ನೂತನ ಕೇಂದ್ರ ಸಚಿವ ಸಂಪುಟ: ಯಾರಿಗೆ, ಯಾವ ಖಾತೆ? ಸಂಪೂರ್ಣ ಪಟ್ಟಿ

Date:

Advertisements

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಮೋದಿಯ ಮೂರನೇ ಅವಧಿಯ ಸರ್ಕಾರಕ್ಕೆ ಸೇರ್ಪಡೆಯಾದ ಸಚಿವ ಸಂಪುಟದ 71 ಸಚಿವರಿಗೆ ಸಚಿವಾಲಯಗಳನ್ನು ಹಂಚಿಕೆ ಮಾಡಲಾಗಿದೆ.

ಹೊಸ ಸಚಿವ ಸಂಪುಟದಲ್ಲಿ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಮತ್ತು ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವಾರು ಪ್ರಮುಖರು ಖಾತೆಗಳನ್ನು ಪಡೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತನ್ನ ಬಳಿ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯ, ಅಣುಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆಯನ್ನು ಉಳಿಸಿಕೊಂಡಿದ್ದಾರೆ. ಉಳಿದ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಸಂಪೂರ್ಣ ಸಚಿವರುಗಳು ಪಟ್ಟಿ ಈ ಕೆಳಗಿದೆ.

Advertisements

ಇದನ್ನು ಓದಿದ್ದೀರಾ? ಮೋದಿಯ ಸಚಿವ ಸಂಪುಟ ಸೇರಲಿದ್ದಾರಾ ಮಹಾರಾಷ್ಟ್ರದ ಸಂಸದೆ ರಕ್ಷಾ ಖಡ್ಸೆ?

ಗೃಹ ಸಚಿವಾಲಯ

ಕೇಂದ್ರ ಗೃಹ ಸಚಿವ: ಅಮಿತ್ ಶಾ
ರಾಜ್ಯ ಸಚಿವರು: ನಿತ್ಯನಾದ್ ರೈ, ಬಂಡಿ ಸಂಜಯ್ ಕುಮಾರ್

ಸಹಕಾರ ಸಚಿವಾಲಯ

ಕೇಂದ್ರ ಸಹಕಾರ ಸಚಿವ: ಅಮಿತ್ ಶಾ
ರಾಜ್ಯ ಸಚಿವರು: ಕ್ರಿಶನ್ ಪಾಲ್, ಮುರಳೀಧರ್ ಮೊಹೋಲ್

ರಕ್ಷಣಾ ಸಚಿವಾಲಯ

ಕೇಂದ್ರ ರಕ್ಷಣಾ ಸಚಿವ: ರಾಜನಾಥ್ ಸಿಂಗ್
ರಾಜ್ಯ ಸಚಿವ: ಸಂಜಯ್ ಸೇಠ್

ವಿದೇಶಾಂಗ ಸಚಿವಾಲಯ

ಕೇಂದ್ರ ವಿದೇಶಾಂಗ ಸಚಿವ: ಎಸ್ ಜೈಶಂಕರ್
ರಾಜ್ಯ ಸಚಿವರು: ಕೀರ್ತಿವರ್ಧನ್ ಸಿಂಗ್, ಪಬಿತ್ರಾ ಮಾರ್ಗರಿಟಾ

ಹಣಕಾಸು ಸಚಿವಾಲಯ

ಕೇಂದ್ರ ಹಣಕಾಸು ಸಚಿವೆ: ನಿರ್ಮಲಾ ಸೀತಾರಾಮನ್
ರಾಜ್ಯ ಸಚಿವ: ಪಂಕಜ್ ಚೌಧರಿ

ಕಾರ್ಪೊರೇಟ್ ಸಚಿವಾಲಯ

ಕೇಂದ್ರ ಸಚಿವೆ: ನಿರ್ಮಲಾ ಸೀತಾರಾಮನ್
ರಾಜ್ಯ ಸಚಿವ: ಹರ್ಷ್ ಮಲ್ಹೋತ್ರಾ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಕೇಂದ್ರ ಸಚಿವ: ನಿತಿನ್ ಗಡ್ಕರಿ
ರಾಜ್ಯ ಸಚಿವರು: ಅಜಯ್ ತಮ್ತಾ, ಹರ್ಷ್ ಮಲ್ಹೋತ್ರಾ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೇಂದ್ರ ಆರೋಗ್ಯ ಸಚಿವ: ಜೆಪಿ ನಡ್ಡಾ
ರಾಜ್ಯ ಸಚಿವರು: ಅನುಪ್ರಿಯಾ ಪಟೇಲ್, ಪ್ರತಾಪ್ರಾವ್ ಗಣಪತರಾವ್ ಜಾಧವ್

ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯ

ಕೇಂದ್ರ ಸಚಿವ: ಜೆಪಿ ನಡ್ಡಾ
ರಾಜ್ಯ ಸಚಿವೆ: ಅನುಪ್ರಿಯಾ ಪಟೇಲ್

ಯುವಜನ ಮತ್ತು ಕ್ರೀಡಾ ಸಚಿವಾಲಯ

ಕೇಂದ್ರ ಕ್ರೀಡಾ ಸಚಿವ: ಮನ್ಸುಖ್ ಮಾಂಡವಿಯಾ
ರಾಜ್ಯ ಸಚಿವ: ರಕ್ಷಾ ನಿಖಿಲ್ ಖಡ್ಸೆ

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಕೇಂದ್ರ ಕಾರ್ಮಿಕ ಸಚಿವ: ಮನ್ಸುಖ್ ಮಾಂಡವಿಯಾ
ರಾಜ್ಯ ಸಚಿವರು: ಶೋಭಾ ಕರಂದ್ಲಾಜೆ

ಆಹಾರ ಸಂಸ್ಕರಣಾ ಕೈಗಾರಿಕೆ ಸಚಿವಾಲಯ

ಕೇಂದ್ರ ಸಚಿವ: ಚಿರಾಗ್ ಪಾಸ್ವಾನ್
ರಾಜ್ಯ ಸಚಿವ: ರವನೀತ್ ಸಿಂಗ್

ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ

ಕೇಂದ್ರ ಸಚಿವ: ಶಿವರಾಜ್ ಸಿಂಗ್ ಚೌಹಾಣ್
ರಾಜ್ಯ ಸಚಿವರು: ರಾಮ್ ನಾಥ್ ಠಾಕೂರ್, ಭಗೀರಥ ಚೌಧರಿ

ಗ್ರಾಮೀಣಾಭಿವೃದ್ಧಿ ಸಚಿವಾಲಯ

ಕೇಂದ್ರ ಸಚಿವ: ಶಿವರಾಜ್ ಸಿಂಗ್ ಚೌಹಾಣ್
ರಾಜ್ಯ ಸಚಿವರು: ಡಾ ಚಂದ್ರಶೇಖರ್ ಪೆಮ್ಮಸಾನಿ, ಕಮಲೇಶ್ ಪಾಸ್ವಾನ್

ಇದನ್ನು ಓದಿದ್ದೀರಾ? ಹಿಂದೂ ವಿವಾಹ ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟದಲ್ಲಿ ಅನುಮೋದನೆ: ವಿವಾಹ ನೋಂದಣಿ ಇನ್ನುಮುಂದೆ ಆನ್‌ಲೈನ್

ವಿದ್ಯುತ್ ಸಚಿವಾಲಯ

ಕೇಂದ್ರ ಸಚಿವ: ಮನೋಹರ್ ಲಾಲ್ ಖಟ್ಟರ್
ರಾಜ್ಯ ಸಚಿವರು: ಶ್ರೀಪಾದ್ ನಾಯ್ಕ್

ವಸತಿ ಮತ್ತು ನಗರ ಸಚಿವಾಲಯ

ಕೇಂದ್ರ ಸಚಿವ: ಮನೋಹರ್ ಲಾಲ್ ಖಟ್ಟರ್
ರಾಜ್ಯ ಸಚಿವ: ತೋಖಾನ್ ಸಾಹು

ಪ್ರವಾಸೋದ್ಯಮ ಸಚಿವಾಲಯ

ಕೇಂದ್ರ ಸಚಿವ: ಗಜೇಂದ್ರ ಸಿಂಗ್ ಶೇಖಾವತ್
ರಾಜ್ಯ ಸಚಿವರು: ಸುರೇಶ್ ಗೋಪಿ

ಸಂಸ್ಕೃತಿ ಸಚಿವಾಲಯ

ಕೇಂದ್ರ ಸಚಿವ: ಗಜೇಂದ್ರ ಸಿಂಗ್ ಶೇಖಾವತ್
ರಾಜ್ಯ ಸಚಿವ: ರಾವ್ ಇಂದ್ರಜಿತ್ ಸಿಂಗ್

ಮಾಹಿತಿ ಮತ್ತು ಪ್ರಸಾರ ಸಚಿವಾಲಯ

ಕೇಂದ್ರ ಸಚಿವ: ಅಶ್ವಿನಿ ವೈಷ್ಣವ್
ರಾಜ್ಯ ಸಚಿವ: ಎಲ್ ಮುರುಗನ್

ರೈಲ್ವೆ ಸಚಿವಾಲಯ

ಕೇಂದ್ರ ಸಚಿವ: ಅಶ್ವಿನಿ ವೈಷ್ಣವ್
ರಾಜ್ಯ ಸಚಿವ: ರವನೀತ್ ಸಿಂಗ್, ವಿ ಸೋಮಣ್ಣ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಕೇಂದ್ರ ಸಚಿವ: ಅಶ್ವಿನಿ ವೈಷ್ಣವ್
ರಾಜ್ಯ ಸಚಿವ: ಜಿತಿನ್ ಪ್ರಸಾದ

ನಾಗರಿಕ ವಿಮಾನಯಾನ ಸಚಿವಾಲಯ

ಕೇಂದ್ರ ಸಚಿವರು: ಕಿಂಜರಾಪು ರಾಮಮೋಹನ್ ನಾಯ್ಡು, ಮುರಳೀಧರ್ ಮೊಹೋಲ್

ಶಿಕ್ಷಣ ಸಚಿವಾಲಯ

ಕೇಂದ್ರ ಸಚಿವ: ಧರ್ಮೇಂದ್ರ ಪ್ರಧಾನ್
ರಾಜ್ಯ ಸಚಿವ: ಸುಕಾಂತ ಮಜುಂದಾರ್. ಜಯಂತ್ ಚೌಧರಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಕೇಂದ್ರ ಸಚಿವೆ: ಅನ್ನಪೂರ್ಣ ದೇವಿ
ರಾಜ್ಯ ಸಚಿವರು: ಸಾವಿತ್ರಿ ಠಾಕೂರ್

ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಸಚಿವಾಲಯ

ಕೇಂದ್ರ ಸಚಿವ: ಭೂಪೇಂದ್ರ ಯಾದವ್
ರಾಜ್ಯ ಸಚಿವ: ಕೀರ್ತಿವರ್ಧನ್ ಸಿಂಗ್

ಇದನ್ನು ಓದಿದ್ದೀರಾ? ಸಚಿವ ಸಂಪುಟದಲ್ಲೇ ಮಹಿಳಾ ಪ್ರಾತಿನಿಧ್ಯವಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್‌

ಜಲ ಶಕ್ತಿ ಸಚಿವಾಲಯ

ಕೇಂದ್ರ ಸಚಿವ: ಸಿಆರ್ ಪಾಟೀಲ್
ರಾಜ್ಯ ಸಚಿವರು: ವಿ ಸೋಮಣ್ಣ, ರಾಜ್ ಭೂಷಣ್ ಚೌಧರಿ

ಸಂಸದೀಯ ವ್ಯವಹಾರ ಸಚಿವಾಲಯ

ಕೇಂದ್ರ ಸಚಿವ: ಕಿರಣ್ ರಿಜಿಜು
ರಾಜ್ಯ ಸಚಿವರು: ಎಲ್ ಮುರುಗನ್, ಅರ್ಜುನ್ ರಾಮ್ ಮೇಘವಾಲ್

ಅಲ್ಪಸಂಖ್ಯಾತ ಸಚಿವಾಲಯ

ಕೇಂದ್ರ ಸಚಿವ: ಕಿರಣ್ ರಿಜಿಜು
ರಾಜ್ಯ ಸಚಿವ: ಜಾರ್ಜ್ ಕುರಿಯನ್

ಬೃಹತ್ ಕೈಗಾರಿಕೆ ಸಚಿವಾಲಯ

ಕೇಂದ್ರ ಸಚಿವ: ಎಚ್.ಡಿ.ಕುಮಾರಸ್ವಾಮಿ
ರಾಜ್ಯ ಸಚಿವರು: ಭೂಪತಿ ರಾಜು ಶ್ರೀನಿವಾಸ ವರ್ಮ

ಉಕ್ಕು ಸಚಿವಾಲಯ

ಕೇಂದ್ರ ಸಚಿವ: ಎಚ್.ಡಿ.ಕುಮಾರಸ್ವಾಮಿ
ರಾಜ್ಯ ಸಚಿವರು: ಭೂಪತಿ ರಾಜು ಶ್ರೀನಿವಾಸ ವರ್ಮ

ಸಂವಹನ ಸಚಿವಾಲಯ

ಕೇಂದ್ರ ಸಚಿವ: ಜ್ಯೋತಿರಾದಿತ್ಯ ಸಿಂಧಿಯಾ
ರಾಜ್ಯ ಸಚಿವರು: ಡಾ ಚಂದ್ರಶೇಖರ್ ಪೆಮ್ಮಸಾನಿ

ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ

ಕೇಂದ್ರ ಸಚಿವ: ಜ್ಯೋತಿರಾದಿತ್ಯ ಸಿಂಧಿಯಾ
ರಾಜ್ಯ ಸಚಿವ: ಸುಕಾಂತ ಮಜುಂದಾರ್

ಜವಳಿ ಸಚಿವಾಲಯ

ಕೇಂದ್ರ ಜವಳಿ ಸಚಿವ: ಗಿರಿರಾಜ್ ಸಿಂಗ್
ರಾಜ್ಯ ಮಂತ್ರಿ: ಪಬಿತ್ರಾ ಮಾರ್ಗರಿಟಾ

ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರೀಕ ಸರಬರಾಜು ಸಚಿವಾಲಯ

ಕೇಂದ್ರ ಸಚಿವ: ಪ್ರಹ್ಲಾದ್ ಜೋಶಿ
ರಾಜ್ಯ ಸಚಿವರು: ಬಿಎಲ್ ವರ್ಮಾ, ನಿಮುಬೆನ್ ಜಯಂತಿಭಾಯ್ ಬಂಬಾನಿಯಾ

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ

ಕೇಂದ್ರ ಸಚಿವ: ಪ್ರಹ್ಲಾದ್ ಜೋಶಿ
ರಾಜ್ಯ ಸಚಿವರು: ಶ್ರೀಪಾದ್ ನಾಯ್ಕ್

ಇದನ್ನು ಓದಿದ್ದೀರಾ?  ಸಚಿವ ಸಂಪುಟ ಸಭೆ | ಪಿಎಸ್‌ಐ ಅಕ್ರಮ, ಹೆಚ್ಚುವರಿ ತನಿಖೆಗಾಗಿ ಎಸ್​ಐಟಿ‌ ರಚಿಸಲು ತೀರ್ಮಾನ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಕೇಂದ್ರ ಸಚಿವ: ಹರ್ದೀಪ್ ಸಿಂಗ್ ಪುರಿ
ರಾಜ್ಯ ಸಚಿವರು: ಸುರೇಶ್ ಗೋಪಿ

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯ

ಕೇಂದ್ರ ಸಚಿವ: ಜಿತನ್ ರಾಮ್ ಮಾಂಝಿ
ರಾಜ್ಯ ಸಚಿವರು: ಶೋಭಾ ಕರಂದ್ಲಾಜೆ

ಪಂಚಾಯತ್ ರಾಜ್ ಸಚಿವಾಲಯ

ಕೇಂದ್ರ ಸಚಿವ: ಲಲ್ಲನ್ ಸಿಂಗ್
ರಾಜ್ಯ ಸಚಿವ: ಎಸ್‌ಪಿ ಸಿಂಗ್ ಬಘೇಲ್

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೈರಿ

ಕೇಂದ್ರ ಸಚಿವ: ಲಲ್ಲನ್ ಸಿಂಗ್
ರಾಜ್ಯ ಸಚಿವರು: ಎಸ್‌ಪಿ ಸಿಂಗ್ ಬಾಘೆಲ್, ಜಾರ್ಜ್ ಕುರಿಯನ್

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಕೇಂದ್ರ ಸಚಿವ: ಪಿಯೂಷ್ ಗೋಯಲ್
ರಾಜ್ಯ ಸಚಿವ: ಜಿತಿನ್ ಪ್ರಸಾದ

ಬಂದರುಗಳು, ಜಲಸಾರಿಗೆ ಸಚಿವಾಲಯ

ಕೇಂದ್ರ ಸಚಿವ: ಸರ್ಬಾನಂದ ಸೋನೋವಾಲ್
ರಾಜ್ಯ ಸಚಿವ: ಶಾಂತನು ಠಾಕೂರ್

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಕೇಂದ್ರ ಸಚಿವ: ಡಾ ವೀರೇಂದ್ರ ಕುಮಾರ್
ರಾಜ್ಯ ಸಚಿವರು: ರಾಮದಾಸ್ ಅಠವಳೆ, ಬಿಎಲ್ ವರ್ಮಾ

ಬುಡಕಟ್ಟು ವ್ಯವಹಾರ ಸಚಿವಾಲಯ

ಕೇಂದ್ರ ಸಚಿವ: ಜುಯಲ್ ಓರಾಮ್
ರಾಜ್ಯ ಸಚಿವ: ದುರ್ಗಾದಾಸ್ ಉಯಿಕೆ

ಕಲ್ಲಿದ್ದಲು ಸಚಿವಾಲಯ

ಕೇಂದ್ರ ಸಚಿವ: ಜಿ ಕಿಶನ್ ರೆಡ್ಡಿ
ರಾಜ್ಯ ಸಚಿವರು: ಸತೀಶ್ ಚಂದ್ರ ದುಬೆ

ಗಣಿ ಸಚಿವಾಲಯ

ಕೇಂದ್ರ ಸಚಿವ: ಜಿ ಕಿಶನ್ ರೆಡ್ಡಿ
ರಾಜ್ಯ ಸಚಿವರು: ಸತೀಶ್ ಚಂದ್ರ ದುಬೆ

ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ)

ರಾವ್ ಇಂದ್ರಜಿತ್ ಸಿಂಗ್: ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಮತ್ತು ಸಂಸ್ಕೃತಿ ಸಚಿವಾಲಯ

ಡಾ ಜಿತೇಂದ್ರ ಸಿಂಗ್: ವಿಜ್ಞಾನ, ತಂತ್ರಜ್ಞಾನ ಸಚಿವಾಲಯ ಮತ್ತು ಭೂ ವಿಜ್ಞಾನ ಸಚಿವಾಲಯ

ಅರ್ಜುನ್ ರಾಮ್ ಮೇಘವಾಲ್: ಕಾನೂನು ಮತ್ತು ನ್ಯಾಯ ಸಚಿವಾಲಯ

ಪ್ರತಾಪರಾವ್ ಗಣಪತರಾವ್ ಜಾಧವ್: ಆಯುಷ್ ಸಚಿವಾಲಯ

ಜಯಂತ್ ಚೌಧರಿ: ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X