ಪಶ್ಚಿಮ ಬಂಗಾಳ | ಟಿಎಂಸಿ ಶಾಸಕಾಂಗ ಸಭೆಗೆ 60 ಶಾಸಕರು ಗೈರು; ಮಮತಾ ಪಕ್ಷಕ್ಕೆ ಪಕ್ಷಾಂತರದ ಭೀತಿ?

Date:

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ಬೆನ್ನಲ್ಲೇ ಟಿಎಂಸಿಯಲ್ಲಿ ಭಾರೀ ತಲ್ಲಣ ಸೃಷ್ಟಿಯಾಗಿದೆ. ಪಕ್ಷದ ಉನ್ನತ ನಾಯಕಿ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ನಡೆಯಬೇಕಿದ್ದ ನೂತನ ಶಾಸಕರ ಮೊದಲ ಮಹತ್ವದ ಶಾಸಕಾಂಗ ಪಕ್ಷದ ಸಭೆಯೇ ರದ್ದಾಗಿದೆ. ಭಾನುವಾರ ಕರೆಯಲಾಗಿದ್ದ ಪಕ್ಷದ ಶಾಸಂಕಾಂಗ ಸಭೆಗೆ ಒಟ್ಟು 80 ನೂತನ ಶಾಸಕರ ಪೈಕಿ ಬರೋಬ್ಬರಿ 60 ಮಂದಿ ಶಾಸಕರು ಸಭೆಗೆ ಗೈರುಹಾಜರಾಗಿದ್ದಾರೆ. ಪರಿಣಾಮ, ಸಭೆಯನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ. ಇದು, ಟಿಎಂಸಿ ಕೋಟೆಯಲ್ಲಿ ಬಿರುಕು ಮೂಡಿರುವುದನ್ನು ತೋರುತ್ತಿದೆ.

- Advertisement -

ಮಮತಾ ಬ್ಯಾನರ್ಜಿ ಅವರ ಕಾಲಿಘಾಟ್ ನಿವಾಸದಲ್ಲಿ ನಿಗದಿಯಾಗಿದ್ದ ಸಭೆಗೆ ಕೇವಲ 20 ಶಾಸಕರು ಮಾತ್ರ ಬಂದಿದ್ದರಿಂದ ಪಕ್ಷ ಮುಖಭಂಗ ಅನುಭವಿಸಿದೆ. ಆದರೆ, ಈ ಗೈರುಹಾಜರಿಯನ್ನು ಸಮರ್ಥನೆ ನೀಡಿರುವ ಟಿಎಂಸಿ ವಕ್ತಾರ ಕುನಾಲ್ ಘೋಷ್: “ಅಭಿಷೇಕ್ ಬ್ಯಾನರ್ಜಿ ಅವರ ಮೇಲಿನ ಹಲ್ಲೆಯ ನಂತರ ರಾಜ್ಯಾದ್ಯಂತ ಕಾರ್ಯಕರ್ತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದರಲ್ಲಿ ಮತ್ತು ಬಂಧಿತ ಕಾರ್ಯಕರ್ತರಿಗೆ ನೆರವಾಗುವುದರಲ್ಲಿ ನಿರತರಾಗಿದ್ದಾರೆ. ಹೀಗಾಗಿಯೇ ಅವರು ಸಭೆಯನ್ನು ಮುಂದೂಡುವಂತೆ ಕೋರಿದ್ದರು” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಆದರೆ, ಕೇವಲ ಪ್ರತಿಭಟನೆಯ ನೆಪವೊಡ್ಡಿ ಮುಕ್ಕಾಲು ಪಾಲು ಶಾಸಕರು (75%) ಸಭೆಯಿಂದ ದೂರ ಉಳಿದಿರುವುದು ಪಕ್ಷದ ಹೈಕಮಾಂಡ್ ಮೇಲಿನ ಅಸಮಾಧಾನವನ್ನು ಎತ್ತಿ ತೋರಿಸುತ್ತದೆ ಎಂಬುದು ರಾಜಕೀಯ ಪಂಡಿತರ ವಾದ.

ಇತ್ತೀಚೆಗಷ್ಟೇ, ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಮತಾರ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಅಭಿಷೇಕ್ ಬ್ಯಾನರ್ಜಿ ಅವರು ಚುನಾವಣೋತ್ತರ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಈ ವೇಳೆ, ಸೋನಾರ್‌ಪುರದಲ್ಲಿ ಅವರ ಮೇಲೆ ಭೀಕರ ಹಲ್ಲೆ ನಡೆದಿದೆ. ಈ ಬೆನ್ನಲ್ಲೇ,  ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಮೇಲೂ ಹಲ್ಲೆಗಳು ನಡೆದಿವೆ.

ಈ ಸರಣಿ ದಾಳಿಗಳು ಟಿಎಂಸಿ ಶಾಸಕರಲ್ಲಿ ಭಾರಿ ಆತಂಕ ಮೂಡಿಸಿವೆ. ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಹೊಸ ಬಿಜೆಪಿ ಸರ್ಕಾರದ ಬಿಗಿ ಹಿಡಿತ ಮತ್ತು ತಳಮಟ್ಟದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಪರಿಸ್ಥಿತಿಯನ್ನು ಕಂಡು ಟಿಎಂಸಿ ಶಾಸಕರು ಒಳಗೊಳಗೆ ನಡುಗುತ್ತಿದ್ದಾರೆ ಎನ್ನಲಾಗಿದೆ. ಹಿರಿಯ ನಾಯಕರು, ಸಂಸದರಿಗೇ ರಕ್ಷಣೆ ಇಲ್ಲದಂತಾಗಿರುವಾಗ, ಸಾಮಾನ್ಯ ಶಾಸಕರ ಸ್ಥಿತಿ ಏನು ಎಂಬ ‘ಬಿಜೆಪಿ ಕುರಿತಾದ ಭೀತಿ’ ಟಿಎಂಸಿ ಶಾಸಕರನ್ನು ಕಾಡತೊಡಗಿದೆ.

ಬಂಗಾಳದಲ್ಲಿ 15 ವರ್ಷಗಳ ಟಿಎಂಸಿ ಆಡಳಿತ ಅಂತ್ಯಗೊಂಡು ಬಿಜೆಪಿ ಐತಿಹಾಸಿಕ ಜಯ ದಾಖಲಿಸಿದ ನಂತರ, ಟಿಎಂಸಿ ಶಾಸಕರು ತಮ್ಮ ರಾಜಕೀಯ ಭವಿಷ್ಯದ ಹಿತದೃಷ್ಟಿಯಿಂದ ಸುರಕ್ಷಿತ ತಾಣಗಳನ್ನು ಹುಡುಕುತ್ತಿದ್ದಾರೆ. ಜೊತೆಗೆ, ಚುನಾವಣಾ ಸೋಲಿಗೆ ಪಕ್ಷದ ಉನ್ನತ ನಾಯಕತ್ವದ ತಪ್ಪು ನಿರ್ಧಾರಗಳೇ ಕಾರಣ ಎಂದು ಹಲವು ಶಾಸಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ.

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿ ಅಧಿಕಾರ ಬದಲಾವಣೆಯಾದಾಗಲೆಲ್ಲ ಹಳೇ ರಾಜಕೀಯ ಸೇಡು ಮತ್ತು ಹಿಂಸಾಚಾರ ಮುನ್ನೆಲೆಗೆ ಬರುತ್ತದೆ. 2011ರಲ್ಲಿ ಪಶ್ಚಿಮ ಬಂಗಾಳದಲ್ಲಿ 34 ವರ್ಷಗಳ ಸುದೀರ್ಘ ಕಮ್ಯುನಿಸ್ಟ್ (CPI-M) ಆಡಳಿತವನ್ನು ಅಂತ್ಯಗೊಳಿಸಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮೊದಲ ಬಾರಿಗೆ ಅಧಿಕಾರ ಹಿಡಿದಾಗ, ಇಡೀ ರಾಜ್ಯ ಭೀಕರ ರಾಜಕೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು.

 ಅಧಿಕಾರಕ್ಕೆ ಬಂದ ತಕ್ಷಣ ಟಿಎಂಸಿ ಕಾರ್ಯಕರ್ತರು ಎಡಪಕ್ಷಗಳ ಕಚೇರಿಗಳನ್ನು ಧ್ವಂಸಗೊಳಿಸಿದರು. ಸಿಪಿಐಎಂ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು.  ಬಂಗಾಳದ ಗ್ರಾಮೀಣ ಭಾಗಗಳಲ್ಲಿ ಎಡಪಕ್ಷಗಳ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಹಲ್ಲೆಗಳು ನಡೆದಿದ್ದವು. ಪ್ರಾಣಭಯದಿಂದಾಗಿ ಸಾವಿರಾರು ಸಿಪಿಐಎಂ ಕಾರ್ಯಕರ್ತರು ತಮ್ಮ ಹಳ್ಳಿಗಳನ್ನು ತೊರೆದು ಬೇರೆ ರಾಜ್ಯಗಳಿಗೆ ಪಲಾಯನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅಂದು ಟಿಎಂಸಿ ಸರ್ಕಾರವು ಇಡೀ ಎಡಪಕ್ಷಗಳ ಸಾಂಘಿಕ ಶಕ್ತಿಯನ್ನೇ ಧೂಳೀಪಟ ಮಾಡಲು ಹಿಂಸಾಚಾರವನ್ನು ಒಂದು ಅಸ್ತ್ರವಾಗಿ ಬಳಸಿತ್ತು ಎಂಬ ಗಂಭೀರ ಆರೋಪಗಳಿದ್ದವು. ಆಗ, ಸಿಪಿಐಎಂ ಅನುಭವಿಸಿದ್ದ ಅದೇ ‘ರಾಜಕೀಯ ದಮನ ಮತ್ತು ಭೀತಿ’ಯನ್ನು ಇಂದು ಟಿಎಂಸಿ ಕೂಡ ಅನುಭಸುವಂತಾಗಿದೆ. ಅಂದು ಎಡಪಕ್ಷಗಳನ್ನು ಬಂಗಾಳದಿಂದ ಬೇರುಸಹಿತ ಕಿತ್ತೊಗೆಯಲು ಟಿಎಂಸಿ ಬಳಸಿದ ತಂತ್ರಗಳನ್ನೇ, ಇಂದು ಅವರ ವಿರುದ್ಧವೇ ಬಿಜೆಪಿ ಬಳಸುತ್ತಿದೆ.

ಇದೆಲ್ಲದರ ನಡುವೆ, ಸಭೆಗೆ ಗೈರಾಗಿರುವ 60 ಶಾಸಕರ ಪೈಕಿ ಒಂದು ದೊಡ್ಡ ಗುಂಪು ಈಗಾಗಲೇ ಬಿಜೆಪಿಯ ಹಿರಿಯ ನಾಯಕರೊಂದಿಗೆ ರಹಸ್ಯ ಮಾತುಕತೆ ನಡೆಸುತ್ತಿದೆ. ಸದ್ಯದಲ್ಲೇ ಟಿಎಂಸಿ ಶಾಸಕರ ‘ಮಹಾ ಪಕ್ಷಾಂತರ’ ನಡೆದರೂ ಅಚ್ಚರಿಯಿಲ್ಲ ಎಂಬ ಚರ್ಚೆ ಗ್ರಾಸವಾಗಿದೆ.

ಈ ಲೇಖನ ಓದಿದ್ದೀರಾ?: ಸಾಲುಸಾಲು ಸವಾಲು ಗೆಲ್ಲಲು ‘ಇಮೇಜ್’ ಬದಲಾಯಿಸಿಕೊಳ್ಳಬಲ್ಲರೆ ‘ಡಿಕೆಶಿ’?

ಸದ್ಯಕ್ಕೆ ಪಕ್ಷಾಂತರಿಗಳನ್ನು ಸೇರಿಸಿಕೊಳ್ಳುವ ಸಾಧ್ಯತೆಯನ್ನು ಬಿಜೆಪಿ ನಾಯಕತ್ವ ತಳ್ಳಿಹಾಕಿದೆಯಾದರೂ, ಸೂಕ್ತ ಸಮಯದಲ್ಲಿ ಟಿಎಂಸಿಯನ್ನು ಸಂಪೂರ್ಣವಾಗಿ ಧೂಳೀಪಟ ಮಾಡಲು ರಾಜಕೀಯ ತಂತ್ರಗಾರಿಕೆ ರೂಪಿಸುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ.

ಅಭಿಷೇಕ್ ಬ್ಯಾನರ್ಜಿ ಮೇಲಿನ ಹಲ್ಲೆಯನ್ನು ಖಂಡಿಸಿ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಜೂನ್ 2 ರಂದು ನಡೆಯಲಿರುವ ಈ ಪ್ರತಿಭಟನಾ ರ್‍ಯಾಲಿಗಳಲ್ಲಿ ಎಷ್ಟು ಜನ ಶಾಸಕರು ಭಾಗವಹಿಸುತ್ತಾರೆ ಎಂಬುದರ ಮೇಲೆ ಟಿಎಂಸಿಯ ಭವಿಷ್ಯ ನಿರ್ಧಾರವಾಗಲಿದೆ. ಒಟ್ಟಿನಲ್ಲಿ, ಶಾಸಕರ ಈ ಸಾಮೂಹಿಕ ಗೈರುಹಾಜರಿಯು ಪಶ್ಚಿಮ ಬಂಗಾಳದಲ್ಲಿ ಶೀಘ್ರದಲ್ಲೇ ಮತ್ತೊಂದು ದೊಡ್ಡ ರಾಜಕೀಯ ಬದಲಾವಣೆಗೆ ಮುನ್ನುಡಿ ಬರೆಯುವ ಎಲ್ಲ ಲಕ್ಷಣಗಳನ್ನು ತೋರುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...