ಉತ್ತರ ಪ್ರದೇಶದಲ್ಲಿ ಶುಕ್ರವಾರ ಕನಿಷ್ಠ 15 ಚುನಾವಣಾ ಸಿಬ್ಬಂದಿ ಬಿಸಿಲಿನ ತಾಪಕ್ಕೆ ಬಲಿಯಾಗಿದ್ದು, ಬಿಸಿಲಿನ ತಾಪದಿಂದ ಸಿಬ್ಬಂದಿ ಮತ್ತು ಮತದಾರರನ್ನು ರಕ್ಷಿಸಲು ಎಲ್ಲಾ ಮತಗಟ್ಟೆಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಿರ್ಜಾಪುರ ಜಿಲ್ಲೆಯ ಹದಿಮೂರು ಚುನಾವಣಾ ಸಿಬ್ಬಂದಿಗಳು ಬಿಸಿಗಾಳಿಯಿಂದಾಗಿ ತೀವ್ರ ಜ್ವರ ಮತ್ತು ಅಧಿಕ ರಕ್ತದೊತ್ತಡ ಉಂಟಾಗಿ ಸಾನ್ನಪ್ಪಿದ್ದಾರೆ. ಇನ್ನೂ ಇಪ್ಪತ್ತಮೂರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋನ್‌ಭದ್ರಾ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಇನ್ನೂ ಇಬ್ಬರು ಸಾವನ್ನಪ್ಪಿದ್ದಾರೆ. ಒಂಬತ್ತು ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| ಕೊನೆಯ ಹಂತದ ಮತದಾನ ಆರಂಭ, ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳ ಪಟ್ಟಿ
ಮುಖ್ಯ ಚುನಾವಣಾಧಿಕಾರಿ ನವ್‌ದೀಪ್ ರಿನ್ವಾ, ಮತದಾನ ಕೇಂದ್ರಗಳಲ್ಲಿ ತಂಪಾದ ಕುಡಿಯುವ ನೀರು, ಸಾಕಷ್ಟು ನೆರಳು, ಫ್ಯಾನ್‌ಗಳು ಮತ್ತು ವೃದ್ಧರು, ಮಹಿಳೆಯರು ಮತ್ತು ಅಂಗವಿಕಲರಿಗೆ ಕುಳಿತುಕೊಳ್ಳುವ ವ್ಯವಸ್ಥೆಗಳನ್ನು ಮಾಡಲು ರಿನ್ವಾ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.
अपनी जिम्मेदारी हम निभाएंगे, मतदान करने समय से जाएंगे
लोक सभा सामान्य निर्वाचन क्षेत्र घोसी में सातवें चरण के अन्तर्गत मतदाताओं की लगी लंबी कतार। #7thPhase #ECI #LokSabhaElection2024 #ChunavKaParv #DeshKaGarv #IVote4Sure #MainHoonNaa #Ek_Vote_Desh_K_Liye@ecisveep… pic.twitter.com/5170FqvHfj
— CEO UP #IVote4Sure (@ceoup) June 1, 2024
“ಬಿಸಿಗಾಳಿಯಿಂದ ರಕ್ಷಿಸಲು, ಪ್ರತಿ ಮತಗಟ್ಟೆ ಮತ್ತು ಮತದಾನದ ಸ್ಥಳದಲ್ಲಿ ವೈದ್ಯಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರಿಗೆ ಸಾಕಷ್ಟು ಪ್ರಮಾಣದ ಒಆರ್‌ಎಸ್ ಮತ್ತು ವೈದ್ಯಕೀಯ ಕಿಟ್‌ಗಳು ಲಭ್ಯವಾಗುವಂತೆ ಮಾಡಬೇಕು” ಎಂದು ತಿಳಿಸಿದ್ದಾರೆ.
“ಸೆಕ್ಟರ್ ಮ್ಯಾಜಿಸ್ಟ್ರೇಟ್ ಜೊತೆಗೆ ಅರೆವೈದ್ಯಕೀಯ ಸಿಬ್ಬಂದಿಯನ್ನು ಸಹ ನಿಯೋಜಿಸಬೇಕು. ತುರ್ತು ಆಂಬ್ಯುಲೆನ್ಸ್ ಸೇವೆ ಸಂಬಂಧಪಟ್ಟ ಸ್ಥಳದಲ್ಲಿ ಲಭ್ಯವಿರಬೇಕು” ಎಂದು ಸೂಚಿಸಿದ್ದಾರೆ.
ಇದನ್ನು ಓದಿದ್ದೀರಾ? ಚುನಾವಣೆ | 155 ರ್‍ಯಾಲಿಗಳು: 2942 ಬಾರಿ ಕಾಂಗ್ರೆಸ್ ಜಪಿಸಿದ ಮೋದಿ; ಕಾಣೆಯಾದ ಉದ್ಯೋಗ/ಅಮೃತಕಾಲ
ಮತದಾರರು ಹಾಗೂ ಮತಗಟ್ಟೆ ಸಿಬ್ಬಂದಿ ತಿಳಿ ಕಾಟನ್ ಬಟ್ಟೆ ಧರಿಸುವಂತೆ ಸಿಇಒ ಸಲಹೆ ನೀಡಿದರು. ಕ್ಯಾಪ್, ಛತ್ರಿ ಮತ್ತು ಬಿಳಿ ಹತ್ತಿ ಟವೆಲ್ ಅಥವಾ ಇತರ ಯಾವುದೇ ಬಟ್ಟೆಯನ್ನು ತಲೆಯನ್ನು ಮುಚ್ಚಲು ಸಲಹೆ ನೀಡಿದರು.
ನೀರಿನ ಬಾಟಲಿ ನಿಮ್ಮ ಬಳಿಯೇ ಇಟ್ಟುಕೊಳ್ಳಿ, ನೀರನ್ನು ಆಗಾಗೆ ಕುಡಿಯುತ್ತಿರಿ, ಸರಳ ನೀರು, ನಿಂಬೆ ಪಾನಕ ಅಥವಾ ಒಆರ್‌ಎಸ್ ಬಳಸಬೇಕು ಎಂದು ಮಾಹಿತಿ ನೀಡಿದರು.