ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತನ್ನ ಎಂಟನೇ ಬಜೆಟ್ ಅನ್ನು ಮಂಡಿಸಿದ್ದಾರೆ. 2025-26ನೇ ಸಾಲಿನ ಬಜೆಟ್ ಮಂಡಿಸಿದ ಕೇಂದ್ರ ವಿತ್ತ ಸಚಿವೆ ಮಾಡಿರುವ ಘೋಷಣೆಗಳು ಕೆಲವು ವಸ್ತುಗಳ ಬೆಲೆ ಏರಿಕೆ ಅಥವಾ ಇಳಿಕೆಗೆ ಕಾರಣವಾಗಲಿದೆ.
ಕಳೆದ ಮಧ್ಯಂತರ ಬಜೆಟ್ನಂತೆಯೇ ಈ ಬಜೆಟ್ನಲ್ಲಿಯೂ ಬಿಹಾರದೆಡೆ ಹೆಚ್ಚು ಒಲವನ್ನು ಕೇಂದ್ರ ಸರ್ಕಾರ ತೋರಿದೆ. ಜೊತೆಗೆ ಮಧ್ಯಮವರ್ಗದ ಓಲೈಕೆಗಾಗಿ ಆದಾಯ ತೆರಿಗೆ ವಿನಾಯಿತಿಯನ್ನು ವಿಸ್ತರಿಸಿದೆ.
ಇದನ್ನು ಓದಿದ್ದೀರಾ? ಬಜೆಟ್ 2025 | 36 ಔಷಧಿಗಳಿಗೆ ಸುಂಕ ವಿನಾಯಿತಿ ಘೋಷಣೆ
ಯಾವೆಲ್ಲ ವಸ್ತುಗಳ ಬೆಲೆ ಏರಿಕೆ?
- ಇಂಟರಾಕ್ಟಿವ್ ಫ್ಲಾಟ್ ಪ್ಯಾನೆಲ್ ಡಿಸ್ಪ್ಲೇಯ ಸುಂಕವನ್ನು ಶೇಕಡ 10ರಿಂದ ಶೇಕಡ 20ಕ್ಕೆ ಏರಿಕೆ ಮಾಡಲಾಗಿದೆ.
- ಟೆಲಿಕಾಂ ಉಪಕರಣಗಳ ಮೇಲಿನ ಸುಂಕವನ್ನು ಶೇಕಡ 10ರಿಂದ ಶೇಕಡ 15ಕ್ಕೆ ಹೆಚ್ಚಿಸಲಾಗಿದೆ.
- ಪ್ಲಾಸ್ಟಿಕ್ ಉಪಕರಣಗಳ ಮೇಲಿನ ಕಸ್ಟಮ್ ಸುಂಕವನ್ನು ಶೇಕಡ 25ರಷ್ಟು ಏರಿಸಲಾಗಿದೆ.
ಯಾವೆಲ್ಲ ವಸ್ತುಗಳ ಬೆಲೆ ಇಳಿಕೆ?
- ಮೊಬೈಲ್ ಫೋನ್ಗಳು
- 36 ಔಷಧಿಗಳಿಗೆ ಸುಂಕ ವಿನಾಯಿತಿ
- ಎಲೆಕ್ಟ್ರಿಕ್ ವಾಹನಗಳು
- ಎಲ್ಇಡಿ ಟಿವಿ
- ಸ್ವದೇಶಿ ಬಟ್ಟೆಗಳು
