ಪ್ರಧಾನಿಯಾಗಿ ಯೂಟ್ಯೂಬರ್ ಧ್ರುವ್ ರಾಠಿ; ದೇಶದಲ್ಲಿ ಏನೆಲ್ಲ ಬದಲಾವಣೆ ಅತ್ಯಗತ್ಯ?

Date:

Advertisements

ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ತಾನು ಈ ದೇಶದ ಪ್ರಧಾನಿಯಾದರೆ ಯಾವೆಲ್ಲ ಯೋಜನೆಗಳಿಗೆ ಆದ್ಯತೆ ನೀಡುತ್ತೇನೆ ಮತ್ತು ಯಾವೆಲ್ಲ ಕಾರ್ಯಗಳನ್ನು ಮಾಡುತ್ತೇನೆ ಎಂಬ ಬಗ್ಗೆ ವಿಡಿಯೋವೊಂದನ್ನು ಪ್ರಕಟಿಸಿದ್ದಾರೆ. ಆ ಮೂಲಕ ನಿಜವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಬೇಕಾದ ಕಾರ್ಯವೇನು ಎಂಬುವುದನ್ನು ತಿಳಿಸಿದ್ದಾರೆ. ದೇಶದ ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಹೂಡಿಕೆ ಅತ್ಯಗತ್ಯ ಎಂಬುವುದನ್ನು ಒತ್ತಿ ಹೇಳಿದ್ದಾರೆ.

ಆರು ವಿಷಯಗಳಲ್ಲಿ ದೇಶಕ್ಕೆ ಶಾಂತಿ ಬೇಕಿದೆ ಎಂದು ರಾಠಿ ಹೇಳಿದ್ದಾರೆ; ಅವರ ಮಾತುಗಳ ಕನ್ನಡಾನುವಾದ ಇಲ್ಲಿದೆ:

ನಾವೆಲ್ಲರು ತಿಳಿದಿರುವಂತೆ ಯಾವುದೇ ದೇಶದಲ್ಲಿಯೂ ಶಾಂತಿ ಮತ್ತು ಸಮೃದ್ಧಿ ಅತೀ ಮುಖ್ಯವಾಗುತ್ತದೆ. ಈ ಶಾಂತಿಗಾಗಿ ಮೊದಲನೆಯದಾಗಿ ಗಡಿಯಲ್ಲಿ ಸುರಕ್ಷತೆಯು ಅತ್ಯಗತ್ಯ. ಅದಾದ ನಂತರ ಎರಡನೆಯದಾಗಿ ಮುಖ್ಯವಾಗುವುದು ಭಯೋತ್ಪಾದನೆಯಿಂದ ರಕ್ಷಣೆ.

Advertisements

2001ರಲ್ಲಿ ಭಾರತೀಯ ಸಂಸತ್ ದಾಳಿ, 2008ರಲ್ಲಿ ಮುಂಬೈ ಉಗ್ರರ ದಾಳಿ, 2015ರಲ್ಲಿ ಗುರುದಾಸ್‌ಪುರ ಉಗ್ರರ ದಾಳಿ, 2019ರಲ್ಲಿ ಪುಲ್ವಾಮಾ ದಾಳಿ, 2023ರಲ್ಲಿ ಜೈಪುರ ಮುಂಬೈ ಎಕ್ಸ್‌ಪ್ರೆಸ್ ಉಗ್ರರ ದಾಳಿ, ಇತ್ತೀಚೆಗೆ ರಿಯಾಸಿ ಉಗ್ರರ ದಾಳಿ – ಹೀಗೆ ಹಲವಾರು ಭಯೋತ್ಪಾದನಾ ದಾಳಿಗಳು ನಮ್ಮ ದೇಶದಲ್ಲಿ ನಡೆಯುತ್ತಿದೆ.

ಕಳೆದ ಐದು ವರ್ಷದಲ್ಲಿ ಜಮ್ಮು ಕಾಶ್ಮೀರದಲ್ಲಿ 761 ಭಯೋತ್ಪಾದನ ದಾಳಿ ನಡೆದಿದ್ದು, ಈ ದಾಳಿಯಲ್ಲಿ 174 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಗೃಹ ಸಚಿವಾಲಯದ ಅಂಕಿಅಂಶ ಹೇಳುತ್ತದೆ. ಇಂತಹ ಎಲ್ಲ ದಾಳಿಗಳಿಂದ ರಕ್ಷಣೆ ಅಗತ್ಯವಾಗಿದೆ.

ಮೂರನೆಯದಾಗಿ ದಂಗೆ, ಕೋಮು ಸಂಘರ್ಷಗಳು. 2020ರಲ್ಲಿ ದೆಹಲಿಯಲ್ಲಾದ ದಂಗೆಯನ್ನು ನಾವು ಮರೆಯುವಂತಿಲ್ಲ. ಸರ್ಕಾರದ ಡೇಟಾ ಪ್ರಕಾರ 2017ರಿಂದ 2021ರವರೆಗೆ ಐದು ವರ್ಷದ ಅವಧಿಯಲ್ಲಿ 2900ಕ್ಕೂ ಹೆಚ್ಚು ಕೋಮು ಸಂಘರ್ಷ ಪ್ರಕರಣಗಳು ದಾಖಲಾಗಿದೆ. ಈ ಕೋಮು ಸಂಘರ್ಷದಿಂದಲೂ ನಮಗೆ ಶಾಂತಿ ಬೇಕಿದೆ.

ನಾಲ್ಕನೆಯದಾಗಿ ಧರ್ಮದ ಹೆಸರಲ್ಲಿ, ಜಾತಿ ಹೆಸರಿನಲ್ಲಿ, ವಾಟ್ಸಾಪ್‌ನಲ್ಲಿ ವೈರಲ್ ಆಗುವ ವದಂತಿಯಿಂದಾಗಿ ನಡೆಯುವ ಗುಂಪು ಹತ್ಯೆಗೆ (mob lynching) ಕಡಿವಾಣ ಹಾಕುವ ಕ್ರಮ ಪ್ರಧಾನಿಯಾದವರು ಕೈಗೊಳ್ಳಬೇಕಾಗಿದೆ. ಐದನೆಯದಾಗಿ ಅಪರಾಧ ಪ್ರಕಣಗಳು. 2022ರ ಎನ್‌ಸಿಆರ್‌ಬಿ ಡೇಟಾ ಪ್ರಕಾರ ನಮ್ಮ ದೇಶದಲ್ಲಿ ಐದು ವರ್ಷದ ಅವಧಿಯಲ್ಲಿ 28,522 ಹತ್ಯೆ ಪ್ರಕರಣಗಳು ದಾಖಲಾಗಿದೆ. ಪ್ರತಿ ದಿನ 78 ಕೊಲೆ ಪ್ರಕರಣ ದಾಖಲಾಗಿದೆ.

ಐದನೆಯದು, ಹಿಟ್‌ ಆಂಡ್ ರನ್, ರೋಡ್ ರೇಜ್‌ ಕೇಸ್‌ಗಳು. ಸರ್ಕಾರದ ಮಾಹಿತಿ ಪ್ರಕಾರ ದೇಶದಲ್ಲಿ 2022ರಲ್ಲಿ 67,387 ಹಿಟ್ ಆಂಡ್ ರನ್ ಪ್ರಕರಣಗಳು ದಾಖಲಾಗಿದೆ. ಈ ಪೈಕಿ 30 ಸಾವಿರಕ್ಕೂ ಹೆಚ್ಚು ಪ್ರಕರಣದಲ್ಲಿ ಜನರು ಸಾವನ್ನಪ್ಪಿದ್ದಾರೆ.

ಆರನೆಯದಾಗಿ, ಅಪಘಾತ ಪ್ರಕರಣಗಳು. ವರದಿ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ ದಿನ ಇಬ್ಬರು ಚರಂಡಿಗುಂಡಿ, ಹಳ್ಳಕ್ಕೆ ಬಿದ್ದು ಸಾವನಪ್ಪುತ್ತಿದ್ದಾರೆ. ಎನ್‌ಸಿಆರ್‌ಬಿ ಡೇಟಾ ಪ್ರಕಾರ 2015ರಿಂದ 2020ರ ನಡುವೆ ಒಟ್ಟಾಗಿ 5,393 ಜನರು ಚರಂಡಿಗುಂಡಿ, ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಇನ್ನು ರೈಲು ಅಪಘಾತದ ಬಗ್ಗೆ ನೀವು ಆಗಾಗೆ ಸುದ್ದಿ ಓದುತ್ತಿರುತ್ತೀರಿ. ಕಳೆದ ವರ್ಷದಲ್ಲೇ ಅತೀ ಭಯಾನಕ ರೈಲು ಅಪಘಾತ ಒಡಿಶಾದಲ್ಲಿ ನಡೆದಿದ್ದು ಸುಮಾರು 296 ಜನರು ಸಾವನ್ನಪ್ಪಿದ್ದಾರೆ.

ಇದನ್ನು ಓದಿದ್ದೀರಾ?   ಪತ್ನಿ ಪಾಕಿಸ್ತಾನಿ, ದಾವೂದ್ ಬಂಗಲೆಯಲ್ಲಿ ವಾಸ ಎಂಬ ಆರೋಪಕ್ಕೆ ಧ್ರುವ್ ರಾಠಿ ತಕ್ಕ ಉತ್ತರ

ಇನ್ನು 2023ರಲ್ಲಿ ರೈಲ್ವೆ ಹಳಿ ದಾಟುವಾಗ ಮಾಡುವಾಗ ನಡೆದ ಅಪಘಾತದಲ್ಲಿ 2,590 ಮಂದಿ ಸಾವನ್ನಪ್ಪಿದ್ದಾರೆ. ಇದು ಬರೀ ಮುಂಬೈನ ಲೋಕಲ್ ರೈಲ್ವೆ ಡೇಟಾ ಆಗಿದೆ. ಹೀಗೆ ಸೇತುವೆ ಕುಸಿದು, ಕಲಬೆರಕೆ ಮದ್ಯ ಸೇವಿಸಿ, ನಕಲಿ ಔಷಧಿಯಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ.

ಸಾಮಾನ್ಯ ಜನರ ಜೀವಕ್ಕೆ ಬೆಲೆ ಇಲ್ಲವೇ?

ಹೀಗೆಲ್ಲ ಆಗುವಾಗ ಓರ್ವ ಸಾಮಾನ್ಯ ಜನರ ಜೀವಕ್ಕೆ ಬೆಲೆ ಇಲ್ಲವೇ ಎಂಬ ಆಲೋಚನೆ ಬರುತ್ತದೆ. ಪ್ರಧಾನಿಯಾದವರ ಪ್ರಾಣಕ್ಕೆ ಎಷ್ಟು ಬೆಲೆ ಇರುತ್ತದೆಯೋ ಅಷ್ಟೆ ಬೆಲೆ ಸಾಮಾನ್ಯ ಜನರ ಜೀವಕ್ಕೂ ಇರಬೇಕು. ನಮಗೆ ಸಮಾನತೆಯ ಹಕ್ಕು ನಮ್ಮ ಸಂವಿಧಾನ ನೀಡುತ್ತದೆ. ಸಂವಿಧಾನ ಪ್ರಕಾರವಾಗಿ ಎಲ್ಲ ಜನರಿಗೂ ಸಮಾನತೆ ಇರಬೇಕು.

ನೀವು ವೈದ್ಯರ ಬಳಿ ಹೋದಾಗ ಅವರು ಮೊದಲು ನಿಮ್ಮ ಪರೀಕ್ಷೆ ಮಾಡಿ ಏನಾಗಿದೆ ಎಂದು ತಿಳಿದು ಬಳಿಕ ನಿಮಗೆ ಮದ್ದು ನೀಡುತ್ತಾರೆ. ಅದೆ ರೀತಿ ನಾವು ಒಂದು ಸಮಸ್ಯೆಯನ್ನು ಬಗೆಹರಿಸಬೇಕಾದರೆ ಆ ಸಮಸ್ಯೆ ಹೇಗೆ ಹುಟ್ಟಿಕೊಂಡಿದೆ ಎಂಬುವುದನ್ನು ತಿಳಿಯಬೇಕಾಗುತ್ತದೆ. ಮೊದಲು ಸಮಸ್ಯೆಯನ್ನು ತಿಳಿಯಬೇಕು, ಬಳಿಕ ಅದನ್ನು ಒಪ್ಪಿಕೊಳ್ಳಬೇಕು. ಅದಾದ ಬಳಿಕ ಬಗೆಹರಿಸುವ ಪ್ರಯತ್ನ ಮಾಡಬೇಕು. ಇವೆಲ್ಲವುದರ ನಡುವೆ ನಾವು ಸಮಸ್ಯೆ ಸೃಷ್ಟಿಯಾದ ಬಳಿಕ ಪರಿಹಾರ ಹುಡುಕುವ ಬದಲಾಗಿ ಆ ಸಮಸ್ಯೆಯೇ ಉಂಟಾಗದಂತೆ ನೋಡಿಕೊಳ್ಳವುದು ಉತ್ತಮ ಅಲ್ವ?

ಗಡಿ ವಿಚಾರದಲ್ಲಿ ಮುನ್ನೆಚ್ಚರಿಕೆ ಕ್ರಮ

ಗಡಿ ವಿಚಾರಕ್ಕೆ ಬಂದಾಗ ಮೊದಲನೆಯದಾಗಿ ನಾವು ಪರಿಣಾಮಕಾರಿ ವಿದೇಶಾಂಗ ನೀತಿಯನ್ನು ಜಾರಿ ಮಾಡಬೇಕು. ನೆರೆ ಹೊರೆಯ ದೇಶದೊಂದಿಗೆ ಉತ್ತಮ ಸಂಬಂಧ ಹೊಂದಿರಬೇಕು.
ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವ್ರ “ನಾವು ನಮ್ಮ ಸ್ನೇಹಿತರನ್ನು ಆಯ್ಕೆ ಮಾಡಬಹುದು ಆದ್ರೆ ನೆರೆಹೊರೆಯವರನ್ನು ಆಯ್ಕೆ ಮಾಡಲಾಗದು” ಎಂಬ ಮಾತನ್ನು ನಾವು ನೆನಪಿಸಿಕೊಳ್ಳಬಹುದು.

ಇದನ್ನು ಓದಿದ್ದೀರಾ?  ಯೂಟ್ಯೂಬರ್ ಧ್ರುವ್ ರಾಠಿ ವೀಡಿಯೋ ಬಳಸಿಕೊಂಡು ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತ!

ನಾವು ಗಡಿ ಸಂಘರ್ಷವನ್ನು ತಡೆಯಬೇಕಾದರೆ ನೆರೆಹೊರೆಯ ದೇಶದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳುವು ಮುಖ್ಯವಾಗುತ್ತೆ. ಆದರೆ ಉತ್ತಮ ಸಂಬಂಧ ಬೆಳೆಸಿಕೊಳ್ಳಲು ಸಾಧ್ಯವಾಗದಿದ್ದರೆ ಯಾವುದೇ ಸಂದರ್ಭದಲ್ಲಿಯೂ ದಾಳಿ ಎದುರಿಸಲು ಸಜ್ಜಾಗುವಂತಹ ಕ್ರಮ ಅತ್ಯಗತ್ಯ. ಅದಕ್ಕಾಗಿ ಭಾರತೀಯ ಸೇನೆಗೆ ಬೇಕಾದ ಎಲ್ಲ ಸುರಕ್ಷತಾ ಸವಲತ್ತುಗಳನ್ನು ಒದಗಿಸಬೇಕು.

ಯೋಧರ ಮಾನಸಿಕ ಆರೋಗ್ಯ

ಜೊತೆಗೆ ನಮ್ಮ ಯೋಧರ ಮಾನಸಿಕ ಆರೋಗ್ಯದ ಕಡೆಗೂ ಗಮನ ನೀಡಬೇಕಾಗುತ್ತದೆ. 2022ರಲ್ಲಿ ಬಿಡುಗಡೆಯಾದ ಸರ್ಕಾರದ ವರದಿ ಪ್ರಕಾರ ಐದು ವರ್ಷದ ಅವಧಿಯಲ್ಲಿ ದೇಶದಲ್ಲಿ 819 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ತಾನು ದೇಶದ ಪ್ರಧಾನಿಯಾದ್ರೆ ಸುಮಾರು 1800 ಮಾನಸಿಕ ಆರೋಗ್ಯ ತಜ್ಞರನ್ನು ನೇಮಿಸೋದಾಗಿ ಧ್ರುವ್ ರಾಠಿ ಹೇಳಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಹೆಚ್ಚು ವೆಚ್ಚ ಮಾಡುವುದು ಅಗತ್ಯ ಎನ್ನುತ್ತಾರೆ ಧ್ರುವ್ ರಾಠಿ. ತಾನೇನಾದ್ರು ಪ್ರಧಾನಿಯಾದ್ರೆ ಶಿಕ್ಷಣ ಬಜೆಟ್ ಅನ್ನ ನಾಲ್ಕರಿಂದ ಐದು ಪಟ್ಟು ಹೆಚ್ಚಿಸೋದಾಗಿ ಧ್ರುವ್ ರಾಠಿ ಹೇಳುತ್ತಾರೆ. ಅದಕ್ಕಾಗಿ ಕಾರ್ಪೋರೇಟ್ ತೆರಿಗೆ ಹೆಚ್ಚಳ, ಮೊದಲಾದ ಕ್ರಮಗಳನ್ನು ಕೈಗೊಳ್ಳುವುದಾಗಿ ಧ್ರುವ್ ತನ್ನ ವಿಡಿಯೋದಲ್ಲಿ ಹೇಳುತ್ತಾರೆ.

ಕಾರು ಬಳಸುವವರು ಬರೀ ಶೇಕಡ 8ರಷ್ಟು ಜನರು

ಎನ್‌ಎಫ್‌ಎಚ್‌ಎಸ್‌ ವರದಿ ಪ್ರಕಾರ ಶೇಕಡ 8ರಷ್ಟು ಜನರು ಮಾತ್ರ ಕಾರು ಬಳಸುತ್ತಾರೆ. ಶೇಕಡ 50 ಜನರು ಬೈಕ್, ಸ್ಕೂಟರ್, ಸೈಕಲ್ ಬಳಸುತ್ತಾರೆ. ಹಾಗಿರುವಾಗ ಬರೀ ಶೇಕಡ 8ರ ಜನರ ಸಹಾಯಕ್ಕಾಗಿ ಇಷ್ಟೊಂದು ಹಣ ಖರ್ಚು ಮಾಡುವುದು ಎಷ್ಟು ಸರಿ?

ಇವೆಲ್ಲವೂ ಆಗಬೇಕಾದ್ರೆ ಭ್ರಷ್ಟಾಚಾರ ಇರಬಾರದು. ಭ್ರಷ್ಟಾಚಾರಕ್ಕೆ ಪ್ರಮುಖವಾಗಿ ಮೂರು ಕಾರಣ ಇದೆ. ಮೊದಲ ಕಾರಣ ಚೈನ್ ಸಿಸ್ಟಮ್. ಲಂಚ ಪಡೆಯುವ ವ್ಯಕ್ತಿ ತನ್ನ ಮೇಲಾಧಿಕಾರಿಗೆ ಲಂಚದಲ್ಲಿ ಪಾಲು ನೀಡಬೇಕಾಗುತ್ತದೆ. ಆ ಮೇಲಾಧಿಕಾರಿ ತನ್ನ ಮೇಲಾಧಿಕಾರಿಗೆ ಪಾಲು ನೀಡಬೇಕಾಗುತ್ತದೆ. ಹೀಗೆ ಹೋದಾಗ ಕೊನೆಯಲ್ಲಿ ಲಂಚ ಪಡೆಯುವವರು ಮುಖ್ಯಮಂತ್ರಿ ಅಥವಾ ಪ್ರಧಾನಿಯಾಗಿರುತ್ತಾರೆ. ಸಿಎಂ ಅಥವಾ ಪ್ರಧಾನಿ ಆಗಿರುವ ನಮ್ಮ ನಾಯಕರ ನೀಯತ್ತು ಸರಿಯಾಗಿದ್ರೆ ಮಾತ್ರ ಈ ಚೇನ್‌ ಸಿಸ್ಟಮ್ ಅನ್ನ ನಾವು ಕಡಿದು ಹಾಕೋಕೆ ಸಾಧ್ಯವಾಗುತ್ತೆ.

ಇದನ್ನು ಓದಿದ್ದೀರಾ?  ಕನ್ನಡ ಸೇರಿ 5 ಭಾಷೆಗಳಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ

ಭ್ರಷ್ಟಾಚಾರಕ್ಕೆ ಇನ್ನೊಂದು ಕಾರಣ ಪೊಲೀಸ್ ಅಧಿಕಾರಿ ಅಥವಾ ಇತರೆ ಉದ್ಯೋಗಿಗಳಿಗೆ ಇರುವ ಕೆಲಸದ ಒತ್ತಡ ಮತ್ತು ಕಡಿಮೆ ವೇತನ. ನಮ್ಮ ದೇಶದಲ್ಲಿ ಪೊಲೀರನ್ನು ದಿನದ 14-15 ಗಂಟೆ ದುಡಿಸಲಾಗುತ್ತೆ, ಆದರೆ ವೇತನ ಮಾತ್ರ ಸರಿಯಾಗಿ ಸಿಗುವುದಿಲ್ಲ. ಕೋರ್ಟ್‌ ಮತ್ತು ನ್ಯಾಯಾಧೀಶರ ಸ್ಥಿತಿಯೂ ಹೀಗೆಯೇ ಇದೆ. ನ್ಯಾಯಾಧೀಶರ ಮೇಲೆ ಹೊರೆ ಹೆಚ್ಚಾಗಿದೆ. ಭಾರತದ ಮಾಜಿ ಮುಖ್ಯ ನ್ಯಾಯಾಧೀಶರು ತಮ್ಮ ಭಾಷಣವೊಂದರಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇನ್ನು ಮೂರನೇ ಕಾರಣ ದುರಾಸೆ. ಮೊದಲೆರಡು ಕಾರಣಗಳಿಗೆ ಪರಿಹಾರ ಹುಡುಕಿದರೆ ದುರಾಸಯು ಕ್ರಮೇಣ ಕಡಿಮೆಯಾಗುತ್ತದೆ.

ಈ ಎಲ್ಲ ಕ್ರಮಗಳಿಂದಾಗಿ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ದೇಶದ ಎಲ್ಲ ಸರ್ಕಾರಿ ಅಧಿಕಾರಿಗಳಿಗೆ ಪೊಲೀಸರಿಗೆ ಉತ್ತಮ ವೇತನ ಲಭ್ಯವಾಗಲಿದೆ, ಉತ್ತಮ ಆರೋಗ್ಯ ಚಿಕಿತ್ಸೆ ಲಭ್ಯವಾಗಲಿದೆ. ಆರೋಗ್ಯ, ಜೀವ ವಿಮೆ ಲಭ್ಯವಾಗಲಿದೆ. ಎಲ್ಲರಿಗೂ 8 ಗಂಟೆ ಕೆಲಸದ ಅವಧಿ ಇರಲಿದೆ.

ಇನ್ನು ಧ್ರುವ್ ರಾಠಿ ಲೈಂಗಿಕ ಕಿರುಕುಳ, ಅತ್ಯಾಚಾರಕ್ಕೆ ಸಂಬಂಧಿಸಿದ ಮನಸ್ಥಿತಿ ಬಗ್ಗೆಯೂ ಮಾತನಾಡಿದ್ದಾರೆ. ಇದಕ್ಕಾಗಿ ಶಾಲೆಗಳಲ್ಲಿ ಲಿಂಗ ಸೂಕ್ಷ್ಮತೆ ಬಗ್ಗೆ ತರಬೇತಿ ನೀಡುವುದು ಮುಖ್ಯವಾಗುತ್ತದೆ.

ಈ ಎಲ್ಲ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳ ಮೂಲಕ ನಾವು ಭಾರತೀಯರಿಗೆ ಸುರಕ್ಷಿತವಾಗಿರುವ ದೇಶವನ್ನು ಕಟ್ಟುವುದು ಮಾತ್ರವಲ್ಲ, ಪ್ರತಿ ವಿದೇಶಿಗರಿಗೂ ಸುರಕ್ಷಿತವಾಗಿರುವ ದೇಶವನ್ನು ಕಟ್ಟಬಹುದು ಎಂಬುವುದು ಧ್ರುವ್ ರಾಠಿ ವಾದ. ಇದು ವಾಸ್ತವ ಕೂಡಾ ಹೌದು.

ಮೂಲ: ಧ್ರುವ್ ರಾಠಿ ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X