ವಿಡಿಯೋ | ಈ ರಸ್ತೆ ನೋಡಿದ್ರೆ ಕರುಳು ಕಿತ್ತು ಬರುತ್ತೆ ಕಂಡ್ರೀ…!

Date:

Advertisements

ಇತ್ತೀಚಿನ ದಿನಗಳಲ್ಲಿ ಕಳಪೆ ಕಾಮಗಾರಿಗಳ ಸುದ್ದಿಗಳೇ ಹೆಚ್ಚು ಸದ್ದು ಮಾಡುತ್ತಿವೆ. ದೇಶದ ನಾನಾ ಭಾಗಗಳಲ್ಲಿ ರಸ್ತೆ, ಸೇತುವೆ, ಕಟ್ಟಡ ಸೇರಿದಂತೆ ಎಲ್ಲ ಕಾಮಕಾರಿಗಳೂ ಕಳಪೆಯಾಗುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ. ಇದೇ ಸಮದಯಲ್ಲಿ, ವ್ಯಕ್ತಿಯೊಬ್ಬರು ಹೊಸದಾಗಿ ನಿರ್ಮಿಸಲಾಗಿರುವ ರಸ್ತೆಯ ಮಧ್ಯೆ ಕುಳಿತು, ಡಾಂಬರನ್ನು ಬರಿಗೈನಲ್ಲೇ ಕಿತ್ತುಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳಪೆ ಕಾಮಗಾರಿಯ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋ, ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಬಿಲೋಲಿ ತಾಲೂಕಿನದ್ದು ಎಂದು ವರದಿಯಾಗಿದೆ. ಆ ರಸ್ತೆಯು ದುಗಾಂವ್‌ ಮತ್ತು ಡೊಂಗರ್‌ಗಾಂವ್‌ ನಡುವೆ ಸಂಪರ್ಕ ಒದಗಿಸುತ್ತದೆ. ರಸ್ತೆಯನ್ನು ಒಂದು ತಿಂಗಳ ಹಿಂದೆಯಷ್ಟೇ ನಿರ್ಮಾಣ ಮಾಡಲಾಗಿತ್ತು. ಈಗ ರಸ್ತೆಯ ಡಾಂಬರು ಬರಿಗೈನಲ್ಲೇ ತೆಗೆದರೂ ಕಿತ್ತುಬರುತ್ತಿದೆ. ರಸ್ತೆಯು ಸೀಳು ಬಿಟ್ಟು, ಕಿತ್ತುಹೋಗುತ್ತಿದೆ ಎಂಬುದು ಕಂಡುಬಂದಿದೆ. ಕಳಪೆ ಕಾಮಗಾರಿಗೆ ಕನ್ನಡಿ ಹಿಡಿದಿದೆ.

ಕಿತ್ತುಬರುವ ಡಾಂಬರಿನ ಕೆಳಭಾಗದಲ್ಲಿ ಕಲ್ಲುಗಳ ಪದರವು ಕಾಣಿಸುತ್ತದೆ. ರಸ್ತೆ ನಿರ್ಮಾಣದಲ್ಲಿ ಕಡಿಮೆ ಡಾಂಬರು ಬಳಸಿಲಾಗಿದೆ. ಡಾಂಬರು ಹಾಕುವುದಕ್ಕೂ ಮುನ್ನ ರಸ್ತೆಯ ಬೇಸ್‌ ಲೇಯರ್‌ಅನ್ನು ಸರಿಯಾಗಿ ಹದಗೊಳಿಸಿಲ್ಲ. ಸಂಪೂರ್ಣ ಕಳಪೆ ಕಾನಗಾರಿ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Advertisements

ಮಹಾರಾಷ್ಟ್ರದಲ್ಲಿ ಮೂಲಸೌಕರ್ಯಗಳ ಕಳಪೆ ಕಾಮಗಾರಿ ಬೆಳಕಿಗೆ ಬಂದಿರುವುದು ಇದೇ ಮೊದಲೇನೂ ಅಲ್ಲ. 2023ರ ಆರಂಭದಲ್ಲಿ, ಜಲ್ನಾ ಜಿಲ್ಲೆಯ ಗ್ರಾಮಸ್ಥರು ಇದೇ ರೀತಿ ಹೊಸದಾಗಿ ನಿರ್ಮಿಸಲಾದ ರಸ್ತೆಯ ಮೇಲ್ಭಾಗವನ್ನು ಕೈನಲ್ಲೇ ಕಿತ್ತುಹಾಕಿದ್ದರು. ಡಾಂಬರಿನ ಕೆಳಭಾಗದಲ್ಲಿ ಬಟ್ಟೆಗಳು ಇದ್ದದ್ದನ್ನು ತಗೆದು ತೋರಿಸಿದ್ದರು. ಅದರೂ ಕೂಡ ಕಳಪೆ ಕಾಮಗಾರಿ ಫಲವಾಗಿತ್ತು.

ಈ ಲೇಖನ ಓದಿದ್ದೀರಾ?; ಬ್ರಿಟನ್ ಮತ್ತು ಫ್ರಾನ್ಸ್ ಮಧ್ಯಪ್ರಾಚ್ಯವನ್ನು ಹೇಗೆ ವಸಾಹತುಗೊಳಿಸಿದವು

ಅಂದಹಾಗೆ, ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಅಧಿಕಾರದಲ್ಲಿದೆ. ಮೋದಿ ಅವರು ಭ್ರಷ್ಟಾಚಾರ ನಡೆಯಲು ಬಿಡುವುದೇ ಇಲ್ಲ. ನಾನೂ ತಿನ್ನಲ್ಲ-ತಿನ್ನೋಕೂ ಬಿಡಲ್ಲ ಎಂದು 2014ರಲ್ಲಿ ಅಬ್ಬರದ ಆಶ್ವಾಸನೆ ನೀಡಿದ್ದರು. ಆದರೆ, ಮೋದಿ ಅವರ ಬಿಜೆಪಿಯೇ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ಹೊಸ ರಸ್ತೆಗಳು ಕಿತ್ತುಬರುತ್ತಿವೆ. ಇದು ಮಹಾರಾಷ್ಟ್ರದ ಕತೆ ಮಾತ್ರವಲ್ಲ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಅಡಿಯಲ್ಲಿ ನಿರ್ಮಿಸಲಾಗುವ ಹಲವಾರು ಮೂಲಸೌಕರ್ಯಗಳು ಕಳಪೆ ಗುಣಮಟ್ಟದಲ್ಲಿವೆ ಎಂಬುದು ದೇಶಾದ್ಯಂತ ಕಂಡುಬಂದಿದೆ. ಇದಕ್ಕೆ ಹಲವಾರು ನಿದರ್ಶನಗಳಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X