ಕುಸ್ತಿಪಟು ವಿನೇಶ್ ಫೋಗಟ್ ಅವರು ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. “ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ” ಎಂದು ರೈತರಿಗೆ ಫೋಗಟ್ ಭರವಸೆ ನೀಡಿದ್ದಾರೆ. ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಯು ಶನಿವಾರ 200ನೇ ದಿನಕ್ಕೆ ಕಾಲಿರಿಸಿದೆ. 200ನೇ ದಿನದಂದು ಫೋಗಟ್ ರೈತರ ಜೊತೆ ಸೇರಿದ್ದಾರೆ.
ದೆಹಲಿಗೆ ತೆರಳಲು ಪೊಲೀಸರು ತಡೆದ ಬಳಿಕ ಫೆಬ್ರವರಿ 13ರಿಂದ ರೈತರು ಶಂಭು ಗಡಿಯಲ್ಲಿ ಠಿಕಾಣಿ ಹೂಡಿದ್ದಾರೆ. ಪ್ರತಿಭಟನಾಕಾರರು ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ಜೊತೆಗೆ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಿದ್ದಾರೆ.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿನೇಶ್ ಫೋಗಟ್, “ನಿಮ್ಮ ಆಂದೋಲನ ಇಂದಿಗೆ 200 ದಿನಗಳನ್ನು ಪೂರೈಸಿದೆ. ನಿಮ್ಮ ಹಕ್ಕು, ನ್ಯಾಯ ನಿಮಗೆ ಸಿಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ. ನಾವೂ ಸಹ ಈ ದೇಶದ ಪ್ರಜೆಗಳು, ನಾವು ಪ್ರತಿ ಬಾರಿಯೂ ದನಿ ಎತ್ತಿದರೆ ಅದು ರಾಜಕೀಯವಲ್ಲ. ಸರ್ಕಾರ ಬೇಡಿಕೆಯನ್ನು ಕೇಳಬೇಕು” ಎಂದು ಹೇಳಿದರು.
ಇದನ್ನು ಓದಿದ್ದೀರಾ? ನನ್ನ ಹೋರಾಟ ಕೊನೆಗೊಂಡಿಲ್ಲ, ಈಗಷ್ಟೇ ಶುರುವಾಗಿದೆ: ವಿನೇಶ್ ಫೋಗಟ್
ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಫೋಗಟ್, “ರೈತರ ಪ್ರತಿಭಟನೆ 200 ದಿನ ಪೂರೈಸಿದೆ. ಕಳೆದ ಬಾರಿ 13 ತಿಂಗಳ ಕಾಲ ಪ್ರತಿಭಟನೆ ಮುಂದುವರಿದಿತ್ತು. ಸರ್ಕಾರ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ್ದರೂ ಇನ್ನೂ ಈಡೇರಿಸಿಲ್ಲ ಎಂಬ ಕಾರಣಕ್ಕೆ ರೈತರು ಇಲ್ಲಿಯೇ ಕುಳಿತಿದ್ದಾರೆ. ಇದು ಬಹಳ ಬೇಸರ ತಂದಿದೆ” ಎಂದರು.
#WATCH | At the farmers' protest site at Shambhu border, Olympian wrestler Vinesh Phogat says, "Your agitation completes 200 days today. I pray to God that you get what you have come here for – your right, for justice…Your daughter stands with you. I also urge the Government.… pic.twitter.com/nUlkaTT399
— ANI (@ANI) August 31, 2024
“ಅವರೂ ಕೂಡಾ ದೇಶದ ಪ್ರಜೆಗಳು, ದೇಶವನ್ನು ನಡೆಸುತ್ತಾರೆ. ಅವರು ಇಲ್ಲದೆ ನಾವು ಏನೂ ಅಲ್ಲ. ಅವರು ನಮಗೆ ಆಹಾರವನ್ನು ನೀಡದಿದ್ದರೆ, ನಾವು ವಿಶ್ವ ವೇದಿಕೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ನಮ್ಮ ಸ್ವಂತ ಕುಟುಂಬಕ್ಕಾಗಿ ನಾವು ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ದುಃಖವಿದೆ” ಎಂದು ವಿನೇಶ್ ಫೋಗಟ್ ಬೇಸರ ವ್ಯಕ್ತಪಡಿಸಿದರು.
“ನಾನು ರೈತ ಕುಟುಂಬದಲ್ಲಿ ಹುಟ್ಟಿದ್ದು ನನ್ನ ಅದೃಷ್ಟ. ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ನಮ್ಮ ಹಕ್ಕುಗಳಿಗಾಗಿ ನಾವು ನಿಲ್ಲಬೇಕು. ಯಾಕೆಂದರೆ ಬೇರೆ ಯಾರೂ ಕೂಡಾ ನಮ್ಮ ಪರವಾಗಿ ಮಾತನಾಡಲು ಬರಲ್ಲ. ನಿಮ್ಮ ಬೇಡಿಕೆ ಈಡೇರದೆ ನೀವು ಹಿಂಜರಿಯಬೇಡಿ” ಎಂದು ತಿಳಿಸಿದರು.
VIDEO | "The farmers protest has completed 200 days. Last time, the protest continued for 13 months. They are sitting here because the government had said that the demands will be met, but it is yet to happen. It feels sad… they are also country's citizens. Farmers run the… pic.twitter.com/5YAVVhhNBP
— Press Trust of India (@PTI_News) August 31, 2024
