ವಿದ್ಯುನ್ಮಾನ ಮತ ಯಂತ್ರ ವ್ಯವಸ್ಥೆಯ ವಿವಿಪ್ಯಾಟ್ ಮೂಲಕ ಮತಚೀಟಿ ಕಲ್ಪಿಸುವ ಅರ್ಜಿ ಹಾಗೂ ಗುಪ್ತ ಮತಪತ್ರ ವ್ಯವಸ್ಥೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು.
“60ರ ದಶಕದಲ್ಲಿ ಇದ್ದ ನಮಗೆ ಮತಪತ್ರ ವ್ಯವಸ್ಥೆಯಿಂದ ಏನು ಉಂಟಾಗಿತ್ತು ಎಂಬುದು ಗೊತ್ತಿದೆ. ನಿಮಗೂ ಗೊತ್ತಿರಬಹುದು ಆದರೆ ನಾವು ಅದನ್ನು ಮರೆತಿಲ್ಲ” ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಅರ್ಜಿದಾರರ ಮನವಿಗೆ ತೀಕ್ಷವಾಗಿ ಪ್ರತಿಕ್ರಿಯೆ ನೀಡಿದರು.
“ನಾವು ಮತಪತ್ರ ವ್ಯವಸ್ಥೆಗೆ ಮರಳಬೇಕಾಗುತ್ತದೆ. ಇನ್ನೊಂದು ಆಯ್ಕೆ ಎಂದರೆ ಮತದಾರರ ಕೈಗೆ ವಿವಿಪ್ಯಾಟ್ ಮೂಲಕ ಮತಚೀಟಿಯನ್ನು ನೀಡಬೇಕಾಗುತ್ತದೆ. ಇಲ್ಲದಿದ್ದರೆ ಚೀಟಿಯು ಯಂತ್ರದೊಳಗೆ ಬೀಳುತ್ತದೆ ಅದನ್ನು ಮತದಾರರಿಗೆ ನೀಡಿ ಅವರು ಮತ್ತೆ ಮತಯಂತ್ರಕ್ಕೆ ಹಾಕಬೇಕಾಗುತ್ತದೆ” ಎಂದು ನ್ಯಾಯಮೂರ್ತಿಗಳು ಮುಂದಿನ ವ್ಯವಸ್ಥೆಯ ಗಂಭೀರತೆಯ ಬಗ್ಗೆ ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?
ಅರ್ಜಿದಾರರೊಬ್ಬರು ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 1ರಂದು ಸುಪ್ರೀಂ ಕೋರ್ಟ್ ಕೇಂದ್ರ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡುವಂತೆ ನಿರ್ದೇಶಿಸಿತ್ತು.
ವಿವಿಧ ರಾಜಕೀಯ ಪಕ್ಷಗಳು ಹಾಗೂ ಕಾರ್ಯಕರ್ತರು ಎತ್ತಿರುವ ಗಂಭೀರ ಕಾಳಜಿಯು ಭವಿಷ್ಯದ ಚುನಾವಣೆಗಳಲ್ಲಿ ಪಾರದರ್ಶಕತೆ ಹೆಚ್ಚಿಸುವ ಹಾದಿಗೆ ಸುಗಮವಾಗಲಿದೆ. ಮತದಾರರು ಪರಿಶೀಲಿಸುವ ಮತ್ತು ಮತ ಎಣಿಸುವ ಹಾದಿಯಲ್ಲಿನ ಬದಲಾವಣೆಗಳಿಗೆ ಗಮನಾರ್ಹ ಫಲಿತಾಂಶ ದೊರಕಿಸುವುದು ಈ ಅರ್ಜಿಯ ಉದ್ದೇಶವಾಗಿದೆ.
ಸ್ವಯಂ ಸೇವಾ ಸಂಸ್ಥೆ ಎಡಿಆರ್, ನಾಗರಿಕ ಕಾರ್ಯಕರ್ತ ಅರುಣ್ ಕುಮಾರ್ ಅಗರ್‌ವಾಲ್ ವಿವಿಪ್ಯಾಟ್ ಚೀಟಿಗಳು ಮತದಾರರ ಕೈಗೆ ತಲುಪಿಸುವ ವ್ಯವಸ್ಥೆ ಮತಯಂತ್ರದಲ್ಲಿ ದೊರಕಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಮುಂದಿನ ವಿಚಾರಣೆಯನ್ನು ಗುರುವಾರ(ಏ.18)ಕ್ಕೆ ಮುಂದೂಡಲಾಯಿತು.
