ಅಮೆರಿಕದಿಂದ ಗಡಿಪಾರಾದ 104 ಅಕ್ರಮ ವಲಸಿಗರು ಭಾರತಕ್ಕೆ ವಾಪಸ್

Date:

Advertisements

ಅಮೆರಿಕದಿಂದ ಗಡಿಪಾರುಗೊಂಡ 104 ಭಾರತೀಯ ಪ್ರಜೆಗಳನ್ನು ಹೊತ್ತ ಅಮೆರಿಕದ ಮಿಲಿಟರಿ ಸಿ -17 ವಿಮಾನವು ಇಂದು ಮಧ್ಯಾಹ್ನ ಪಂಜಾಬ್‌ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದು ಇಳಿಯಿತು.

ಮಂಗಳವಾರ ಮಧ್ಯಾಹ್ನ ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಿಂದ ಹೊರಟ ಈ ವಿಮಾನದಲ್ಲಿ 11 ಸಿಬ್ಬಂದಿ ಮತ್ತು 45 ಅಮೆರಿಕದ ಅಧಿಕಾರಿಗಳು ಇದ್ದರು. ವರದಿಗಳ ಪ್ರಕಾರ ಗುಜರಾತ್ ಮತ್ತು ಹರಿಯಾಣ ಮೂಲದವರು ತಲಾ 33 ಜನರಿದ್ದಾರೆ. 30 ಜನರು ಪಂಜಾಬ್, ತಲಾ ಇಬ್ಬರು ಪ್ರಯಾಣಿಕರು ಉತ್ತರ ಪ್ರದೇಶ ಮತ್ತು ಚಂಡೀಗಢದವರು, ಮೂವರು ಮಹಾರಾಷ್ಟ್ರ ಮೂಲದವರು ಎಂದು ತಿಳಿದು ಬಂದಿದೆ.

ಇದರಲ್ಲಿ 25 ಮಹಿಳೆಯರು ಮತ್ತು 12 ಅಪ್ರಾಪ್ತ ವಯಸ್ಕರು ಸೇರಿದ್ದಾರೆ. 48 ಮಂದಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎನ್ನಲಾಗಿದೆ. ಪಂಜಾಬ್‌ನ 30 ಜನರಲ್ಲಿ ಹೆಚ್ಚಿನವರು ಗುರುದಾಸ್‌ಪುರ, ಅಮೃತಸರ ಮತ್ತು ತರಣ್ ಸೇರಿದಂತೆ ಗಾಜಾ ಪಟ್ಟಿಯಿಂದ ಬಂದವರು, ಇತರರು ಜಲಂಧರ್, ನವನ್‌ಶಹರ್, ಪಟಿಯಾಲ, ಮೊಹಾಲಿ ಮತ್ತು ಸಂಗ್ರೂರ್‌ನವರು ಎಂದು ಪಂಜಾಬ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಿದ್ರಿಸುವ ಸಚಿವರು, ಪ್ರಶ್ನಿಸದ ಸಂಸದರು- ಕರ್ನಾಟಕದ ಹಿತ ಕಾಪಾಡುವವರು ಯಾರು?

ಬಹುತೇಕ ಮಂದಿ ವಿಸಾ ಅವಧಿ ಅಂತ್ಯವಾದ ಬಳಿಕವೂ ಅಕ್ರಮವಾಗಿ ನೆಲೆಸಿದ್ದರು. ಅಮೆರಿಕಾದಿಂದ ಬರುವ ಭಾರತೀಯರಿಗಾಗಿ ಪಂಜಾಬ್ ಪೊಲೀಸರು ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಪಂಜಾಬ್ ಡಿಜಿಪಿ ಗೌರವ್ ಯಾದವ್, ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಾವು ಇದರ ಬಗ್ಗೆ ಚರ್ಚಿಸಿದ್ದೇವೆ. ಪಂಜಾಬ್ ಸರ್ಕಾರ ಅವರನ್ನು ಸ್ನೇಹಪರ ರೀತಿಯಲ್ಲಿ ಸ್ವೀಕರಿಸಬೇಕೆಂದು ಅವರು ನಮ್ಮನ್ನು ಕೇಳಿಕೊಂಡಿದ್ದಾರೆ. ಇದಕ್ಕಾಗಿ ವಿಮಾನ ನಿಲ್ದಾಣದಲ್ಲಿ ನಮ್ಮ ಕೌಂಟರ್‌ಗಳನ್ನು ಸ್ಥಾಪಿಸಿದ್ದೇವೆ. ನಾವು ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ನಮಗೆ ಯಾವುದೇ ಹೆಚ್ಚಿನ ಮಾಹಿತಿ ಸಿಕ್ಕಾಗಲೆಲ್ಲಾ ನಾವು ಅದನ್ನು ಹಂಚಿಕೊಳ್ಳುತ್ತೇವೆ. ಹೆಚ್ಚಿನ ಸಂಖ್ಯೆಯ ಜನರನ್ನು ಗಡಿಪಾರು ಮಾಡುವ ಸಾಧ್ಯತೆಯಿದೆ ಎಂಬ ದೃಢೀಕರಿಸದ ವರದಿಗಳು ಇನ್ನೂ ನಮ್ಮಲ್ಲಿವೆ ಎಂದು ಹೇಳಿದರು.

ಗಡಿಪಾರದ ಬಹುತೇಕರನ್ನು ಅಮೆರಿಕ – ಮೆಕ್ಸಿಕೊ ಗಡಿಯಲ್ಲಿ ಬಂಧಿಸಲಾಗಿತ್ತು. ಸೆರೆಸಿಕ್ಕವರ ಬಳಿ ಪಾಸ್‌ಪೋರ್ಟ್‌ ಇರಲಿಲ್ಲ. ಬಯೋಮೆಟ್ರಿಕ್‌ ಮೂಲಕ ಪತ್ತೆಹಚ್ಚಲಾಗಿತ್ತು. ಈ ಮೊದಲು 200 ಮಂದಿಯನ್ನು ಮೊದಲ ಹಂತದಲ್ಲಿ ಗಡಿಪಾರು ಮಾಡಲಾಗಿದೆಯೆಂದು ಹೇಳಲಾಯಿತಾದರೂ, ಆನಂತರ 104 ಎಂದು ದೃಢೀಕರಿಸಲಾಗಿದೆ.

ಅಮೆರಿಕದ ಇತಿಹಾಸದಲ್ಲಿಯೇ ಅತೀ ಹೆಚ್ಚು ಜನರನ್ನು ಗಡಿಪಾರು ಮಾಡಲಾಗುತ್ತಿದೆ. ಅಮೆರಿಕದ ಕಸ್ಟಮ್ಸ್‌ ಮತ್ತು ವಲಸೆ ಜಾರಿ ನಿರ್ದೇಶನಾಲಯವು ದಾಖಲೆರಹಿತ 18 ಸಾವಿರ ಭಾರತೀಯರನ್ನು ಗುರುತಿಸಿದೆ. ಸುಮಾರು 7 ಲಕ್ಷಕ್ಕೂ ಹೆಚ್ಚು ಭಾರತೀಯ ಅಕ್ರಮ ವಲಸಿಗರು ಅಮೆರಿಕದಲ್ಲಿ ನೆಲಸಿದ್ದಾರೆ ಎಂದು ಅಂದಾಜಿಸಲಾಗಿದೆ. ಮೆಕ್ಸಿಕೊ, ಎಲ್‌ ಸಾಲ್ವಡಾರ್‌ ನಂತರ ಭಾರತದವರು ಅತಿ ಹೆಚ್ಚು ಅಕ್ರಮ ವಲಸಿಗರಾಗಿದ್ದಾರೆ.

https://twitter.com/PTI_News/status/1887061990675456309?ref_src=twsrc%5Etfw%7Ctwcamp%5Etweetembed%7Ctwterm%5E1887061990675456309%7Ctwgr%5Ea739d8e7e03788ee00076ccfabbd8933cb9112e2%7Ctwcon%5Es1_&ref_url=https%3A%2F%2Fwww.deccanherald.com%2F%2Findia%2Fpunjab%2Fus-plane-carrying-104-deported-indians-lands-in-amritsar-3390539

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X