ಡಬಲ್ ಡೆಕ್ಕರ್ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಸುಮಾರು 7 ಮಂದಿ ಸಾವನ್ನಪ್ಪಿರುವ ಘಟನೆಯು ಉತ್ತರ ಪ್ರದೇಶದ ಇಟಾವಾದಲ್ಲಿರುವ ಆಗ್ರಾ ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದಿದೆ.
ಈ ಬಗ್ಗೆ ಮಾಹಿತಿ ನೀಡಿದ ಇಟಾವಾ ಎಸ್‌ಎಸ್‌ಪಿ ಸಂಜಯ್ ಕುಮಾರ್ ವರ್ಮಾ, “ರಾತ್ರಿ 12:30ರ ಸುಮಾರಿಗೆ ರಾಯ್‌ಬರೇಲಿಯಿಂದ ದೆಹಲಿಗೆ ಹೋಗುತ್ತಿದ್ದ ಡಬಲ್ ಡೆಕ್ಕರ್ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕೋಲಾರ | ಮರಕ್ಕೆ ಡಿಕ್ಕಿ ಹೊಡೆದು ಆಡಿ ಕಾರು ಅಪಘಾತ; ಮೂವರು ವಿದ್ಯಾರ್ಥಿಗಳು ಮೃತ್ಯು
“ಬಸ್‌ನಲ್ಲಿ 60 ಜನರಿದ್ದರು, ಅದರಲ್ಲಿ 4 ಜನರು ಸಾವನ್ನಪ್ಪಿದ್ದಾರೆ. ಸುಮಾರು 20-25 ಜನರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಮೂವರೂ ಕೂಡಾ ಸಾವನ್ನಪ್ಪಿದ್ದಾರೆ” ಎಂದು ಹೇಳಿದ್ದಾರೆ.
ಆಗ್ರಾದಿಂದ ಲಕ್ನೋಗೆ ತೆರಳುತ್ತಿದ್ದ ಕಾರೊಂದು ರಸ್ತೆಯ ಮಧ್ಯಭಾಗದಲ್ಲಿರುವ ನೆಟ್ ಡಿವೈಡರ್ ಅನ್ನು ದಾಟಿ ಒನ್‌ವೇ ದಾರಿಯಲ್ಲಿ ಬಂದಿದೆ ಎಂದು ವರದಿಯಾಗಿದೆ.
ಈ ಸಂದರ್ಭದಲ್ಲಿ ಕಾರು ಡಬ್ಬಲ್ ಡೆಕ್ಕರ್ ಸ್ಲೀಪರ್ ಬಸ್‌ಗೆ ಡಿಕ್ಕಿ ಹೊಡೆದಿದ್ದು ಬಸ್ ಚಾಲಕನ ನಿಯಂತ್ರಣ ತಪ್ಪಿ ಎಕ್ಸ್‌ಪ್ರೆಸ್‌ವೇಯಿಂದ 20 ಅಡಿ ಕೆಳಗೆ ಬಿದ್ದಿದೆ ಎಂದು ವರದಿ ಉಲ್ಲೇಖಿಸಿದೆ.
#WATCH | Etawah, Uttar Pradesh: 7 killed in a collision between a double-decker bus and car on Agra Lucknow Expressway
— ANI UP/Uttarakhand (@ANINewsUP) August 4, 2024
SSP Etawah Sanjay Kumar Verma says, "A double-decker bus going from Raebareli to Delhi collided with a car at around 12:30 am. There were 60 people on the bus,… pic.twitter.com/LcuMLYDLpN