ನನ್ನ ಪತಿ ವಾರಕ್ಕೆ 90 ಗಂಟೆ ಕೆಲಸ ಮಾಡುತ್ತಿದ್ದರು ಎಂದ ಸುಧಾ ಮೂರ್ತಿಗೆ ಹಾಸ್ಯದ ಮೂಲಕ ಶಾದಿ ಡಾಟ್ ಕಾಂ ಸಂಸ್ಥಾಪಕನ ಉತ್ತರ

Date:

Advertisements

ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿದ್ದ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿಕೆಯನ್ನು ಪತ್ನಿ ಸುಧಾ ಮೂರ್ತಿ ಸಮರ್ಥಿಸಿಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿರುವ ಸುಧಾ ಮೂರ್ತಿ, ನಾರಾಯಣ ಮೂರ್ತಿ ವಾರಕ್ಕೆ 80 ರಿಂದ 90 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ. ಹೀಗಾಗಿ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ಎಂದಿದ್ದಾರೆ.

“ಅವರು ವಾರಕ್ಕೆ 80ರಿಂದ 90 ಗಂಟೆ ಕೆಲಸ ಮಾಡಿದ್ದಾರೆ. ಹಾಗಾಗಿ ಅದಕ್ಕಿಂತ ಕಮ್ಮಿ ಏನು ಅನ್ನೋದು ಅವರಿಗೆ ಗೊತ್ತಿಲ್ಲ. ಅವರು ನಿಜವಾದ ದುಡಿಮೆಯನ್ನೇ ನಂಬಿದ್ದಾರೆ, ಅದೇ ರೀತಿ ಬದುಕಿದ್ದಾರೆ. ಹೀಗಾಗಿ ತಮಗೆ ಅನಿಸಿದ್ದನ್ನು ಹೇಳಿದ್ದಾರೆ. ನಮ್ಮ ಪತಿ ತಮ್ಮ ಮಾತಿನಂತೆ ಬದುಕಿದ್ದರು. ಅಲ್ಲದೆ ತಮ್ಮ ಪತಿ ಪ್ಯಾಶನ್‌ ಹಾಗೂ ನಿಜವಾದ ಕಠಿಣ ಪರಿಶ್ರಮವನ್ನು ನಂಬುತ್ತಾರೆ” ಎಂದು ಹೇಳಿದ್ದಾರೆ.

Advertisements

70 ಗಂಟೆ ದುಡಿಮೆಯ ದಂಪತಿಯ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಪೈಕಿ ಕೆಲವರು ಸಮರ್ಥಿಸಿಕೊಂಡಿದ್ದರೆ ಬಹುತೇಕ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ನಡುವೆ ಹಾಸ್ಯ ಚಟಾಕಿಯ ಮೂಲಕ ಉತ್ತರ ನೀಡಿರುವ ವೈವಾಹಿಕ ಅಂತರ್ಜಾಲ ಜಾಲತಾಣ ‘ಶಾದಿ ಡಾಟ್‌ ಕಾಂ’ ಸಂಸ್ಥಾಪಕ ಅನುಪಮ್‌ ಮಿತ್ತಲ್, “ಇಷ್ಟು ವರ್ಷಗಳ ನಂತರವೂ ವಾರಕ್ಕೆ 70 ಗಂಟೆ ದುಡಿಯುತ್ತಿದ್ದಾರೆಯೇ” ಎಂದು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಲ್ಲ ಭಯೋತ್ಪಾದಕರೂ ಮುಸ್ಲಿಮರಲ್ಲ ಎನ್ನುವ ಸತ್ಯವನ್ನು ನಂಬದವರು

ಅನುಪಮ್‌ ಮಿತ್ತಲ್ ಪೋಸ್ಟ್‌ಗೆ ನೆಟ್ಟಿಗರೊಬ್ಬರು ಕಮೆಂಟ್ ಮಾಡಿ, “ನೀವು ಉದ್ಯಮಿ, ಅದಕ್ಕಾಗಿಯೇ ಈ ರೀತಿ ಹೇಳುತ್ತಿದ್ದೀರಿ. ಈಗ ಹೇಳಿ, ನೀವು ಇನ್ಫೋಸಿಸ್ ಅಥವಾ ಇನ್ನಾವುದೇ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರೆ, ಕೆಲಸ ಮಾಡಲು ಒಂದೇ ಕಾರಣವೆಂದರೆ ಹಣ. ಇದು ವಾಣಿಜ್ಯೋದ್ಯಮಿ ಮತ್ತು ಉದ್ಯೋಗಿ ನಡುವಿನ ವ್ಯತ್ಯಾಸ” ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅನುಪಮ್‌, ‘ನಾನು ಒಂದು ಕಾಲದಲ್ಲಿ ಉದ್ಯೋಗಿಯಾಗಿದ್ದೆ. ಆದರೆ ಈಗ ಮಾಡುತ್ತಿರುವಂತೆಯೇ ಆಗಲೂ ನನ್ನ ಉದ್ಯೋಗವನ್ನು ಪ್ರೀತಿಸುತ್ತಿದ್ದೆ’ ಎಂದಿದ್ದಾರೆ.

ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಟಿವಿ ಮೋಹನ್‌ದಾಸ್ ಪೈ ಅವರೊಂದಿಗೆ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದ ನಾರಾಯಣ ಮೂರ್ತಿ, ಯುವಕರಿಗೆ 70 ಗಂಟೆಗಳ ಕೆಲಸದ ವಾರಗಳನ್ನು ಸೂಚಿಸಿದ್ದರು. ಭಾರತದ ಕೆಲಸದ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಿದೆ ಎಂದು ಹೇಳಿದ್ದರು. ಚೀನಾದಂತಹ ದೇಶಗಳೊಂದಿಗೆ ಸ್ಪರ್ಧಿಸಲು, ಭಾರತದ ಯುವಕರು ಹೆಚ್ಚುವರಿ ಗಂಟೆಗಳ ಕೆಲಸವನ್ನು ಮಾಡಬೇಕಾಗುತ್ತದೆ. ಎರಡನೇ ಮಹಾಯುದ್ಧದ ನಂತರ ಜಪಾನ್ ಮತ್ತು ಜರ್ಮನಿ ಮಾಡಿದಂತೆ ಮಾಡಬೇಕಾಗುತ್ತದೆ ಎಂದಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X