ತಾವು ಪೂಜಿಸುತ್ತಿದ್ದ ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲವೆಂದು ಅರ್ಚಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ. ಮೃತ ಅರ್ಚಕನನ್ನು ಅಮಿತ್ ಶರ್ಮಾ ಎಂದು ಗುರುತಿಸಲಾಗಿದ್ದು, ಆತ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಳಿ ದೇವಿ ಪ್ರತ್ಯಕ್ಷವಾಗಬೇಕೆಂದು ಸತತ 24 ಗಂಟಗಳ ಕಾಲ ಅಮಿತ್ ಶರ್ಮಾ ಪೂಜೆ ಮಾಡಿದ್ದರು. ಆದರೆ, ದೇವಿ ಪ್ರತ್ಯಕ್ಷವಾಗಿಲ್ಲ. ಕುಪಿತಗೊಂಡ ಅರ್ಚಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಾರಾಣಸಿಯ ಗಾಯ್ ಘಾಟ್ ಪ್ರದೇಶದಲ್ಲಿ ಅಮಿತ್ ಶರ್ಮಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕಾಳಿ ದೇವಿಯು ತನಗೆ ಕಾಣಿಸಿಕೊಳ್ಳುತ್ತಾಳೆ ಎಂಬ ಮೌಢ್ಯಕ್ಕೆ ಒಳಗಾಗಿದ್ದ ಶರ್ಮಾ ನಿರಂತರವಾಗಿ 24 ಗಂಟೆಗಳ ಕಾಲ ಪೂಜೆಗಳನ್ನು ಮಾಡಿದ್ದರು. ಆದರೆ, ಯಾವ ದೇವಿಯೂ ಪ್ರತ್ಯಕ್ಷವಾಗಿಲ್ಲ. ಹೀಗಾಗಿ, ಅವರ ಪತ್ನಿ ಮನೆಯಲ್ಲಿ ಇಲ್ಲದಿದ್ದ ಸಮಯದಲ್ಲಿ ಕತ್ತು ಕೊಯ್ಡುಕೊಂಡಿದ್ದಾರೆ. ಶರ್ಮಾ ಅವರ ಪತ್ನಿ ಮನೆಗೆ ಬಂದಾಗ ಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನ ಕಂಡು, ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಆ ವೇಳೆಗಾಗಲೇ ಶರ್ಮಾ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಜೂಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
