ಕಾಕ್ರೋಚ್ ಜನತಾ ಪಾರ್ಟಿ ಸೇರಿದ್ದು ಯಾಕೆ? -ಸೋನಮ್ ವಾಂಗ್‌ಚುಕ್ ಹೇಳಿದ್ದು ಇಲ್ಲಿದೆ ನೋಡಿ…

Date:

ಸಾಮಾಜಿಕ ಜಾಲತಾಣದಲ್ಲಿ ಅತಿ ಶೀಘ್ರವಾಗಿ ವೈರಲ್ ಆದ ಒಂದು ವಿಡಂಬನಾತ್ಮಕ ರಾಜಕೀಯ ಚಳವಳಿ ಕಾಕ್ರೋಚ್ ಜನತಾ ಪಾರ್ಟಿಗೆ ಹಲವು ನಾಯಕರ ಬೆಂಬಲ ಸಿಗುತ್ತಿದೆ. ಈಗಾಗಲೇ ಸಿಜೆಪಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ನಿರಂತರ ಪರೀಕ್ಷೆಗಳ ವಿವಾದದಲ್ಲೇ ಮುಳುಗಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ಜೂನ್ 6ರಂದು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಪ್ರತಿಭಟನೆಗೆ ಲಡಾಖ್ ಹೋರಾಟಗಾರ, ಪರಿಸರವಾದಿ ಸೋನಮ್ ವಾಂಗ್‌ಚುಕ್ ಕೂಡಾ ಬೆಂಬಲ ನೀಡಿದ್ದಾರೆ. ಹಾಗೆಯೇ ತಾವು ಕಾಕ್ರೋಚ್ ಜನತಾ ಪಾರ್ಟಿ ಸೇರಿದ್ದು ಯಾಕೆ ಎಂಬ ಬಗ್ಗೆ ವಿವರಣೆ ನೀಡಿದ್ದಾರೆ.

- Advertisement -

ಸೋನಮ್ ವಾಂಗ್‌ಚುಕ್ ಹೇಳುವಂತೆ, ಇಂದಿನ ರಾಜಕೀಯ ವ್ಯವಸ್ಥೆ, ಪರಿಸರ ಮಾಲಿನ್ಯ ಮತ್ತು ಸಮಾಜದ ಗಂಭೀರ ಸಮಸ್ಯೆಗಳನ್ನು ಯುವ ಪೀಳಿಗೆಗೆ ತಲುಪಿಸಲು ಸಾಂಪ್ರದಾಯಿಕ ವಿಧಾನಗಳಿಗಿಂತ ವಿಡಂಬನೆ ಮತ್ತು ಹಾಸ್ಯ ಹೆಚ್ಚು ಪರಿಣಾಮಕಾರಿ. ಗಂಭೀರವಾದ ವಿಷಯಗಳನ್ನು ಲಘುವಾಗಿ, ಆದರೆ ಮಾರ್ಮಿಕವಾಗಿ ಪ್ರಸ್ತುತಪಡಿಸುವ ಈ ವಿಶಿಷ್ಟ ಪ್ರಯತ್ನ ಯುವಕರನ್ನು ಆಕರ್ಷಿಸುತ್ತದೆ. ತಾವು ಮೊದಲ ಬಾರಿಗೆ ಈ ಚಳವಳಿಗೆ ಬೆಂಬಲ ನೀಡಿ “ನಾನು ಗೌರವಾನ್ವಿತ ಜಿರಳೆ” ಎಂದು ಘೋಷಿಸಿಕೊಂಡಾಗಿನಿಂದ ಸೋನಮ್ ಈ ವಿಶಿಷ್ಟ ಪರಿಕಲ್ಪನೆಯನ್ನು ಶ್ಲಾಘಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಉತ್ತರ ಕನ್ನಡ: ಹಾಲಕ್ಕಿಗಳ ಹಾಡು-ಪಾಡು ಮತ್ತು ಮರೀಚಿಕೆಯಾದ ಮೀಸಲಾತಿ

ಹಾಲಕ್ಕಿಗಳಿಗೆ ಪರಿಶಿಷ್ಟ ಪಂಗಡ ಮೀಸಲಾತಿ ಮರೀಚಿಕೆ ಆಗುತ್ತಿದೆ. ಮೀಲಾತಿ ಕೊಡಿಸುವ ಬಣ್ಣ-ಬಣ್ಣದ ಮಾತುಗಳಿಂದ ಹಾಲಕ್ಕಿಗಳ ಮತ ದೋಚಿ ಗೆದ್ದವರು ಕೃತಘ್ನರಾಗಿದ್ದಾರೆ. ಎಸ್ಟಿ ಮೀಸಲಾತಿ ಸೌಲಭ್ಯ ಅಷ್ಟು ಸುಲಭಕ್ಕೆ ಹಾಕ್ಕಿಗಳಿಗೆ ದಕ್ಕಲು ಪ್ರಬಲ ಮೇಲ್ವರ್ಗದ...

ಇದನ್ನು ಓದಿದ್ದೀರಾ? ನೀಟ್ ಸೋರಿಕೆ: ಜೂ.6ರಂದು ನಡೆಯಲಿರುವ ಸಿಜೆಪಿ ಪ್ರತಿಭಟನೆಯಲ್ಲಿ ಸೋನಮ್ ವಾಂಗ್‌ಚುಕ್ ಭಾಗಿ

ಇನ್ನು ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕರಲ್ಲಿ ಒಬ್ಬರಾದ ಸಾಮಾಜಿಕ ಕಾರ್ಯಕರ್ತ ಅಭಿಜೀತ್ ದೀಪ್ಕೆ ಪ್ರಾಮಾಣಿಕತೆಯ ಬಗ್ಗೆಯೂ ವಾಂಗ್‌ಚುಕ್ ಅಪಾರ ಗೌರವ ಹೊಂದಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಹೇಳಿದ್ದಾರೆ. “ಅಭಿಜೀತ್ ದೀಪ್ಕೆ ಒಬ್ಬ ಸಾಚಾ ವ್ಯಕ್ತಿ ಮತ್ತು ನಿಷ್ಕಲ್ಮಶ ದೇಶಪ್ರೇಮಿ. ಅವರ ಆಲೋಚನೆಗಳ ಹಿಂದೆ ಯಾವುದೇ ದುರುದ್ದೇಶಗಳಿಲ್ಲ, ಬದಲಿಗೆ ದೇಶಕ್ಕೆ ಮತ್ತು ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕೆಂಬ ತೀವ್ರ ಹಂಬಲವಿದೆ” ಎನ್ನುತ್ತಾರೆ ಸೋನಮ್ ವಾಂಗ್‌ಚುಕ್.

ಹಾಗೆಯೇ, “ಈ ಸಂಘಟನೆ ಅಥವಾ ಪಕ್ಷದ ಹಿಂದೆ ಯಾವುದೇ ವಿದೇಶಿ ಶಕ್ತಿಗಳಾಗಲಿ, ತಪ್ಪು ಪ್ರೇರಣೆಗಳಾಗಲಿ ಇಲ್ಲ. ಇದು ಸಂಪೂರ್ಣವಾಗಿ ಭಾರತದ ಆಂತರಿಕ ಸಮಸ್ಯೆಗಳನ್ನು ಮತ್ತು ಪರಿಸರ ಕಾಳಜಿಯನ್ನು ಎತ್ತಿಹಿಡಿಯಲು ನಮ್ಮದೇ ಯುವಕರು ಹುಟ್ಟುಹಾಕಿದ ವೇದಿಕೆ” ಎಂದೂ ಸೋನಮ್ ಹೇಳುತ್ತಾರೆ. ಈ ಖಾತೆಯು ಪಾಕಿಸ್ತಾನ ಪ್ರೇರಿತ ಎಂಬ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಸೋನಮ್, ದೀಪ್ಕೆ ಜತೆ ಮಾತನಾಡಿ ಈ ಚಳವಳಿಗೆ ಬೆಂಬಲ ನೀಡಿದ್ದಾರೆ.

ವಾಂಗ್‌ಚುಕ್ ಹೇಳುವಂತೆ ಈ ಚಳವಳಿಯು ಮುಖ್ಯವಾಗಿ ಮೂರು ವಿಷಯಗಳ ಮೇಲೆ ಗಮನ ಹರಿಸುತ್ತದೆ. ಯುವಕರಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದು, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಕೇವಲ ವೀಕ್ಷಕರಾಗದೆ ಪ್ರಶ್ನಿಸುವ ಜಿಜ್ಞಾಸೆ ಬೆಳೆಸಿಕೊಳ್ಳುವುದು, ರಾಜಕೀಯ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ಡೋಂಗಿತನವನ್ನು ಹಾಸ್ಯದ ಮೂಲಕವೇ ತರಾಟೆಗೆ ತೆಗೆದುಕೊಳ್ಳುವುದು. ಈ ಸಂದರ್ಭದಲ್ಲೇ ಈ ಚಳವಳಿಯನ್ನು ಹಿಂಸಾಚಾರಕ್ಕೆ ತಿರುಗದಂತೆ ನೋಡಿಕೊಳ್ಳಲೂ ಸೋನಮ್ ಯುವಕರಲ್ಲಿ ಮನವಿ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನ ಕಲ್ಯಾಣ | ಕೂಡಲಸಂಗಮದೇವಾ, ಮರಣವೆ ಮಹಾನವಮಿ!

ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ. ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ. ಕೇಳು, ಕೂಡಲಸಂಗಮದೇವಾ, ಮರಣವೆ...

ಉತ್ತರ ಕನ್ನಡ: ಹಾಲಕ್ಕಿಗಳ ಹಾಡು-ಪಾಡು ಮತ್ತು ಮರೀಚಿಕೆಯಾದ ಮೀಸಲಾತಿ

ಹಾಲಕ್ಕಿಗಳಿಗೆ ಪರಿಶಿಷ್ಟ ಪಂಗಡ ಮೀಸಲಾತಿ ಮರೀಚಿಕೆ ಆಗುತ್ತಿದೆ. ಮೀಲಾತಿ ಕೊಡಿಸುವ ಬಣ್ಣ-ಬಣ್ಣದ...

ರಸ್ತೆ ತಡೆದು ಪೂಜಾ ಪೆಂಡಾಲ್ ಹಾಕುವಂತಿಲ್ಲ: ಒಡಿಶಾ ಹೈಕೋರ್ಟ್ ಆದೇಶ

ಸಾರ್ವಜನಿಕ ರಸ್ತೆಗಳಲ್ಲಿ ಹಬ್ಬದ ಪೂಜಾ ಪೆಂಡಾಲ್‌ಗಳ ನಿರ್ಮಾಣ ಮತ್ತು ರಸ್ತೆ ಬಂದ್...

ತಮಿಳುನಾಡು | 150 ದಿನ ಉದ್ಯೋಗ ಖಾತರಿ; ಬಡ ಕುಟುಂಬಗಳಿಗೆ ಹೆಚ್ಚುವರಿ ಉದ್ಯೋಗ ಭಾಗ್ಯ

ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಉದ್ಯೋಗ ಖಾತರಿ ಅವಧಿಯನ್ನು 150 ದಿನಗಳಿಗೆ...