ಉತ್ತರ ಪ್ರದೇಶದ ಕೌಶಾಂಬಿಯ ಬಿರ್ನರ್ ಗ್ರಾಮದಲ್ಲಿ ಪ್ರಬಲ ಜಾತಿಯ ದುರುಳರು 62 ವರ್ಷದ ದಲಿತ ವೃದ್ಧನಿಗೆ ಚಪ್ಪಲಿ ಹಾರ ಹಾಕಿ ಊರಿನಲ್ಲಿ ಮೆರವಣಿಗೆ ಮಾಡಿರುವ ಘಟನೆ ನಡೆದಿದೆ. ಜಾತಿ ದೌರ್ಜನ್ಯ ಎಸಗಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋಗೆ ಸಂಬಂಧಿಸಿದಂತೆ ಸರಾಯಿ ಅಕಿಲ್ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಕೌಶಾಂಬಿ ಪೊಲೀಸರು ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
A 65-year-old Dalit is being publicly humiliated, he is being paraded around the village with a garland of shoes around his neck, The upper caste village head husband and his associates are responsible for this act, incident happened in UP’s Kaushambi. https://t.co/anrkoIf6u5
— The Dalit Voice (@ambedkariteIND) June 21, 2024
ಕಿರುಕುಳ ನೀಡಿದ ಆರೋಪದಲ್ಲಿ ಪ್ರಬಲ ಜಾತಿಯ ಗ್ರಾಮ ಪ್ರಧಾನ್ ಅವರ ಪತಿ ಗುಲಾಬ್‌ಚಂದ್ ಗುಪ್ತಾ ಮತ್ತು ಆತನ ಸಹಚರರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
सोशल मीडिया पर वायरल हो रहे विडियो के सम्बन्ध में थाना सराय अकिल पुलिस द्वारा 05 अभियुक्तों को गिरफ्तार किया गया।#UPPolice #kaushambipolice pic.twitter.com/ep0w0vXqt8
— KAUSHAMBI POLICE (@kaushambipolice) June 20, 2024
ಗ್ರಾಮ ಪ್ರಧಾನ್‌ನ ಪತಿ ಗುಲಾಬ್‌ಚಂದ್ ಗುಪ್ತಾ ಅವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ, ಕಿರುಕುಳ ನೀಡಿದ್ದಾರೆ ಎಂದು ವೃದ್ಧ, ಸಂತ್ರಸ್ತ ಪ್ರೇಮನಾರಾಯಣ ರವಿದಾಸ್ ಹೇಳಿದ್ದಾರೆ.
E Sule Makkalannu Galligerisabeku