹಾಗೂ ನನ್ನ ಸ್ನೇಹಿತೆಯನ್ನು ಆರೋಪಿಗಳು ಕಾರಿನಲ್ಲಿ ಕರೆದೊಯ್ದರು ಎಂದು ಸಂತ್ರಸ್ತ ಬಾಲಕಿಯು ಪೊಲೀಸರಿಗೆ ತಿಳಿಸಿದ್ದಾಳೆ. ಈ ವೇಳೆ ಆರೋಪಿಗಳು ಕಾರಿನಲ್ಲೇ ಮದ್ಯಪಾನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರೇಟರ್ ನೊಯ್ಡಾ ನಿವಾಸಿಗಳಾದ ಸಂದೀಪ್ ಮತ್ತು ಅಮಿತ್ ಹಾಗೂ ಘಾಝಿಯಾಬಾದ್ ನಿವಾಸಿಯಾದ ಗೌರವ್ ಮತ್ತು ಸಂತ್ರಸ್ತ ಬಾಲಕಿಯ ನಡುವೆ ಈ ಕುರಿತು ಜಗಳ ಪ್ರಾರಂಭವಾದಾಗ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯ ಸ್ನೇಹಿತೆಯನ್ನು ಮೀರತ್ ಜಿಲ್ಲೆಯಲ್ಲಿ ಕಾರಿನಿಂದ ತಳ್ಳಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಸ್ನೇಹಿತೆ ಮೃತಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಶಿಮ್ಲಾ ಒಪ್ಪಂದದತ್ತ ಕಣ್ಣು ಹಾಯಿಸಬೇಕಿದೆ ಭಾರತ-ಪಾಕ್
ಆಗ ಕಾರಿನಲ್ಲಿಯೇ ಇದ್ದ ಸಂತ್ತಸ್ತ ಬಾಲಕಿಯ ಮೇಲೆ ಆರೋಪಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆಕೆ ಮೀರತ್ ನಿಂದ ಸುಮಾರು 100 ಕಿಮೀ ದೂರವಿರುವ ಬುಲಂದ್‌ಶಹರ್ ಜಿಲ್ಲೆಯ ಖುರ್ಜಾ ಬಳಿ ಕಾರಿನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ನಂತರ, ಸಂತ್ರಸ್ತೆ ನೀಡಿದ ಮಾಹಿತಿಯನ್ನಾಧರಿಸಿ, ಆಲಿಗಢ-ಬುಲಂದ್ ಶಹರ್ ಹೆದ್ದಾರಿಯಲ್ಲಿ ಆರೋಪಿಗಳ ಕಿಯಾ ಸೆಲ್ಟೋಸ್ ಕಾರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಆರೋಪಿಗಳಾದ ಗೌರವ್ ಹಾಗೂ ಸಂದೀಪ್ ಕಾಲಿಗೆ ಗುಂಡಿಕ್ಕಿ ಬಂಧಿಸಿಲಾಯಿತು.
ಆರೋಪಿಗಳಿಂದ ಎರಡು ಅಕ್ರಮ ಪಿಸ್ತೂಲ್ ಗಳು, ಜೀವಂತ ಹಾಗೂ ಖಾಲಿ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬುಲಂದ್ ಶಹರ್ ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಈ ಘಟನೆಯ ಸಂಬಂಧ ಬುಧವಾರದಂದು ಖುರ್ಜಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಎಫ್ಐಆರ್ ದಾಖಲಾಗಿದೆ.