ಕಳೆದ ಕೆಲವು ತಿಂಗಳುಗಳಿಂದ ಫಾರ್ಮ್ ಕಳೆದುಕೊಂಡಿದ್ದಾರೆಂದು ಅಭಿಮಾನಿಗಳು ಕೊಹ್ಲಿ ಮೇಲೆ ಬೇಸರಗೊಂಡಿದ್ದರು. ಇದೀಗ, ಕೊಹ್ಲಿ ಮರಳಿ ಫಾರ್ಮ್‌ಗೆ ಬಂದಿದ್ದಾರೆ. ತಮ್ಮ ವಿರಾಟ ದರ್ಶನ ತೋರುತ್ತಿದ್ದಾರೆ. ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.
2025ರ ಐಪಿಎಲ್‌ನಲ್ಲಿ ಆಡಿರುವ 7 ಪಂದ್ಯಗಳ ಪೈಕಿ ಆರ್‌ಸಿಬಿ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಅಂತೆಯೇ, ಕೊಹ್ಲಿ 4 ಅರ್ಧ ಶತಕ ಗಳಿಸಿದ್ದಾರೆ. ಐಪಿಎಲ್ 18 ಟೂರ್ನಿಗಳಲ್ಲಿ ಒಟ್ಟು 67 ಅರ್ಧ ಶತಕ ಬಾರಿಸುವ ಮೂಲಕ ದಾಖಲೆ ಬರೆದಿದ್ದಾರೆ. ದೇವಿಡ್ ವಾರ್ನರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಡೇವಿಡ್ ವಾರ್ನರ್ ಅವರು ಐಪಿಎಲ್‌ನಲ್ಲಿ 66 ಅರ್ಧ ಶತಕ ಗಳಿಸಿದ್ದರು. ಹೆಚ್ಚು ಅರ್ಧ ಶತಕ ಬಾರಿಸಿದ ಕ್ರಿಕೆಟಿಗ ಎಂಬ ಖ್ಯಾತಿ ಪಡೆದಿದ್ದರು. ಇದೀಗ, ಅವರ ದಾಖಲೆಯನ್ನು ಮುರಿದಿರುವ ಕೊಹ್ಲಿ, ಅರ್ಧ ಶತಕಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ಮೊದಲಾಗಿಸಿಕೊಂಡಿದ್ದಾರೆ.
ಭಾನುವಾರ, ಪಂಜಾಬ್‌ನ ಮುನ್ನನ್ ಪುರ ಕ್ರೀಡಾಂಗಣದಲ್ಲಿ ಪಂಜಾಬ್ ಜೊತೆ ನಡೆದ ಆರ್‌ಸಿಬಿ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೊಹ್ಲಿ, ಔಟಾಗದೇ 54 ಎಸೆತಗಳನ್ನು ಎದುರಿಸಿ 73 ರನ್ ಬಾರಿಸಿದರು. ಈ ಪೈಕಿ, 43ನೇ ಎಸೆತವನ್ನು ಎದುರಿಸುವ ವೇಳೆಗೆ 50 ರನ್‌ಗಳನ್ನು ಬಾರಿಸಿದ್ದರು.
ಪಂದ್ಯದಲ್ಲಿ ಗಮನಾರ್ಹ ಎಂಬಂತೆ, ಒಂದು ಬಾಲ್‌ಗೆ ಬ್ಯಾಟ್ ಬೀಸಿದ ಕೊಹ್ಲಿ, ಭರ್ಜರಿ 4 ರನ್ ಓಡಿದರು. ಅವರಿಗೆ ದೇವದತ್ ಪಡಿಕಲ್ ಸಾಥ್ ಕೊಟ್ಟರು.
ಭಾನುವಾರದ ಪಂಜಾಬ್ ಮತ್ತು ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ 6 ವಿಕೆಟ್ ನಷ್ಟದೊಂದಿಗೆ 157 ರನ್ ಗಳಿಸಿತ್ತು. ಪಂಹಾಬ್ ನೀಡಿದ ಸವಾಲಿನ ಬೆನ್ನತ್ತಿದ ಆರ್‌ಸಿಬಿ ಇನ್ನೂ 7 ಬಾಲ್‌ಗಳು ಉಳಿದಿರುವಾಗಲೇ 3 ವಿಕೆಟ್ ನಷ್ಟದೊಂದಿಗೆ 159 ರನ್ ಗಳಿಸಿ, ಗೆದ್ದು ಬೀಗಿತು.