‘ಸ್ಕ್ವಿಡ್ ಗೇಮ್ಸ್-2’ ವೆಬ್ ಸೀರಿಸ್‌ನ ಹಾಡು ಹಾಕಿಕೊಂಡು ಮೂವರು ಯುವಕರು ಕಾರಿನಲ್ಲಿ ಹುಚ್ಚಾಟ ಪ್ರದರ್ಶಿಸಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಆ ಯುವಕರು ಬಿಜೆಪಿ ಕಾರ್ಯಕರ್ತರು ಎಂದು ಹೇಳಲಾಗಿದೆ. ಯುವಕರಿಗೆ ಪೊಲೀಸರು 33,000 ರೂ. ದಂಡ ವಿಧಿಸಿದ್ದಾರೆ.
ದೆಹಲಿ ನೋಂದಾಯಿತ ಕಾರಿನಲ್ಲಿ ಬಿಜೆಪಿ ಬಾಟುವ ಹಾಕಿಕೊಂಡಿದ್ದು, ಓರ್ವ ಯುವಕ ಕಾರಿನ ವಿಂಡ್‌ಶೀಲ್ಡ್ ಮೇಲೆ ಕುಳಿತಿದ್ದರೆ, ಇನ್ನಿಬ್ಬರು ಕಾರಿನ ಬಾಗಿಲುಗಳ ಬಳಿ ನೇತು ಹಾಕಿಕೊಂಡು ಸ್ಟಂಟ್ ಮಾಡಿಕೊಂಡು, ಕಾರನ್ನು ಚಲಾಯಿಸಿದ್ದಾರೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ, ಯುವಕರು ‘ಸ್ಕ್ವಿಡ್ ಗೇಮ್ಸ್’ ಸೀಸನ್ 2 ವೆಬ್ ಸೀರಿಸ್‌ನ ‘ರೌಂಡ್ ಅಂಡ್ ರೌಂಡ್’ ಹಾಡನ್ನು ಹಾಕಿಕೊಂಡು ರಸ್ತೆಯಲ್ಲಿ ಸುತ್ತುವುದು ಕಂಡುಬಂದಿದೆ.
📍Noida | #Watch: Three Men Perform Stunt On Toyota Fortuner, Fined Rs 33,000
— NDTV (@ndtv) January 4, 2025
Read more: https://t.co/FphKj1k7Bx pic.twitter.com/w8J4yreND0
ಸಂಚಾರ ನಿಯಮಗಳನ್ನು ಉಲ್ಲಂಘಿಸಿ, ರಸ್ತೆಯಲ್ಲಿ ಹುಚ್ಚಾಟ ಮೆರೆದ ಯುವಕರಿಗೆ ನೋಯ್ಡಾ ಪೊಲೀಸರು ದಂಡ ವಿಧಿಸಿದ್ದಾರೆ.
ಅಪಾಯಕಾರಿ ಚಾಲನೆ, ಕಾನೂನು ಉಲ್ಲಂಘನೆ, ವಿಮೆ ಇಲ್ಲದೆ ಚಾಲನೆ, ಟಿಂಟೆಡ್ ಗ್ಲಾಸ್ ಮತ್ತು ಸೀಟ್ ಬೆಲ್ಟ್ ಧರಿಸದೇ ಇರುವ ಕಾರಣಕ್ಕಾಗಿ ವಾಹನ ಮಾಲೀಕರಿಗೆ ದಂಡ ವಿಧಿಸಿದ್ದು, ಚಲನ್‌ಗಳನ್ನು ನೀಡಿದ್ದಾರೆ.