ಕಳೆದ ಮೂರು ದಿನಗಳಿಂದ ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸರಣಿ ಭೂಕುಸಿತ ಉಂಟಾಗಿದೆ. ತೆಹ್ರಿ ಗಡ್ವಾಲ್ ಭೂಕುಸಿತದಲ್ಲಿ ತಾಯಿ, ಮಗಳು ಜೀವಂತ ಸಮಾಧಿಯಾಗಿದ್ದಾರೆ.
ಶುಕ್ರವಾರ ತಡರಾತ್ರಿ ಸಂಭವಿಸಿದ ಭೂಕುಸಿತದಿಂದಾಗಿ ತಾಯಿ ಮತ್ತು ಮಗಳು ತಮ್ಮ ಮನೆಯ ಅವಶೇಷದಡಿಯಲ್ಲಿ ಹೂತು ಹೋಗಿದ್ದಾರೆ. ನಿದ್ರೆಯಲ್ಲಿದ್ದ ತಾಯಿ, ಮಗಳು ಅಲ್ಲಿಯೇ ಜೀವಂತ ಸಮಾಧಿಯಾಗಿದ್ದಾರೆ. ಇತರ ಕುಟುಂಬ ಸದಸ್ಯರು ಭೂಕುಸಿತವಾಗುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭೂಕುಸಿತ ಘಟನೆಯ ನಂತರ, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಪೊಲೀಸರು ಮತ್ತು ಕಂದಾಯ ಪೊಲೀಸರ ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಟೋಲಿ ಗ್ರಾಮಕ್ಕೆ ಧಾವಿಸಿವೆ. ಈ ನಡುವೆ ಭಾರೀ ಮಳೆಯಿಂದಾಗಿ ಭಿಲಂಗಾನ ಬ್ಲಾಕ್‌ನ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ. ಸೂಕ್ಷ್ಮ ಪ್ರದೇಶಗಳ ಗ್ರಾಮಸ್ಥರು ಜಾಗರೂಕರಾಗಿರಲು ಮತ್ತು ಎಚ್ಚರಿಕೆ ವಹಿಸುವಂತೆ ಆಡಳಿತವು ಮನವಿ ಮಾಡಿದೆ.
ಇದನ್ನು ಓದಿದ್ದೀರಾ? ಉತ್ತರಾಖಂಡ | ತಾತ್ಕಾಲಿಕ ಸೇತುವೆ ಕುಸಿತ; ನದಿಯಲ್ಲಿ ಕೊಚ್ಚಿ ಹೋದ ಪ್ರವಾಸಿಗರು
ಈ ಬಗ್ಗೆ ಟೋಲಿ ಗ್ರಾಮದ ಮುಖಂಡ ರಮೇಶ್ ಜಿರ್ವಾಲ್ ಮಾತನಾಡಿ, “ಕಳೆದ ರಾತ್ರಿ ಸುಮಾರು 2:30ರ ಸುಮಾರಿಗೆ ಈ ಪ್ರದೇಶದಲ್ಲಿ ಭಾರಿ ಮಳೆ ಸುರಿದಿದೆ. ಈ ಸಮಯದಲ್ಲಿ ಸ್ಥಳೀಯ ನಿವಾಸಿ ವೀರೇಂದ್ರ ಲಾಲ್ ಅವರ ಮನೆಯಲ್ಲಿ ಕಟ್ಟಡದ ಹಿಂದೆ ಸಂಭವಿಸಿದ ಭೂಕುಸಿತದಿಂದ ಮನೆಯ ಗೋಡೆಗೆ ಹಾನಿಯಾಗಿದೆ. ವೀರೇಂದ್ರ ಅವರ ಪತ್ನಿ ಸರಿತಾ ದೇವಿ (36) ಮತ್ತು ಅವರ 15 ವರ್ಷದ ಮಗಳು ಅಂಕಿತಾ ಮನೆಯ ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ” ಎಂದು ತಿಳಿಸಿದರು.
ಎಸ್‌ಡಿಆರ್‌ಎಫ್‌ನ ಇನ್ಸ್‌ಪೆಕ್ಟರ್ ಕವೀಂದ್ರ ಸಜ್ವಾನ್ ಮಾಹಿತಿ ನೀಡಿದ್ದು, “ಒಂದೂವರೆ ಗಂಟೆಗಳ ಕಾಲ ನಡೆದ ಕಠಿಣ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ನಂತರ ಎಸ್‌ಡಿಆರ್‌ಎಫ್ ತಂಡವು ಇಬ್ಬರ ಮೃತದೇಹವನ್ನು ಹೊರತೆಗೆದಿದೆ” ಎಂದು ಹೇಳಿದರು.
ವಿಪತ್ತು ನಿರ್ವಹಣಾ ಇಲಾಖೆಯ ಮೂಲಗಳ ಪ್ರಕಾರ, ಭೂಕುಸಿತದಿಂದ ತಿಂಗರ್ ಗ್ರಾಮದ ಜೂನಿಯರ್ ಹೈಸ್ಕೂಲ್ ಕಟ್ಟಡವು ಸಂಪೂರ್ಣ ಹಾನಿಯಾಗಿದೆ. ವಿಷನ್ ಗ್ರಾಮವನ್ನು ದಲಾ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ಕೊಚ್ಚಿಹೋಗಿದೆ.
Uttarakhand: Landslide destroys a school in Bhilangana Block, Tehri Garhwal district, after which the classes were ordered to be held online.
Heavy rainfall in the area has caused a flood-like situation. The police have advised locals to not venture near the river.… pic.twitter.com/24Fs2nzt1w
— Vani Mehrotra (@vani_mehrotra) July 27, 2024