ಪತ್ರಕರ್ತ ತೆರಳುತ್ತಿದ್ದ ಬಕ್‌ಗೆ ಡಿಕ್ಕಿ ಹೊಡೆದು, ಪತ್ರಕರ್ತನನ್ನು ಗುಂಡಿಕ್ಕೆ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ.
ಸೀತಾಪುರ ಬಳಿಕ ಲಕ್ನೋ-ದೆಹಲಿ ಹೆದ್ದಾರಿಯಲ್ಲಿ ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತ ಪತ್ರಕರ್ತನನ್ನು ರಾಘವೇಂದ್ರ ಬಾಜ್‌ಪೈ ಎಂದು ಹೆಸರಿಸಲಾಗಿದೆ. ಅವರು ಹಿಂದಿ ದಿನಪತ್ರಿಕೆಯಲ್ಲಿ ಸ್ಥಳೀಯ ವರದಿಗಾರರಾಗಿದ್ದರು.ಅಲ್ಲದೆ ಆರ್ಟಿಐ ಕಾರ್ಯಕರ್ತರೂ ಆಗಿದ್ದರು ಎಂದು ಹೇಳಲಾಗಿದೆ.
ಹಂತಕರು ಮೊದಲು ರಾಘವೇಂದ್ರ ಅವರ ಬೈಕ್‌ಗೆ ಡಿಕ್ಕಿ ಹೊಡೆದು, ಕೆಳಗೆ ಬೀಳಿಸಿದ್ದಾರೆ. ಬಳೀಕ, ಮೂರು ಬಾರಿ ಗುಂಡು ಹಾಕಿದ್ದಾರೆ ಎಂದು ವರದಿಯಾಗಿದೆ.
ಘಟನೆಯನ್ನು ಆರಂಭದಲ್ಲಿ ಅಪಘಾತ ಪ್ರಕರಣವೆಂದು ಪರಿಗಣಿಸಲಾಗಿತ್ತು. ಅದರೆ, ರಾಘವೇಂದ್ರ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ, ಅವರ ದೇಹದಲ್ಲಿ ಗುಂಡುಗಳು ಕಂಡುಬಂದಿವೆ. ಬಳಿಕ, ಕೊಲೆ ಪ್ರಕರಣವೆಂದು ಪರಿಗಣಿಸಿ, ಎಫ್‌ಐಆರ್ ದಾಖಲಿಸಲಾಗಿದೆ.
ಕೊಲೆಯ ಹಿಂದಿನ ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ. ತನಿಖೆ ನಡೆಯುತ್ತಿದೆ. ಪ್ರಕರಣದ ತನಿಖೆ ಮತ್ತು ಆರೋಪಿಗಳ ಹುಡುಕಾಟಕ್ಕಾಗಿ ಪೊಲೀಸರ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.