ಎನ್ ಚಂದ್ರಬಾಬು ನಾಯ್ಡು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ತೆಲಂಗಾಣದ ಮಾಜಿ ರಾಜ್ಯಪಾಲರಾದ ತಮಿಳಿಸೈ ಸೌಂದರಾರಾಜನ್ ಅವರ ನಡುವೆ ನಡೆದ ಮಾತುಕತೆ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕ್ಯಾಮೆರಾದಲ್ಲಿ ಸೆರೆಯಾಗಿರುವಂತೆ ಮಾಜಿ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ವೇದಿಕೆಯಲ್ಲಿದ್ದ ಎಲ್ಲ ಗಣ್ಯರಿಗೂ ನಮಸ್ಕರಿಸುತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ನಮಸ್ಕರಿಸಿದ್ದಾರೆ. ನಮಸ್ಕರಿಸಿ ಹೋಗುತ್ತಿದ್ದ ತಮಿಳಿಸೈ ಅವರನ್ನು ವಾಪಸ್ ಕರೆದ ಅಮಿತ್ ಶಾ ಎಚ್ಚರಿಕೆ ನೀಡುವ ರೀತಿಯಲ್ಲಿ ಕೈತೋರಿಸಿ ಗಂಭಿರವಾಗಿ ಮಾತನಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಇವರಿಬ್ಬರ ನಡುವಿನ ಸಂಭಾಷಣೆ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ.
ಅಮಿತ್ ಶಾ ಅವರು ತಮಿಳಿಸೈ ಅವರೊಂದಿಗೆ ಮಾತನಾಡುವಾಗ ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡ, ನಿತಿನ್ ಗಡ್ಕರಿ ಪಕ್ಕದಲ್ಲೇ ಕುಳಿತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಸಂಪುಟದಲ್ಲಿ ಬಲಾಢ್ಯರು ಮುಂದಕ್ಕೆ, ಹಿಂದುಳಿದವರು ಹಿಂದಕ್ಕೆ
ಈ ಘಟನೆಯನ್ನು ಕೆಲವರು ತಮಿಳುನಾಡು ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಒಳಜಗಳಗಳ ಬಗ್ಗೆ ಸಂಬಂಧ ಕಲ್ಪಿಸಿದ್ದಾರೆ. ಇತ್ತೀಚಿನ ಕೆಲವು ದಿನಗಳಲ್ಲಿ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಹಾಗೂ ತಮಿಳಿಸೈ ಸೌಂದರರಾಜನ್ ಅವರ ಬೆಂಬಲಿಗರು ಪರಸ್ಪರ ವಿರೋಧಿಸುವ ಹೇಳಿಕೆ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಮುಂದೆ ಈ ರೀತಿ ಆಗದಂತೆ ತಮಿಳಿಸೈ ಅವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಸಂಪುಟದಲ್ಲಿ ಬಲಾಢ್ಯರು ಮುಂದಕ್ಕೆ, ಹಿಂದುಳಿದವರು ಹಿಂದಕ್ಕೆ
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ತಮಿಳುನಾಡಿನ ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ,” ಯಾವ ರೀತಿಯ ರಾಜಕೀಯವಿದು? ತಮಿಳುನಾಡಿನ ಮಹಿಳಾ ರಾಜಕಾರಣಿಗೆ ಸಾರ್ವಜನಿಕವಾಗಿ ಛೀಮಾರಿ ಹಾಕುವುದು ಸೌಜನ್ಯವೆ? ಅಮಿತ್ ಶಾ ಅವರಿಗೆ ಎಲ್ಲರು ಇದನ್ನು ನೋಡುತ್ತಾರೆ ಎಂಬುದು ಗೊತ್ತಿದೆ. ಇದೊಂದು ಕೆಟ್ಟ ನಿದರ್ಶನ” ಎಂದು ಹೇಳಿದ್ದಾರೆ.
ತಮಿಳುನಾಡಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಸ್ಥಾನವನ್ನು ಗಳಿಸಲಿಲ್ಲವಾದ ಕಾರಣ ಎರಡೂ ಬಣದ ನಾಯಕರ ಬೆಂಬಲಿಗರು ಪಕ್ಷದ ಸೋಲಿಗೆ ಒಬ್ಬರನ್ನೊಬ್ಬರನ್ನು ಹೊಣೆ ಮಾಡುತ್ತಿದ್ದಾರೆ. ತಮಿಳಿಸೈ ಕೂಡ ಚುನಾವಣೆ ಸೋಲಿಗೆ ಅಣ್ಣಾಮಲೈ ಅವರನ್ನು ದೂರಿದ್ದರು.
This lady Tamilisai went against #Annamalai anna and gave fuel to the media as well. Guess what happens now? Home Minister Amit Shah Ji is giving her warning in public. I felt happy to see this video.pic.twitter.com/gvctVDN0u5
— Esha Srivastav🇮🇳🚩 (@EshaSanju15) June 12, 2024
