ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿರುವ ರಾಜಕೀಯ ಪಕ್ಷಗಳ ಚುನಾವಣಾ ಬಾಂಡ್‌ಗಳ ಅಂಕಿಅಂಶವನ್ನು ಸೂಕ್ತ ಸಮಯಕ್ಕೆ ಬಹಿರಂಗಪಡಿಸುವುದಾಗಿ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್, “ ನಾನು ಅಂಕಿಅಂಶಗಳನ್ನು ಪರಿಶೀಲಿಸಿ ಸೂಕ್ತ ಸಮಯಕ್ಕೆ ಬಹಿರಂಗ ಪಡಿಸುತ್ತೇನೆ” ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಸ್ಟೇಟ್ ಬ್ಯಾಂಕ್ ಇಂಡಿಯಾವು ಚುನಾವಣಾ ಬಾಂಡ್‌ಗಳನ್ನು ಚುನಾವಣಾ ಆಯೋಗಕ್ಕೆ ಮಾ.12 ರಂದು ಸಲ್ಲಿಸಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜನರ ಗಮನ ಬೇರೆಡೆಗೆ ಸೆಳೆಯಲು ‘ಸಿಎಎ’ ಮುಂದೆ ಮಾಡಿದ ‘ಮೋಶಾ’
“ಚುನಾವಣಾ ಆಯೋಗವು ಪಾರದರ್ಶಕತೆಯ ಪರವಾಗಿದೆ. ನಾವು ಪಾರದರ್ಶಕತೆಯ ಪರವಾಗಿದ್ದೇವೆ ಎಂದು ಕೋರ್ಟ್‌ಗೆ ತಿಳಿಸಿದ್ದೇವೆ. ಆಯೋಗವು ಚುನಾವಣಾ ಪ್ರಕ್ರಿಯೆಯ ಮೇಲೆ ಏನು ಮಾಡಬೇಕು ಎಲ್ಲವನ್ನು ಕೈಗೊಳ್ಳುತ್ತದೆ. ಸಾರ್ವಜನಿಕರಿಗೆ ಹಾಗೂ ಮತದಾರರಿಗೆ ಎಲ್ಲವನ್ನು ಬಹಿರಂಗಗೊಳಿಸಲಾಗುವುದು. ಆಯೋಗವು ಸದಾ ಪಾರದರ್ಶಕತೆಯ ಪರವಾಗಿರುತ್ತದೆ.ಚುನಾವಣಾ ಬಾಂಡ್‌ಗಳ ವಿಚಾರದಲ್ಲೂ ಕೂಡ ನಾವು ಇದಕ್ಕೆ ಬದ್ಧರಾಗಿರುತ್ತೇನೆ” ಎಂದು ರಾಜೀವ್ ಕುಮಾರ್ ಹೇಳಿದರು.
ಎಸ್‌ಬಿಐ ಮುಖ್ಯಸ್ಥರು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ ಕೆಲವು ಗಂಟೆಗಳ ನಂತರ ರಾಜೀವ್ ಕುಮಾರ್ ಹೇಳಿಕೆ ನೀಡಿದ್ದಾರೆ. ಬಾಂಡ್‌ಗಳ ಅಂಕಿಅಂಶಗಳು ಏಪ್ರಿಲ್ 12 2019ರಿಂದ ಫೆ.15, 2024ರವರೆಗೆ ಒಳಗೊಂಡಿದೆ.
ಏ.1, 2019ರಿಂದ ಫೆ.15, 2024ರವರೆಗೆ ಒಟ್ಟು 22,217 ಬಾಂಡ್‌ಗಳನ್ನು ಒಳಗೊಂಡಿದೆ ಎಂದು ಎಸ್‌ಬಿಐ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.