ಬಾಗಲಕೋಟೆ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ದಾಟಿ, ಜನರು ಬಿಸಿಲ ಬೇಗೆಗೆ ತತ್ತರಿಸಿದ್ದರು ನಿನ್ನೆ ಸುರಿದ ಮಳೆ ಕೊಂಚ ನಿರಾಳತೆ ತಂದಿದೆ. ಬೀಳಗಿ ತಾಲ್ಲೂಕಿನ ಗಲಗಲಿ , ಅನಗವಾಡಿ, ಸಿದ್ದಾಪುರ, ನಾಗರಾಳ ಮತ್ತು ಬಾದಾಮಿ ತಾಲ್ಲೂಕಿನ ಕೆಲವೆಡೆ ಮಳೆ ತಂಪೆರೆದಿದೆ.
ಬಾದಾಮಿ ತಾಲ್ಲೂಕಿನಲ್ಲಿ ಸತತ ಒಂದು ಗಂಟೆ ನಿರಂತರ ಸುರಿದ ಮಳೆಯಿಂದ ಇಳೆಯ ಕಾವು ಕಡಿಮೆಯಾಗಿದೆ. ತಿಂಗಳ ಹಿಂದೆಯೆ ಗೊಬ್ಬರ, ಬೀಜ ಖರೀದಿಸಿ ಮುಂಗಾರಿನ ಆಗಮನಕ್ಕೆ ಕಾಯ್ದು ಕುಂತಿದ್ದ ರೈತರ ಮೊಗವರಳಿದೆ. ಸದ್ಯ ಇನ್ನೊಂದೆರಡು ಮಳೆಯಾದರೆ ಕೃಷಿ ಚಟುವಟಿಕೆಗೆ ಚಾಲನೆ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಜಿಲ್ಲೆಯಲ್ಲಿ ಇಂದು 30 ಡಿಗ್ರಿ ಗರಿಷ್ಠ ಉಷ್ಣಾಂಷ ದಾಖಲಾಗಿದ್ದು, ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಘುವ ಸಾಧ್ಯತೆಗಳಿದ್ದು, ಗಂಟೆಗೆ 37 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಾಗಲಕೋಟೆ | ಕಾದ ಧರೆಗೆ ಮಳೆಯ ಸಿಂಚನ, ಬಿತ್ತನೆಗೆ ತಯಾರಿ
ಪೋಸ್ಟ್ ಹಂಚಿಕೊಳ್ಳಿ:





